ಒಂದೇ ಮಳೆಗೆ ಬೆಂಗಳೂರಿನ ಹೊಸ ನಲ್ಲೂರಹಳ್ಳಿ ಮೆಟ್ರೋ ನಿಲ್ದಾಣ ಜಲಾವೃತ!

ಒಂದು ವಾರದ ಹಿಂದೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ ವೈಟ್‌ಫೀಲ್ಡ್‌ನಿಂದ ಕೆಆರ್ ಪುರಂವರೆಗಿನ ಹೊಚ್ಚಹೊಸ ನಲ್ಲೂರಹಳ್ಳಿ ಮೆಟ್ರೋ ನಿಲ್ದಾಣವು ನಿನ್ನೆ ಮಂಗಳವಾರ ಸಂಜೆ ನಗರದ ಕೆಲವು ಭಾಗಗಳಲ್ಲಿ ಸುರಿದ ಭಾರಿ ಮಳೆಯಿಂದಾಗಿ ಜಲಾವೃತವಾಗಿದೆ. 
ನಿಲ್ದಾಣದೊಳಗೆ ತುಂಬಿಕೊಂಡ ನೀರನ್ನು ತೆಗೆಯುತ್ತಿರುವ ಸಿಬ್ಬಂದಿ
ನಿಲ್ದಾಣದೊಳಗೆ ತುಂಬಿಕೊಂಡ ನೀರನ್ನು ತೆಗೆಯುತ್ತಿರುವ ಸಿಬ್ಬಂದಿ

ಬೆಂಗಳೂರು: ಒಂದು ವಾರದ ಹಿಂದೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ ವೈಟ್‌ಫೀಲ್ಡ್‌ನಿಂದ ಕೆಆರ್ ಪುರಂವರೆಗಿನ ಹೊಚ್ಚಹೊಸ ನಲ್ಲೂರಹಳ್ಳಿ ಮೆಟ್ರೋ ನಿಲ್ದಾಣವು ನಿನ್ನೆ ಮಂಗಳವಾರ ಸಂಜೆ ನಗರದ ಕೆಲವು ಭಾಗಗಳಲ್ಲಿ ಸುರಿದ ಭಾರಿ ಮಳೆಯಿಂದಾಗಿ ಜಲಾವೃತವಾಗಿದೆ. 

ಇದಕ್ಕೆ ಪುಷ್ಠಿ ನೀಡುವ ಎರಡು ವೀಡಿಯೋಗಳನ್ನು ಜನಪ್ರಿಯ ನಾಗರಿಕರ ಆಂದೋಲನ ವೈಟ್‌ಫೀಲ್ಡ್ ರೈಸಿಂಗ್ ಟ್ವಿಟರ್‌ನಲ್ಲಿ ಅಪ್ ಲೋಡ್ ಮಾಡಿದೆ. ಟ್ವೀಟ್‌ನಲ್ಲಿ, “ಹೊಚ್ಚಹೊಸ ನಲ್ಲೂರಹಳ್ಳಿ ಮೆಟ್ರೋ ನಿಲ್ದಾಣದ ಒಳಗೆ ಪ್ಲಾಟ್‌ಫಾರ್ಮ್‌ನಲ್ಲಿ ಹಾಗೂ ಟಿಕೆಟಿಂಗ್ ಕೌಂಟರ್ ಬಳಿ ನೀರು ತುಂಬಿದೆ. ಒಂದು ಮಳೆಗೆ ಹೀಗೆ ಸಂಪೂರ್ಣ ಜಲಾವೃತವಾಗಿದೆ ಎಂದು ಪರಿಸ್ಥಿತಿಯ ಬಗ್ಗೆ ತಿಳಿಸಿದೆ. 

ನಿಲ್ದಾಣದ ಹೌಸ್ ಕೀಪಿಂಗ್ ಸಿಬ್ಬಂದಿ ಸಲಿಕೆಗಳು ಮತ್ತು ಬಕೆಟ್‌ಗಳನ್ನು ಬಳಸಿ ನೀರನ್ನು ತೆಗೆಯುವುದು ಮತ್ತು ನೆಲವನ್ನು ಒಣಗಿಸಲು ಮಾಪ್ ನ್ನು ಬಳಸುತ್ತಿರುವುದು, ಸಾರ್ವಜನಿಕರು ನೀರಿನ ಮೇಲೆ ಎಚ್ಚರಿಕೆಯಿಂದ ಹೆಜ್ಜೆ ಹಾಕುವುದನ್ನು ವಿಡಿಯೊದಲ್ಲಿ ಕಾಣಬಹುದಾಗಿದೆ. 

ನಿಲ್ದಾಣದಲ್ಲಿ ವೀಡಿಯೊವನ್ನು ಚಿತ್ರೀಕರಿಸಿದ ವೈಟ್‌ಫೀಲ್ಡ್ ರೈಸಿಂಗ್ ಸದಸ್ಯ (ಕೋರಿಕೆಯ ಮೇರೆಗೆ ಹೆಸರನ್ನು ತಡೆಹಿಡಿಯಲಾಗಿದೆ) TNIE ಜೊತೆ ಮಾತನಾಡಿ, "ಪ್ಲಾಟ್‌ಫಾರ್ಮ್ ಮಟ್ಟದಿಂದಾಗಿ ಛಾವಣಿಯ ಮೇಲಿನ ಅಂತರದಿಂದ ನೀರು ಕೆಳಗೆ ಬೀಳುತ್ತಿದೆ. ನಿಲ್ದಾಣದ ಒಳಗೋಡೆಯ ಉದ್ದಕ್ಕೂ ನೀರು ಬದಿಗಳಲ್ಲಿ ಸುರಿಯುತ್ತಿದೆ. ಮೆಟ್ರೊ ರೈಲಿನಲ್ಲಿ ಸಂಚರಿಸುವ ದಿನನಿತ್ಯ ಕಚೇರಿಗಳಿಗೆ, ಶಾಲಾ-ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗಂತೂ ನಿಲ್ದಾಣ ಸುರಕ್ಷಿತವಾಗಿಲ್ಲ. ನೀರಿನ ಸೋರಿಕೆಯಿಂದ ಪ್ರಯಾಣಿಕರು ನಡೆಯುವಾಗ ಅಪಾಯ ಎದುರಾಗುವ ಸಾಧ್ಯತೆಯಿದೆ ಎನ್ನುತ್ತಾರೆ. 

ಈ ಕುರಿತು ಪದೇ ಪದೇ ಕರೆ ಮಾಡಿದರೂ ಯಾವೊಬ್ಬ ಮೆಟ್ರೋ ಅಧಿಕಾರಿಗಳು ಸ್ಪಂದಿಸಿಲ್ಲ. ಬಿಎಂಆರ್‌ಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್, ತಮ್ಮ ಸಿಬ್ಬಂದಿ ಸಮಸ್ಯೆಯನ್ನು ಗಮನಿಸುತ್ತಿದ್ದಾರೆ, ಪರಿಶೀಲಿಸುತ್ತಿದ್ದಾರೆ ಎಂದರು. 

ಈ ಟ್ವೀಟ್ ನೋಡಿರುವ ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ. ಚುನಾವಣೆಗೆ ಮುನ್ನ ತರಾತುರಿಯಲ್ಲಿ ಕೆಲಸ ಮಾಡಿ ಮುಗಿಸಲು ಸರ್ಕಾರ ನೋಡುತ್ತವೆ. ಇದನ್ನು ನಂಬಿಕೊಂಡು ಮತದಾರರು ಕುರುಡಾಗಿ ಮತ ಹಾಕಬಾರದು ಎನ್ನುತ್ತಾರೆ. ಆಮ್ ಆದ್ಮಿ ಪಕ್ಷದ ಪ್ರತಿನಿಧಿ ಅಶೋಕ್ ಮೃತ್ಯುಂಜಯ ಅವರು ಟ್ವೀಟ್ ಮಾಡುವ ಮೂಲಕ ರಾಜಕೀಯ ರಂಗು ನೀಡಿದ್ದಾರೆ, ನೀವು ಚುನಾವಣೆಗಾಗಿ ಅರೆಬೆಂದ ಕಾಮಗಾರಿಗಳನ್ನು ಉದ್ಘಾಟಿಸಿದಾಗ ಹೀಗಾಗುತ್ತದೆ. ಜನರಿಗಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುವ ಉತ್ತಮ ಪಕ್ಷವನ್ನು ಈಗಲಾದರೂ ಜನರು ಅರಿತು ಮತ ಚಲಾಯಿಸಬೇಕೆಂದು ನಾನು ಬಯಸುತ್ತೇನೆ ಎಂದು ಬರೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com