ಬೆಂಗಳೂರು: ಟ್ರಾಫಿಕ್ ಜಾಮ್ ನಲ್ಲಿ ಗ್ರಾಹಕ, ಡೆಲಿವರಿ ಬಾಯ್ ಇಬ್ಬರೂ ಲಾಕ್; ಆದರೂ ಕರೆಕ್ಟ್ ಟೈಂಗೆ ಪಿಜ್ಜಾ ಕೈ ಸೇರಿತು, ಹೇಗೆ?

ಈ ವಾರವಿಡೀ ಬೆಂಗಳೂರು ನಗರದಲ್ಲಿ ಕಾವೇರಿ ನೀರು ವಿಚಾರದಲ್ಲಿ ಗಲಾಟೆ, ಗದ್ದಲ, ಪ್ರತಿಭಟನೆ, ಬಂದ್ ನಿಂದಾಗಿ ಸಾಲು-ಸಾಲು ರಜೆಯಿಂದ ಜನರು ಊರಿಗೆ ಹೋಗುವವರಿಂದಾಗಿ ಬುಧವಾರ ಬೆಂಗಳೂರಿನ ಹೊರವರ್ತುಲ ರಸ್ತೆಯಲ್ಲಿ (ORRಃ ಸಂಚಾರ ದಟ್ಟಣೆಯುಂಟಾಗಿತ್ತು ಎಂಬ ಸುದ್ದಿಯನ್ನು ಓದಿದ್ದೆವು.
ಡೆಲಿವರಿ ಏಜೆಂಟ್ ನಿಲಯ್ ನಾಮಾ
ಡೆಲಿವರಿ ಏಜೆಂಟ್ ನಿಲಯ್ ನಾಮಾ

ಬೆಂಗಳೂರು: ಈ ವಾರವಿಡೀ ಬೆಂಗಳೂರು ನಗರದಲ್ಲಿ ಕಾವೇರಿ ನೀರು ವಿಚಾರದಲ್ಲಿ ಗಲಾಟೆ, ಗದ್ದಲ, ಪ್ರತಿಭಟನೆ, ಬಂದ್ ನಿಂದಾಗಿ ಸಾಲು-ಸಾಲು ರಜೆಯಿಂದ ಜನರು ಊರಿಗೆ ಹೋಗುವವರಿಂದಾಗಿ ಬುಧವಾರ ಬೆಂಗಳೂರಿನ ಹೊರವರ್ತುಲ ರಸ್ತೆಯಲ್ಲಿ (ORRಃ ಸಂಚಾರ ದಟ್ಟಣೆಯುಂಟಾಗಿತ್ತು ಎಂಬ ಸುದ್ದಿಯನ್ನು ಓದಿದ್ದೆವು.

ಇಲ್ಲಿ ಭಾರಿ ಟ್ರಾಫಿಕ್‌ ಜಾಮ್‌ನಲ್ಲಿ ಸಿಕ್ಕಿಹಾಕಿಕೊಂಡ ಡಿಸೈನ್‌ ಮ್ಯಾನೇಜರ್‌ ಒಬ್ಬರು ಆನ್ ಲೈನ್ ನಲ್ಲಿ ಪಿಜ್ಜಾ ಆರ್ಡರ್ ಮಾಡಿ ಅರ್ಧ ಗಂಟೆಯಲ್ಲಿ ಸ್ವೀಕರಿಸಿದ ವಿಡಿಯೋ ನಿನ್ನೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಆದರೆ, ಫುಡ್ ಡೆಲಿವರಿ ಪಾರ್ಟ್‌ನರ್ ಕೂಡ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಂಡಿದ್ದರು. ಪಿಜ್ಜಾ ಅಂಗಡಿಯಿಂದ ಪಿಜ್ಜಾವನ್ನು ಎತ್ತಿಕೊಂಡು ಒಂದು ಕಿ.ಮೀ.ಗೂ ಹೆಚ್ಚು ನಡೆದು ಬಂದ ಇನ್ನೊಬ್ಬ ಡೆಲಿವರಿ ಬಾಯ್ ಸಹಾಯದಿಂದ 30-35 ನಿಮಿಷಗಳಲ್ಲಿ  ಆರ್ಡರ್ ಮಾಡಿದವರಿಗೆ ಟ್ರಾಫಿಕ್ ನಲ್ಲೇ ನೀಡಲು ಸಾಧ್ಯವಾಗಿದೆ. ಮತ್ತೊಬ್ಬ ಡೆಲಿವರಿ ಬಾಯ್ ಗ್ರಾಹಕರ ಲೈವ್ ಸ್ಥಳವನ್ನು ಪತ್ತೆಹಚ್ಚಿ ಭಾರೀ ಟ್ರಾಫಿಕ್‌ನಲ್ಲಿ ಕೊನೆಗೂ ಪಿಜ್ಜಾ ತಲುಪಿಸಿದ್ದಾರೆ. 

ಮೊನ್ನೆ ಬುಧವಾರ ರಾತ್ರಿ, ಔಟರ್ ರಿಂಗ್ ರಸ್ತೆಯಲ್ಲಿ ಭಾರೀ ಟ್ರಾಫಿಕ್‌ನಲ್ಲಿ ಲಕ್ಷಗಟ್ಟಲೆ ವಾಹನಗಳು ಗಂಟೆಗಟ್ಟಲೆ ಸಿಲುಕಿಕೊಂಡಿದ್ದರಿಂದ ರಸ್ತೆ ಜನರು, ವಾಹನಗಳಿಂದ ತುಂಬಿತುಳುಕುತ್ತಿತ್ತು. ಟ್ರಾಫಿಕ್ ಸಮಸ್ಯೆಯನ್ನು ಪರಿಹರಿಸುವಲ್ಲಿ ಸರ್ಕಾರದ ನಿರಾಸಕ್ತಿಯ ವಿರುದ್ಧ ಅನೇಕ ಪ್ರಯಾಣಿಕರು ತಮ್ಮ ಆಕ್ರೋಶವನ್ನು ಹೊರಹಾಕಿದರೆ, ಶಾಪ್ಸಿಯಲ್ಲಿ ಹಿರಿಯ ವಿನ್ಯಾಸ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ರಿಷಿ ವತ್ಸ್ ಎಂಎಸ್ (32ವ) ಅವರು ನಾಲ್ವರು ಸ್ನೇಹಿತರೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಹಸಿವಿನಿಂದ ಪಿಜ್ಜಾ ಆರ್ಡರ್ ಮಾಡಲು ನಿರ್ಧರಿಸಿದರು.

ಅವರು ವಾಹನದಲ್ಲೇ ಕುಳಿತು ಎಂಬಸಿ ಟೆಕ್ ವಿಲೇಜ್‌ನ ಹಿಂದೆ ಸಾಯಂಕಾಲ 6:20 PM ಕ್ಕೆ ಪಿಜ್ಜಾವನ್ನು ಆರ್ಡರ್ ಮಾಡಿದರು. 18 ದಿನಗಳ ಹಿಂದಷ್ಟೇ ಕೆಲಸಕ್ಕೆ ಸೇರಿದ್ದ ಡೆಲಿವರಿ ಏಜೆಂಟ್ ನಿಲಯ್ ನಮ (22ವ) ಅವರಿಗೆ ನಿಗದಿತ ಕಾಲಮಿತಿಯೊಳಗೆ ಪಿಜ್ಜಾ ಡೆಲಿವರಿ ಮಾಡುವ ಕೆಲಸವನ್ನು ವಹಿಸಲಾಗಿತ್ತು.

ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ನಮ, ನಾನು ಗ್ರಾಹಕರ ಸ್ಥಳದಿಂದ 2.5 ಕಿಮೀ ದೂರದಲ್ಲಿ ಮತ್ತು ಎಂಬಸಿ ಟೆಕ್ ಸ್ಕ್ವೇರ್‌ನಲ್ಲಿರುವ ಸೆಸಿನಾ ಬ್ಯುಸಿನೆಸ್ ಪಾರ್ಕ್‌ನಲ್ಲಿರುವ ಡೊಮಿನೋಸ್ ಸ್ಟೋರ್‌ನಿಂದ 1 ಕಿಮೀ ದೂರದಲ್ಲಿರುವ ನ್ಯೂ ಹೊರೈಜನ್ ಕಾಲೇಜಿನ ಬಳಿ ಇದ್ದೆ. ನಾನು ಮ್ಯಾನೇಜರ್‌ಗೆ ಕರೆ ಮಾಡಿ ಸಂಚಾರ ದಟ್ಟಣೆಯಲ್ಲಿ ಸಿಲುಕಿಕೊಂಡಿದ್ದೇನೆ, ಅಂಗಡಿಗೆ ಹೋಗಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದೆ. ಮ್ಯಾನೇಜರ್ ನನಗೆ ಸಹಾಯ ಮಾಡಿದರು. ಪಿಜ್ಜಾದೊಂದಿಗೆ ನನ್ನ ಸ್ಥಳಕ್ಕೆ ಬರಲು ಇನ್ನೊಬ್ಬ ಡೆಲಿವರಿ ಬಾಯ್ ನನ್ನು ನಡೆದುಕೊಂಡು ಹೋಗುವಂತೆ  ಕಳುಹಿಸಿದರು. ನಂತರ ನಾವಿಬ್ಬರೂ ನನ್ನ ಬೈಕ್‌ನಲ್ಲಿ ಕಾರಿನಲ್ಲಿ ಇದ್ದ ಗ್ರಾಹಕ ಬಳಿ ಹೋದೆ ಎಂದು ವಿವರಿಸಿದರು. 

ಗ್ರಾಹಕರಿಗೆ ಕರೆ ಮಾಡಿ ಅವರ ಲೈವ್ ಲೊಕೇಶನ್ ಹಂಚಿಕೊಳ್ಳುವಂತೆ ಕೇಳಿಕೊಂಡೆವು. ಟ್ರಾಫಿಕ್ ನಿಧಾನವಾಗಿ ಚಲಿಸುತ್ತಿದ್ದರಿಂದ, ನಾನು ಬೈಕ್‌ನಲ್ಲಿ ಟ್ರಾಫಿಕ್ ಮೂಲಕ ಸಾಗಿ 30-35 ನಿಮಿಷಗಳಲ್ಲಿ ಗ್ರಾಹಕರನ್ನು ತಲುಪಿದೆ ಎಂದು ನಾಮಾ ಹೇಳಿದರು.

ಮಳೆ, ಟ್ರಾಫಿಕ್ ಜಾಮ್ ನಡುವೆಯೂ ಆಹಾರ ವಿತರಿಸಿ ತನ್ನ ಕಾರ್ಯವನ್ನು ಪೂರ್ಣಗೊಳಿಸಲು ಗ್ರಾಹಕರನ್ನು ರಾಜನಂತೆ ಕಾಣುವುದರಿಂದ ಮಾತ್ರ ಸಾಧ್ಯ ಎಂದು ಡೆಲಿವರಿ ಏಜೆಂಟ್ ಆಗಿರುವ ನಿಲಯ್ ನಾಮ ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com