ಬೆಂಗಳೂರಿಗರ ಕೆಲಸ-ಜೀವನ ಶೈಲಿ ಆರೋಗ್ಯ ಸಮಸ್ಯೆಗೆ ಪ್ರಮುಖ ಕಾರಣ: ವೈದ್ಯರ ಅಭಿಮತ

ಸೆಪ್ಟೆಂಬರ್ 29, ವಿಶ್ವ ಹೃದಯ ದಿನದಂದು ಹೃದ್ರೋಗ ತಜ್ಞರು ಬೆಂಗಳೂರಿನ ಜನಸಂಖ್ಯೆಯ ವಿಶಿಷ್ಟತೆ ಮತ್ತು ಇಲ್ಲಿನ ಜನರ ಕೆಲಸದ ಶೈಲಿ ಹೆಚ್ಚಾಗಿ ಹೃದಯದ ಸಮಸ್ಯೆ ಕಂಡುಬರುತ್ತದೆ ಎಂದು ಕಂಡುಹಿಡಿದಿದ್ದಾರೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಸೆಪ್ಟೆಂಬರ್ 29, ವಿಶ್ವ ಹೃದಯ ದಿನದಂದು ಹೃದ್ರೋಗ ತಜ್ಞರು ಬೆಂಗಳೂರಿನ ಜನಸಂಖ್ಯೆಯ ವಿಶಿಷ್ಟತೆ ಮತ್ತು ಇಲ್ಲಿನ ಜನರ ಕೆಲಸದ ಶೈಲಿ ಹೆಚ್ಚಾಗಿ ಹೃದಯದ ಸಮಸ್ಯೆ ಕಂಡುಬರುತ್ತದೆ ಎಂದು ಕಂಡುಹಿಡಿದಿದ್ದಾರೆ. 

ಭಾರತದ ಐಟಿ ರಾಜಧಾನಿಯಾಗಿರುವ ಬೆಂಗಳೂರಿನ ವೃತ್ತಿಪರರ ಅಸಾಮಾನ್ಯ ಕಾರ್ಯಶೈಲಿಯಿಂದಾಗಿ ಹೃದಯ ಸಂಬಂಧಿ ಕಾಯಿಲೆ ಹೆಚ್ಚುತ್ತಿದೆ ಎನ್ನುತ್ತಾರೆ. 

ಐಟಿ ವಲಯದ ಜನರು ಅಸಾಮಾನ್ಯ ಗುಂಪಾಗಿದ್ದು, ವಾರದ ದಿನಗಳಲ್ಲಿ ದಿನಕ್ಕೆ 10ರಿಂದ 14 ಗಂಟೆ ಕೆಲಸ ಮಾಡುವುದು, ವಾರಾಂತ್ಯಗಳಲ್ಲಿ ಪಾರ್ಟಿ ಮಾಡುವುದು ಆರೋಗ್ಯಕ್ಕೆ ದೊಡ್ಡ ಅಪಾಯಕಾರಿ ಅಂಶವಾಗಿದೆ ಎಂದು ಸೇಂಟ್ ಜಾನ್ಸ್ ಆಸ್ಪತ್ರೆಯ ಮುಖ್ಯ ಇಂಟರ್ವೆನ್ಷನಲ್ ಕಾರ್ಡಿಯಾಲಜಿಸ್ಟ್ ಡಾ. ಕಿರೋನ್ ವರ್ಗೀಸ್ ಹೇಳುತ್ತಾರೆ. 

ಯುವಕರು ತಪಾಸಣೆಗೆ ಒಳಗಾಗಲು ಹಿಂಜರಿಯುತ್ತಾರೆ. ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಕಂಡುಬಂದರೆ ಔಷಧಿಗಳನ್ನು ಪ್ರಾರಂಭಿಸಲು ಸಿದ್ಧರಿರುವುದಿಲ್ಲ. ಈಗ ಚಿಕಿತ್ಸೆಯನ್ನು ಪ್ರಾರಂಭಿಸಲು ತುಂಬಾ ಚಿಕ್ಕವರು ಎಂದು ನಿರ್ಲಕ್ಷ್ಯ ಮಾಡುತ್ತಾರೆ ಎನ್ನುತ್ತಾರೆ ವೈದ್ಯರು. ಇದು ಹಠಾತ್ ಹೃದಯ ವೈಫಲ್ಯಕ್ಕೆ ಹಲವು ಕಾರಣಗಳಲ್ಲಿ ಒಂದಾಗಿದೆ. ಧೂಮಪಾನ ಮತ್ತು ಮಾಲಿನ್ಯದಿಂದಾಗಿ 20-30 ವರ್ಷ ವಯಸ್ಸಿನ ಯುವಕರಲ್ಲಿ ಹೃದಯಾಘಾತವು ಹೆಚ್ಚು ಸಾಮಾನ್ಯವಾಗಿದೆ ಎಂದು ಹೃದ್ರೋಗ ತಜ್ಞರ ಅಭಿಪ್ರಾಯವಾಗಿದೆ. 

ವೈದ್ಯರು ಸಕ್ರಿಯ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಅಗತ್ಯವನ್ನು ಒತ್ತಿಹೇಳಿದರು. ನಿಯಮಿತವಾಗಿ ತಪಾಸಣೆ ಆರೋಗ್ಯ ತಪಾಸಣೆ ಮಾಡಿಕೊಳ್ಳಬೇಕು. ಭಾರತೀಯರು ಹೃದಯಾಘಾತದ ಅಪಾಯವನ್ನು ಹೊಂದುವ ಸಂಖ್ಯೆ ಹೆಚ್ಚಾಗುತ್ತಿದೆ. ಮಧುಮೇಹ ಮತ್ತು ಸ್ಥೂಲಕಾಯತೆಯ ಹೊರತಾಗಿ, ಕೊಲೆಸ್ಟ್ರಾಲ್ ಕೂಡ ಒಂದು ಅಂಶವಾಗಿದೆ ಎನ್ನುತ್ತಾರೆ. 

ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುವ ವ್ಯಕ್ತಿಗಳಿಗೆ ಎಚ್ಚರಿಕೆ ನೀಡಿದ ಡಾ.ವರ್ಗೀಸ್, ಜಡ ಜೀವನಶೈಲಿ, ಧೂಮಪಾನ ಮತ್ತು ವಾರದಲ್ಲಿ ಹೆಚ್ಚು ಗಂಟೆಗಳ ಕಾಲ ಕೆಲಸ ಮಾಡುವುದು ಸಮಸ್ಯೆಯನ್ನು ಉಲ್ಬಣಗೊಳಿಸುತ್ತದೆ ಎಂದು ಹೇಳಿದರು.

ಮಣಿಪಾಲ್ ಆಸ್ಪತ್ರೆಗಳ ಹಿರಿಯ ಸಲಹೆಗಾರ ಮತ್ತು ಇಂಟರ್ವೆನ್ಷನಲ್ ಕಾರ್ಡಿಯಾಲಜಿಸ್ಟ್ ಡಾ.ಡಿ.ಎಸ್.ಚಡ್ಡಾ, ಪರಿಸರ, ಸಂಚಾರ, ಮಾಲಿನ್ಯ ಮತ್ತು ಜೀವನ ಪರಿಸ್ಥಿತಿಗಳನ್ನು ಗಣನೆಗೆ ತೆಗೆದುಕೊಳ್ಳಬೇಕು. ಆನುವಂಶಿಕ ಮತ್ತು ಕೌಟುಂಬಿಕ ಆರೋಗ್ಯ ಸಮಸ್ಯೆ ಪಾತ್ರ ವಹಿಸುತ್ತದೆಯಾದರೂ, ಜೀವನಶೈಲಿ ಮುಖ್ಯ ಕಾರಣವಾಗುತ್ತದೆ ಎಂದರು. 

ಹೆಚ್ಚಿನ ರೋಗಿಗಳು ಪರಿಧಮನಿಯ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ಅವರು ಹೇಳಿದರು, ಇದರಲ್ಲಿ ಅಪಧಮನಿಗಳ ಗೋಡೆಯಲ್ಲಿ ಪ್ಲೇಕ್ ನಿರ್ಮಾಣವಾಗುತ್ತದೆ. ಧೂಮಪಾನವನ್ನು ತಪ್ಪಿಸುವುದು, ಒತ್ತಡವನ್ನು ನಿರ್ವಹಿಸುವುದು ಮತ್ತು ಯಾವುದೇ ಸೋಂಕನ್ನು ತಡೆಗಟ್ಟಲು ಕ್ರಮಗಳನ್ನು ತೆಗೆದುಕೊಳ್ಳುವುದರ ಜೊತೆಗೆ ಎಲ್ಲಾ ವಯೋಮಾನದವರಿಗೂ ನಿಯಮಿತ ಆರೋಗ್ಯ ತಪಾಸಣೆಯನ್ನು ವೈದ್ಯರು ಶಿಫಾರಸು ಮಾಡುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com