ಬೆಳಗಾವಿ ಏರ್ ಪೋರ್ಟ್ ನಲ್ಲಿ ಹಾಲಿ-ಮಾಜಿ ಸಿಎಂ ಮುಖಾಮುಖಿ: ಬೊಮ್ಮಾಯಿ ಬೆನ್ನು ತಟ್ಟಿದ ಸಿದ್ದರಾಮಯ್ಯ!
ರಾಜಕೀಯದಲ್ಲಿ ಶಾಶ್ವತ ಮಿತ್ರರು ಇರುವುದಿಲ್ಲ, ಶತ್ರುಗಳೂ ಇರುವುದಿಲ್ಲ ಎಂಬ ಮಾತಿದೆ, ಬಹಿರಂಗವಾಗಿ ಕಿತ್ತಾಡಿಕೊಂಡವರು, ಟೀಕೆ, ಆರೋಪಗಳನ್ನು ಪುಂಖಾನುಪುಂಖವಾಗಿ ಮಾಡಿದವರು ಮರುದಿನ ಕೈ ಕೈ ಹಿಡಿದುಕೊಂಡು, ಹೆಗಲ ಮೇಲೆ ಕೈ ಹಾಕಿಕೊಂಡು ಓಡಾಡಿದ್ದನ್ನು ನೋಡಿರುತ್ತೇವೆ.
Published: 26th April 2023 01:00 PM | Last Updated: 26th April 2023 02:11 PM | A+A A-

ಹಾಲಿ-ಮಾಜಿ ಸಿಎಂಗಳ ಮುಖಾಮುಖಿ
ಬೆಳಗಾವಿ: ರಾಜಕೀಯದಲ್ಲಿ ಶಾಶ್ವತ ಮಿತ್ರರು ಇರುವುದಿಲ್ಲ, ಶತ್ರುಗಳೂ ಇರುವುದಿಲ್ಲ ಎಂಬ ಮಾತಿದೆ, ಬಹಿರಂಗವಾಗಿ ಕಿತ್ತಾಡಿಕೊಂಡವರು, ಟೀಕೆ, ಆರೋಪಗಳನ್ನು ಪುಂಖಾನುಪುಂಖವಾಗಿ ಮಾಡಿದವರು ಮರುದಿನ ಕೈ ಕೈ ಹಿಡಿದುಕೊಂಡು, ಹೆಗಲ ಮೇಲೆ ಕೈ ಹಾಕಿಕೊಂಡು ಓಡಾಡಿದ್ದನ್ನು ನೋಡಿರುತ್ತೇವೆ.
ಈಗ ಕರ್ನಾಟಕ ವಿಧಾನಸಭೆ ಚುನಾವಣೆಯ ಸಮಯ.ಲಿಂಗಾಯತ ಸಮುದಾಯದ ಮುಖ್ಯಮಂತ್ರಿಗಳು ಭ್ರಷ್ಟರು ಎಂದು ಸಿದ್ದರಾಮಯ್ಯ ಹೇಳಿ ಇಡೀ ಲಿಂಗಾಯತ ಸಮುದಾಯಕ್ಕೆ ಸಿದ್ದರಾಮಯ್ಯ ಅವಮಾನ ಮಾಡಿದ್ದಾರೆ ಎಂದು ಬಿಜೆಪಿ ಬಿಂಬಿಸಿತ್ತು. ಇನ್ನು ನಿನ್ನೆಯಷ್ಟೇ ಬೆಳಗಾವಿಯ ಕಾಗವಾಡದಲ್ಲಿ ಮಾತನಾಡಿದ್ದ ಸಿದ್ದರಾಮಯ್ಯ ಬಸವರಾಜ ಬೊಮ್ಮಾಯಿ ಅವರಂತಹ ಭ್ರಷ್ಟ ಮುಖ್ಯಮಂತ್ರಿಯನ್ನು ನಾನು ನೋಡಿಲ್ಲ ಎಂದು ಆರೋಪಿಸಿದ್ದರು.
ಇದನ್ನೂ ಓದಿ: ಸಿಎಂ ಬೊಮ್ಮಾಯಿರಂತಹ ಭ್ರಷ್ಟರನ್ನು ನೋಡಿಲ್ಲ: ವಿಪಕ್ಷ ನಾಯಕ ಸಿದ್ದರಾಮಯ್ಯ
ಆದರೆ ಇಂದು ಹಾಲಿ ಮತ್ತು ಮಾಜಿ ಸಿಎಂಗಳು ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಭೇಟಿಯಾಗಿ ಒಬ್ಬರಿಗೊಬ್ಬರು ಖುಷಿಯಿಂದ ನಗುತ್ತಾ ಕೈ ಕೈ ಕುಲುಕಿಕೊಂಡಿದ್ದಾರೆ. ಅಷ್ಟೇ ಅಲ್ಲ ಸಿದ್ದರಾಮಯ್ಯನವರು ಪ್ರೀತಿಯಿಂದ ಬಸವರಾಜ ಬೊಮ್ಮಾಯಿಯವರ ಹೆಗಲು ತಟ್ಟಿದ್ದಾರೆ. ಇದು ನೋಡುಗರಿಕೆ ಒಂದು ಕ್ಷಣ ಅಚ್ಚರಿ ಮತ್ತು ಮುಖದಲ್ಲಿ ನಗು ತರಿಸಿದ್ದಂತೂ ಸುಳ್ಳಲ್ಲ.
ಇಂದು ಹಾಲಿ ಮತ್ತು ಮಾಜಿ ಸಿಎಂಗಳು ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಭೇಟಿಯಾಗಿ ಒಬ್ಬರಿಗೊಬ್ಬರು ಖುಷಿಯಿಂದ ನಗುತ್ತಾ ಕೈ ಕೈ ಕುಲುಕಿಕೊಂಡಿದ್ದಾರೆ. ಅಷ್ಟೇ ಅಲ್ಲ ಸಿದ್ದರಾಮಯ್ಯನವರು ಪ್ರೀತಿಯಿಂದ ಬಸವರಾಜ ಬೊಮ್ಮಾಯಿಯವರ ಹೆಗಲು ತಟ್ಟಿದ್ದಾರೆ. ಇದು ನೋಡುಗರಿಕೆ ಒಂದು ಕ್ಷಣ ಅಚ್ಚರಿ ಮತ್ತು ಮುಖದಲ್ಲಿ ನಗು ತರಿಸಿದ್ದಂತೂ ಸುಳ್ಳಲ್ಲ. pic.twitter.com/5pdw4G1LZD
— kannadaprabha (@KannadaPrabha) April 26, 2023