ಕಾಫಿ ಮಂಡಳಿಯಿಂದ ಕೊಡಗಿನಲ್ಲಿ ಬೆಳೆ ಹಾನಿ ಸಮೀಕ್ಷೆ ಆರಂಭ

ಬೆಳೆಗಾರರು ಮತ್ತು ರೈತ ಸಂಘದ ಬೇಡಿಕೆ ಮೇರೆಗೆ ಜಿಲ್ಲಾ ಕಾಫಿ ಮಂಡಳಿ ಕೊಡಗಿನಲ್ಲಿ ಬೆಳೆ ಹಾನಿ ಸಮೀಕ್ಷೆ ಆರಂಭಿಸಿದೆ.
ಬೆಳೆ ಹಾನಿ ಸಮೀಕ್ಷೆ
ಬೆಳೆ ಹಾನಿ ಸಮೀಕ್ಷೆ

ಮಡಿಕೇರಿ: ಬೆಳೆಗಾರರು ಮತ್ತು ರೈತ ಸಂಘದ ಬೇಡಿಕೆ ಮೇರೆಗೆ ಜಿಲ್ಲಾ ಕಾಫಿ ಮಂಡಳಿ ಕೊಡಗಿನಲ್ಲಿ ಬೆಳೆ ಹಾನಿ ಸಮೀಕ್ಷೆ ಆರಂಭಿಸಿದೆ.

ಅಧಿಕಾರಿಗಳು ಹಲವಾರು ಎಸ್ಟೇಟ್‌ಗಳಿಗೆ ಭೇಟಿ ನೀಡುತ್ತಿದ್ದಾರೆ ಮತ್ತು ಬೆಳೆ ಹಾನಿ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. ಸಮೀಕ್ಷೆಯ ಪ್ರಾಥಮಿಕ ವರದಿಯನ್ನು ಒಂದು ವಾರದಲ್ಲಿ ಜಿಲ್ಲಾಧಿಕಾರಿಗೆ ಸಲ್ಲಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಳೆ ಹಾನಿ ಸಮೀಕ್ಷೆಯನ್ನು ಕಾಫಿ ಮಂಡಳಿಯಿಂದ ಮಾತ್ರ ಮಾಡಲಾಗುತ್ತಿದ್ದು, ಮಂಗಳವಾರದಿಂದ ಸಮೀಕ್ಷೆ ಕಾರ್ಯ ಆರಂಭವಾಗಿದೆ. ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆಯಾಗಿರುವ ಭಾಗಮಂಡಲ, ನಾಪೋಕ್ಲು, ಶಾಂತಳ್ಳಿ ಸೇರಿದಂತೆ ಕೆಲ ಗ್ರಾಮಗಳಿಗೆ ಕಾಫಿ ಮಂಡಳಿ ಅಧಿಕಾರಿಗಳು ಭೇಟಿ ನೀಡುತ್ತಿದ್ದಾರೆ.

“ನಮ್ಮ ಬಳಿ ಮಳೆಯ ಅಂಕಿಅಂಶ ಇದ್ದು, ಭಾರೀ ಮಳೆಯಾದ ಪ್ರದೇಶಗಳನ್ನು ನಾವು ವಿಂಗಡಿಸುತ್ತಿದ್ದೇವೆ. ಹೆಚ್ಚು ಮಳೆಯಾದ ಪ್ರದೇಶಗಳಲ್ಲಿ ಮೊದಲು ಸಮೀಕ್ಷೆ ನಡೆಸಲಾಗುವುದು ಎಂದು ಕಾಫಿ ಮಂಡಳಿಯ ಉಪನಿರ್ದೇಶಕಿ (ವಿಸ್ತರಣೆ) ಡಾ.ಶ್ರೀದೇವಿ ಕೆ ಅವರು ಹೇಳಿದ್ದಾರೆ.

ಕಾಫಿ ತೋಟ ಹೆಚ್ಚಾಗಿರುವ ಗ್ರಾಮದಲ್ಲಿ ಮೂರು ತೋಟಗಳಿಗೆ ಕಾಫಿ ಮಂಡಳಿಯ ವಿಸ್ತರಣಾ ಮತ್ತು ಸಂಶೋಧನಾ ಅಧಿಕಾರಿಗಳು ಭೇಟಿ ನೀಡಿ ಬೆಳೆ ಹಾನಿ ಸಮೀಕ್ಷೆ ನಡೆಸಲಿದ್ದಾರೆ ಎಂದು ಅವರು ವಿವರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com