ನಂದಿನಿ ಜೊತೆ ಸ್ಪರ್ಧಿಸುವ ಪ್ರಶ್ನೆಯೇ ಇಲ್ಲ: ಅಮೂಲ್ ಮುಖ್ಯಸ್ಥ ಜಯೇನ್ ಮೆಹ್ತಾ

ಕರ್ನಾಟಕದ ಜನಪ್ರಿಯ ಬ್ರ್ಯಾಂಡ್ ನಂದಿನಿ ಜೊತೆಗಿನ ಮಾರುಕಟ್ಟೆ ಕದನ ವಿಚಾರದಲ್ಲಿ ರಾಜಕೀಯ ಗದ್ದಲದಲ್ಲಿ ಸಿಕ್ಕಿಬಿದ್ದಿರುವ ಗುಜರಾತ್ ಮೂಲದ ಸಹಕಾರಿ ಮಾರಾಟ ಅಮೂಲ್ ತನ್ನ ಉತ್ಪನ್ನಗಳನ್ನು ಬೆಂಗಳೂರಿನಲ್ಲಿ ಆನ್ ಲೈನ್ ಮೂಲಕ ಮಾತ್ರ ಮಾರಾಟ ಮಾಡುತ್ತದೆ. ನಂದಿನಿ ಹಾಲಿನ ಜೊತೆಗೆ ಯಾವುದೇ ಸ್ಪರ್ಧೆ ಇಲ್ಲ ಎಂದು ಅದರ ಮುಖ್ಯಸ್ಥರು ಮಂಗಳವಾರ ಹೇಳಿದ್ದಾರೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಕರ್ನಾಟಕದ ಜನಪ್ರಿಯ ಬ್ರ್ಯಾಂಡ್ ನಂದಿನಿ ಜೊತೆಗಿನ ಮಾರುಕಟ್ಟೆ ಕದನ ವಿಚಾರದಲ್ಲಿ ರಾಜಕೀಯ ಗದ್ದಲದಲ್ಲಿ ಸಿಕ್ಕಿಬಿದ್ದಿರುವ ಗುಜರಾತ್ ಮೂಲದ ಸಹಕಾರಿ ಮಾರಾಟ ಅಮೂಲ್ ತನ್ನ ಉತ್ಪನ್ನಗಳನ್ನು ಬೆಂಗಳೂರಿನಲ್ಲಿ ಆನ್ ಲೈನ್ ಮೂಲಕ ಮಾತ್ರ ಮಾರಾಟ ಮಾಡುತ್ತದೆ. ನಂದಿನಿ ಹಾಲಿನ ಜೊತೆಗೆ ಯಾವುದೇ ಸ್ಪರ್ಧೆ ಇಲ್ಲ ಎಂದು ಅದರ ಮುಖ್ಯಸ್ಥರು ಮಂಗಳವಾರ ಹೇಳಿದ್ದಾರೆ. 

ನಂದಿನಿ ಮತ್ತು ಅಮೂಲ್ ಎರಡೂ ರೈತರ ಒಡೆತನದ ಸಹಕಾರಿಗಳಾಗಿದ್ದು, "ಅಮುಲ್ ವರ್ಸಸ್ ನಂದಿನಿ" ಸನ್ನಿವೇಶ ಇರಬಾರದು ಎಂದು ಗುಜರಾತ್ ಸಹಕಾರ ಹಾಲು ಮಾರುಕಟ್ಟೆ ಒಕ್ಕೂಟದ (ಜಿಸಿಎಂಎಂಎಫ್) ವ್ಯವಸ್ಥಾಪಕ ನಿರ್ದೇಶಕ  ಜಯೇನ್ ಮೆಹ್ತಾ ಪ್ರತಿಪಾದಿಸಿದ್ದಾರೆ. ಅಮೂಲ್ ತನ್ನ ಉತ್ಪನ್ನಗಳನ್ನು  ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಮಾತ್ರ ಮಾರಾಟ ಮಾಡುತ್ತದೆ ಹೊರತು ಕರ್ನಾಟಕದ ಮಾರುಕಟ್ಟೆಗೆ ಪೂರ್ಣ ಪ್ರಮಾಣದಲ್ಲಿ ಪ್ರವೇಶಿಸಲು ಯೋಜನೆ ಇಲ್ಲ ಎಂದು ಅವರು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. 

ಅಮೂಲ್ 2015-16 ರಿಂದ ಉತ್ತರ ಕರ್ನಾಟಕದ ಹುಬ್ಬಳ್ಳಿ ಮತ್ತು ಧಾರಾವಾಡ ಜಿಲ್ಲೆಗಳಲ್ಲಿ ತಾಜಾ ಹಾಲನ್ನು ಮಾರಾಟ ಮಾಡುತ್ತಿದೆ. ಆದರೆ, ಕರ್ನಾಟಕಸರ್ಕಾರದ ನೀಡುವ ಸಬ್ಸಿಡಿಯಿಂದ ಕೆಎಂಎಫ್ ನಂದಿನಿ ಹಾಲು ಅಗ್ಗವಾಗಿ ದೊರೆಯುವುದರಿಂದ ಅದರೊಂದಿಗೆ ಯಾವುದೇ ಸ್ಪರ್ಧೆಯಿಲ್ಲ ಎಂದು ಅವರು ಹೇಳಿದ್ದಾರೆ. ಲೀಟರ್ ಅಮೂಲ್ ಹಾಲಿನ ಬೆಲೆ ರೂ. 54 ಆದರೆ, ಲೀಟರ್ ನಂದಿನಿ ಹಾಲಿನ ಬೆಲೆ ರೂ.39 ಆಗಿದೆ. 

ಅಮೂಲ್, ನಂದಿನಿ ವಿಲೀನದ ಪ್ರಶ್ನೆಯೇ ಇಲ್ಲ. ಇವೆರಡೂ ಸಹಕಾರಿ ಸಂಸ್ಥೆಗಳಾಗಿವೆ. ಅಮುಲ್ ಗುಜರಾತ್‌ನ ರೈತರ ಒಡೆತನದಲ್ಲಿದೆ ಮತ್ತು ನಂದಿನಿ ಕರ್ನಾಟಕದ ರೈತರ ಒಡೆತನದಲ್ಲಿದೆ. ಈ ಎರಡೂ ದೇಶದ ಸಹಕಾರಿ ಡೈರಿ ಉದ್ಯಮ ಬೆಳವಣಿಗೆಗಾಗಿ ಇಂದಿನಿಂದ ಅಲ್ಲ ದಶಕಗಳಿಂದ ಒಟ್ಟಿಗೆ ಕೆಲಸ ಮಾಡುತ್ತಿವೆ. ಭಾರತವನ್ನು ವಿಶ್ವದಲ್ಲೇ ಅತಿ ಹೆಚ್ಚು ಹಾಲು ಉತ್ಪಾದಕ ರಾಷ್ಟ್ರವನ್ನಾಗಿ ಮಾಡಿವೆ ಎಂದು ಮೆಹ್ತಾ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com