ಏಪ್ರಿಲ್ 15 ರಿಂದ ರಾಜ್ಯದಲ್ಲಿ ಕೆಎಸ್ಒಯು ವಿದ್ಯಾರ್ಥಿಗಳಿಗಾಗಿ ಡಿಜಿಟಲ್ ಉದ್ಯೋಗ ಮೇಳ
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ(ಕೆಎಸ್‌ಒಯು)ದ ವತಿಯಿಂದ ಶನಿವಾರದಿಂದ 15 ದಿನಗಳ ಎಂಡ್ ಟು ಎಂಡ್ ಡಿಜಿಟಲ್ ಉದ್ಯೋಗ ಮೇಳ ಆಯೋಜಿಸಲಾಗಿದ್ದು, ಈ ಮೆಗಾ ವರ್ಚುವಲ್ ಉದ್ಯೋಗ ಮೇಳದಲ್ಲಿ ಸುಮಾರು 2,000 ಖಾಲಿ...
Published: 11th April 2023 08:31 AM | Last Updated: 11th April 2023 05:23 PM | A+A A-

ರಾಜ್ಯ ಮುಕ್ತ ವಿವಿ
ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ(ಕೆಎಸ್‌ಒಯು)ದ ವತಿಯಿಂದ ಶನಿವಾರದಿಂದ 15 ದಿನಗಳ ಎಂಡ್ ಟು ಎಂಡ್ ಡಿಜಿಟಲ್ ಉದ್ಯೋಗ ಮೇಳ ಆಯೋಜಿಸಲಾಗಿದ್ದು, ಈ ಮೆಗಾ ವರ್ಚುವಲ್ ಉದ್ಯೋಗ ಮೇಳದಲ್ಲಿ ಸುಮಾರು 2,000 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು 10ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸುತ್ತಿವೆ.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಕೆಎಸ್‌ಒಯು ಉಪಕುಲಪತಿ ಪ್ರೊ.ಶರಣಪ್ಪ ವಿ ಹಾಲ್ಸೆ ಅವರು, ವಿಶ್ವವಿದ್ಯಾಲಯದ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಈ ಉದ್ಯೋಗ ಮೇಳ ಮುಕ್ತ ಅವಕಾಶ ನೀಡುತ್ತಿದೆ ಎಂದರು.
ಈ ಮೇಳದಲ್ಲಿ ಅಭ್ಯರ್ಥಿಗಳು 10ಕ್ಕೂ ಹೆಚ್ಚು ಕಂಪನಿಗಳಿಂದ 2,000ಕ್ಕೂ ಹೆಚ್ಚು ಉದ್ಯೋಗಾವಕಾಶಗಳನ್ನು ಪಡೆದುಳ್ಳಬಹುದು, ಜೊತೆಗೆ ವಾರ್ಷಿಕ ರೂ 3 ಲಕ್ಷದಿಂದ ವಾರ್ಷಿಕ ರೂ 6 ಲಕ್ಷದವರೆಗೆ ವೇತನ ಪ್ಯಾಕೇಜ್‌ಗಳನ್ನು ಪಡೆಯಬಹುದು ಎಂದಿದ್ದಾರೆ.
ಇದನ್ನು ಓದಿ: ಭಾರತದಲ್ಲಿ ಹಾಲಿ ಹಣಕಾಸು ವರ್ಷ ಫೋನ್ ಉತ್ಪಾದನೆಯಲ್ಲಿ 1.5 ಲಕ್ಷ ಉದ್ಯೋಗ ಸೃಷ್ಟಿ ಸಾಧ್ಯತೆ: ವರದಿ
ರಾಜ್ಯದಾದ್ಯಂತ ವಿದ್ಯಾರ್ಥಿಗಳು ದೂರದ ಸ್ಥಳಗಳಿಂದ ಬರುವುದು ಕಷ್ಟ. ಹೀಗಾಗಿ ವರ್ಚುವಲ್ ಮೂಲಕ ಉದ್ಯೋಗಾವಕಾಶಗಳನ್ನು ಹುಡುಕಲು ಸಹಾಯ ಮಾಡುವುದು ಇದರ ಉದ್ದೇಶವಾಗಿದೆ ಎಂದು ಅವರು ಹೇಳಿದ್ದಾರೆ.
Proofile.in ನಿಂದ ವೆಂಕಟೇಶ್ ಮಾತನಾಡಿ, ಪ್ಲೇಸ್‌ಮೆಂಟ್ ಡ್ರೈವ್‌ನ ಭಾಗವಾಗಿ ಅಭ್ಯರ್ಥಿಗಳಿಗೆ ವೆಬ್‌ನಾರ್‌ನಲ್ಲಿ ತರಬೇತಿ ನೀಡಲಾಗುತ್ತದೆ. ಅಲ್ಲಿ ಅವರು ತಮ್ಮ ಡಿಜಿಟಲ್ ರೆಸ್ಯೂಮ್‌ಗಳನ್ನು ಹೇಗೆ ಸಿದ್ಧಪಡಿಸಬೇಕು ಎಂದು ಹೇಳಿಕೊಡುತ್ತಾರೆ ಎಂದರು.