ಸಿದ್ದು ಅಭಿಮಾನಿಯ ವಿಶೇಷ ಹರಕೆ: 101 ಕೆಜಿ ತೂಕದ ಜೋಳದ ಚೀಲ ಹೊತ್ತು 'ದೀಡು ನಮಸ್ಕಾರ'!

ಸಿದ್ದರಾಮಯ್ಯ ಅಭಿಮಾನಿ 101 ಕೆಜಿ ತೂಕದ ಜೋಳದ ಚೀಲವನ್ನು ಹೆಗಲ ಮೇಲೆ ಹೊತ್ತುಕೊಂಡು ಶುಕ್ರವಾರ ಗದಗ ಜಿಲ್ಲೆಯಲ್ಲಿ ಸುಮಾರು ಒಂದು ಕಿಲೋಮೀಟರ್ ಕಾಲ ದೀಡು ನಮಸ್ಕಾರ ಮಾಡಿದ್ದಾರೆ.
ಸಿದ್ದರಾಮಯ್ಯ ಅಬಿಮಾನಿಯ ದೀಡು ನಮಸ್ಕಾರ
ಸಿದ್ದರಾಮಯ್ಯ ಅಬಿಮಾನಿಯ ದೀಡು ನಮಸ್ಕಾರ

ಗದಗ: ತಮ್ಮ ನಾಯಕರ ಮೇಲಿನ ಅತೀವ ಪ್ರೀತಿ ವಿಶ್ವಾಸದಿಂದ ಅಭಿಮಾನಿಗಳು ಹಲವು ರೀತಿಯ ಹರಕೆ, ಪೂಜೆ ಪುನಸ್ಕಾರ ಮಾಡುವುದು ಸಹಜ. ಆದರೆ ಇಲ್ಲೊಬ್ಬ ಸಿದ್ದರಾಮಯ್ಯ ಅಭಿಮಾನಿ 101 ಕೆಜಿ ತೂಕದ ಜೋಳದ ಚೀಲವನ್ನು ಹೆಗಲ ಮೇಲೆ ಹೊತ್ತುಕೊಂಡು ಶುಕ್ರವಾರ ಗದಗ ಜಿಲ್ಲೆಯಲ್ಲಿ ಸುಮಾರು ಒಂದು ಕಿಲೋಮೀಟರ್ ಕಾಲ ದೀಡು ನಮಸ್ಕಾರ ಮಾಡಿದ್ದಾರೆ

ವಿಧಾನಸಭೆ ಚುನಾವಣೆಯಲ್ಲಿ  ಗೆದ್ದು  ಸಿದ್ದರಾಮಯ್ಯ  ಮತ್ತೆ ಸಿಎಂ ಆಗಬೇಕೆಂದು ಪ್ರಾರ್ಥಿಸಿದ್ದಾರೆ.   ದೀಡು ನಮಸ್ಕಾರ ಎಂದರೆ  ಒಂದು ಹೆಜ್ಜೆ ಇಡುವುದು, ಮೊಣಕಾಲ ಮೇಲೆ ಕೂತು ಪ್ರಾರ್ಥಿಸುವುದು,ಮತ್ತೆ ಎದ್ದು  ಮತ್ತೊಂದು ಹೆಜ್ಜೆ ಅದೇ ರೀತಿ ಮಾಡುವುದು, ಪ್ರತಿ ಹೆಜ್ಜೆಯಲ್ಲಿಯೂ ಪ್ರಕ್ರಿಯೆಯನ್ನು ಪುನರಾವರ್ತಿಸುವುದಾಗಿದೆ.

ಕಾಂಗ್ರೆಸ್‌ ಮತ್ತೆ ಅಧಿಕಾರಕ್ಕೆ ಬರಲಿ, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲಿ, ನರಗುಂದದಿಂದ ಬಿ.ಆರ್‌.ಯಾವಗಲ್‌ ಶಾಸಕರಾಗಿ ಆಯ್ಕೆಯಾಗಲಿ ಎಂದು ಹನುಮಂತಪ್ಪ ಜಗತ್ತಿ ದೇವರಲ್ಲಿ ಪ್ರಾರ್ಥಿಸಿದರು.

ಐತಿಹಾಸಿಕ ವಿರೂಪಾಕ್ಷ ದೇವಸ್ಥಾನದಿಂದ ಲಕ್ಕುಂಡಿಯ ಮಾರುತಿ ದೇವಸ್ಥಾನದವರೆಗೆ  ನಮಸ್ಕಾರ ಮಾಡಿದರು. 101 ಕೆಜಿ ತೂಕದ ಚೀಲ ಹಿಡಿದುಕೊಂಡು 1 ಕಿ.ಮೀ.ವರೆಗೆ ನಡೆಯಲು ಕಷ್ಟ, ಅಂತದ್ದರಲ್ಲಿ ಆದರೆ ಹನುಮಪ್ಪ ಅವರು ಹೊರೆ ಹೊತ್ತು ದೀಡು ನಮಸ್ಕಾರ ಮಾಡಿದರು ಎಂದು ಅಲ್ಲಿ ನೆರೆದಿದ್ದವರು ಹೇಳಿದ್ದಾರೆ.

ಚುನಾವಣೆ ಸಂದರ್ಭದಲ್ಲಿ ಉತ್ತರ ಕರ್ನಾಟಕದ ಕೆಲವೆಡೆ ಇಂತಹ ಆಚರಣೆಗಳು ಸಾಮಾನ್ಯ. ಕಳೆದ ತಿಂಗಳು ಗಜೇಂದ್ರಗಡದ ಈರಣ್ಣ ಸಾಕಿ ಕಾಲಕಾಲೇಶ್ವರ ದೇವಸ್ಥಾನದ ಎಲ್ಲ 100 ಮೆಟ್ಟಿಲುಗಳನ್ನು ವಿಪರೀತ ಬಿಸಿಲಿದ್ದರೂ ಮೊಣಕಾಲಿನ ಮೇಲೆ ಹತ್ತಿದರು. ಅದು ಮತ್ತೆ ಸಿದ್ದರಾಮಯ್ಯನವರನ್ನು ಮುಖ್ಯಮಂತ್ರಿಯಾಗಿ, ರೋಣ ನಾಯಕ ಜಿ.ಎಸ್.ಪಾಟೀಲ್ ಅವರನ್ನು ಶಾಸಕರಾಗಿ, ಸಚಿವರಾಗಿ ನೋಡುವುದು ಅವರ ಬೇಡಿಕೆಯಾಗಿದೆ.

ಆದರೆ ಹನುಮಂತಪ್ಪ ಅವರ ಸಾಧನೆ ಅಪರೂಪ ಮತ್ತು ಅಪಾಯಕಾರಿ. ಸುಡುವ ಸೂರ್ಯನ ಕೆಳಗೆ ಅವರ ದೀಡು ನಮಸ್ಕಾರವನ್ನು ನೋಡಲು ನೂರಾರು ಜನರು ಅವರನ್ನು ಹಿಂಬಾಲಿಸಿದ ಕಾರಣ ಅವರು ತಮ್ಮ ಹರಕೆ ಪೂರ್ಣಗೊಳಿಸಲು ಸುಮಾರು ಎರಡು ಗಂಟೆಗಳ ಕಾಲ ತೆಗೆದುಕೊಂಡರು.

‘ಸಿದ್ದರಾಮಯ್ಯನವರಿಗಾಗಿ ವಿಭಿನ್ನವಾಗಿ ಏನಾದರೂ ಮಾಡಬೇಕೆಂದು ಅವರು ಬಯಸಿದ್ದರು. ಆದರೆ ಅವರು ಇಂತಹ ಅಪಾಯಕಾರಿ ಆಚರಣೆಯನ್ನು ಆರಿಸಿಕೊಳ್ಳುತ್ತಾರೆ ಎಂದು ನಮಗೆ ತಿಳಿದಿರಲಿಲ್ಲ. ಅವರು ಪ್ರಾರಂಭಿಸಿದಾಗ ಕೆಲವರು ಇದು ಬೇಡ ಎಂದು ಸಲಹೆ ನೀಡಿದರು, ಇದರಿಂದ ಅವರ  ಡಿಸ್ಕ್ ಸಮಸ್ಯೆಯಾಗಬಹುದು  ಎಂದು ಎಚ್ಚರಿಸಿದರು. ಆದರೆ  ಹನುಮಂತಪ್ಪ ತಮಗೆ ಭಾರ ಎತ್ತುವುದು ಗೊತ್ತು ಎಂದು ಹೇಳಿ ಅವರನ್ನು ಸುಮ್ಮನಾಗಿಸಿದರು. ನಂತರ ಆ ಕೆಲಸವನ್ನು ಯಶಸ್ವಿಯಾಗಿ ಮುಗಿಸಿದರು ಸಂಪೂರ್ಣ 1 ಕಿಮೀ ಆಚರಣೆಯಲ್ಲಿ ಅವರು ಎಡವಲಿಲ್ಲ  ಎಂದು ಹನುಮಂತಪ್ಪ ಅವರ ಸ್ನೇಹಿತ ಅನ್ನದಾನೇಶ್ವರ ಪಾಟೀಲ ತಿಳಿಸಿದ್ದಾರೆ.

ಹನುಮಂತಪ್ಪ ಮಾತನಾಡಿ, ‘ನಾನು ಕಾಂಗ್ರೆಸ್ ನ ಅನುಯಾಯಿ, ಸಿದ್ದರಾಮಯ್ಯ ಅವರ ಅಭಿಮಾನಿ, ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಬೇಕು, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಬೇಕು, ಯಾವಗಲ್ ನರಗುಂದ ಶಾಸಕರಾಗಬೇಕು ಎಂದು ಬಯಸಿದ್ದೇವೆ, ಲಕ್ಕುಂಡಿ ಗ್ರಾಮದ ಮಾರುತಿ ದೇವರು ಪವರ್ ಫುಲ್. ಹಾಗಾಗಿ ಆತನನ್ನು ಮೆಚ್ಚಿಸಲು ನಾನು ವಿಶೇಷ ಆಚರಣೆಯನ್ನು ಮಾಡಿದ್ದೇನೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com