ಬಂಡೀಪುರ ಅರಣ್ಯಾಧಿಕಾರಿಗಳ ಸರಳ ಉಪಾಯದಿಂದ ಮಾನವ- ಆನೆ ಸಂಘರ್ಷಕ್ಕೆ ತಡೆ!

ಬಂಡೀಪುರ ಅರಣ್ಯಾಧಿಕಾರಿಗಳ ಸರಳ ಉಪಾಯದಿಂದ ಮಾನವ- ಆನೆ ಸಂಘರ್ಷ ನಿಯಂತ್ರಣಕ್ಕೆ ಬಂದಿದೆ.
ಬಂಡೀಪು ಅರಣ್ಯ- ಗ್ರಾಮ ಗಡಿ ಭಾಗದಲ್ಲಿ ಅಳವಡಿಸಲಾಗಿರುವ ಬ್ಯಾರಿಕೇಡ್
ಬಂಡೀಪು ಅರಣ್ಯ- ಗ್ರಾಮ ಗಡಿ ಭಾಗದಲ್ಲಿ ಅಳವಡಿಸಲಾಗಿರುವ ಬ್ಯಾರಿಕೇಡ್

ಮೈಸೂರು: ಬಂಡೀಪುರ ಅರಣ್ಯಾಧಿಕಾರಿಗಳ ಸರಳ ಉಪಾಯದಿಂದ ಮಾನವ- ಆನೆ ಸಂಘರ್ಷ ನಿಯಂತ್ರಣಕ್ಕೆ ಬಂದಿದೆ.

ಆನೆ ನಿರೋಧಕ ಕಂದಕ (ಇಪಿಟಿ) ಹಾಗೂ ಕೃಷಿ ಭೂಮಿಯ ಜಾಗದ ನಡುವೆ ಬ್ಯಾರಿಕೇಡ್ ಗಳನ್ನು ಹಾಕಲಾಗಿದ್ದು, ಆನೆಗಳಿಗೆ ಮನುಷ್ಯನ ಇರುವಿಕೆ ಇರುವ ಪ್ರದೇಶಗಳಿಗೆ ಬಾರದಂತೆ ತಡೆಯೊಡ್ಡಲಾಗಿದೆ. 

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಅರಣ್ಯಾಧಿಕಾರಿಗಳ ಉಪಾಯ ಇದಾಗಿದ್ದು, ಈ ಹಿಂದೆ ಆನೆಗಳು ಅರಣ್ಯದ ಗಡಿ ಭಾಗದಲ್ಲಿರುವ ಗ್ರಾಮಗಳಿಗೆ ದಾಂಗುಡಿ ಇಡುತ್ತಿದ್ದದ್ದು ಸಾಮಾನ್ಯವಾಗಿತ್ತು. ನಿಯಂತ್ರಕ ಕ್ರಮವಾಗಿ ಅರಣ್ಯ ಸಿಬ್ಬಂದಿಗಳು ಆನೆ ನಿರೋಧಕ ಕಂದಕವನ್ನು ತೋಡಿದ್ದರು ಆದರೆ ಆನೆಗಳು ಗ್ರಾಮ ಪ್ರವೇಶಿಸುವುದು ಮುಂದುವರೆದಿತ್ತು. 1 ಕಿ.ಮೀ ವ್ಯಾಪ್ತಿಗೆ ಬ್ಯಾರಿಕೇಡ್ ಗಳನ್ನು ಹಾಕಲು ರೈಲ್ವೆ ಇಲಾಖೆಯಿಂದ ರೈಲು ಕಂಬಿಗಳನ್ನು 1.3 ಕೋಟಿ ರೂಪಾಯಿ ನೀಡಿ ಖರೀದಿಸಲಾಗಿತ್ತು. ಆದರೂ ಅರಣ್ಯ ಸಿಬ್ಬಂದಿಗಳಿಗೆ ಆನೆಗಳು ಬ್ಯಾರಿಕೇಡ್ ದಾಟದಂತೆ ಮಾಡಲು ಸಾಧ್ಯವಾಗಿರಲಿಲ್ಲ.

ಗ್ರಾಮಗಳೆಡೆಗೆ ನಾವು ರೈಲು ಬ್ಯಾರಿಕೇಡ್ ಗಳನ್ನು ಅಳವಡಿಸುತ್ತಿದ್ದೇವೆ, ಇದಕ್ಕೂ ಮುನ್ನ ಈ ಬ್ಯಾರಿಕೇಡ್ ಗಳನ್ನು ಇಪಿಟಿಗಳ ಬಳಿ ಅರಣ್ಯದೆಡೆಗೆ ಅಳವಡಿಸಲಾಗಿತ್ತು. ಇದರಿಂದಾಗಿ ಆನೆಗಳಿಗೆ ಬ್ಯಾರಿಕೇಡ್ ಗಳನ್ನು ಹತ್ತಿ ಟ್ರೆಂಚ್ ನ್ನು ದಾಟಲು ಸುಲಭವಾಗುತ್ತಿತ್ತು. ಈಗ ಹೊಸ ವಿಧಾನದಲ್ಲಿ ಆನೆಗಳಿಗೆ ಬ್ಯಾರಿಕೇಡ್ ನ್ನು ದಾಟುವುದು ಕಷ್ಟವಾಗಲಿದೆ ಎಂದು ಬಿಟಿಆರ್ ನ ನಿರ್ದೇಶಕ ರಮೇಶ್ ಕುಮಾರ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com