ಬೆಂಗಳೂರು: ನಗರದ ಯುವಕರೊಂದಿಗೆ ಸುಗಮ ಸಂವಹನಕ್ಕಾಗಿ ಇಸ್ಲಾಂ ವಿದ್ವಾಂಸರಿಗೆ ಆರು ತಿಂಗಳ ಸ್ಪೋಕನ್ ಇಂಗ್ಲಿಷ್ ಕೋರ್ಸ್

ಇಸ್ಲಾಂ ಮಾಹಿತಿ ಕೇಂದ್ರ (IIC) ಎಂಬ ಸರ್ಕಾರೇತರ ಸಂಸ್ಥೆಯು ಇಸ್ಲಾಮಿಕ್ ವಿದ್ವಾಂಸರಿಗೆ ಆರು ತಿಂಗಳ ಸ್ಪೋಕನ್ ಇಂಗ್ಲಿಷ್ ಕೋರ್ಸ್ ನ್ನು ಪ್ರಾರಂಭಿಸಿದೆ.
ಚಿತ್ರವನ್ನು ಪ್ರತಿನಿಧಿಸುವ ಉದ್ದೇಶಕ್ಕಾಗಿ ಬಳಸಲಾಗಿದೆ
ಚಿತ್ರವನ್ನು ಪ್ರತಿನಿಧಿಸುವ ಉದ್ದೇಶಕ್ಕಾಗಿ ಬಳಸಲಾಗಿದೆ
Updated on

ಬೆಂಗಳೂರು: ಇಸ್ಲಾಂ ಮಾಹಿತಿ ಕೇಂದ್ರ (IIC) ಎಂಬ ಸರ್ಕಾರೇತರ ಸಂಸ್ಥೆಯು ಇಸ್ಲಾಮಿಕ್ ವಿದ್ವಾಂಸರಿಗೆ ಆರು ತಿಂಗಳ ಸ್ಪೋಕನ್ ಇಂಗ್ಲಿಷ್ ಕೋರ್ಸ್ ನ್ನು ಪ್ರಾರಂಭಿಸಿದೆ. ಈ ಕುರಿತು ಮಾತನಾಡಿದ ಐಐಸಿ ಅಧ್ಯಕ್ಷ ಜುಹೆದ್ ಖಾನ್, ಇಂಗ್ಲಿಷ್ ಜ್ಞಾನವಿಲ್ಲದೆ, ಅನೇಕ ಇಸ್ಲಾಮಿಕ್ ವಿದ್ವಾಂಸರು ನಗರ ಮತ್ತು ಪಟ್ಟಣಗಳಲ್ಲಿ ವಾಸಿಸುವ ಸಮುದಾಯದ ಯುವಕರು ಎತ್ತುವ ಧಾರ್ಮಿಕ ವಿಷಯಗಳ ಬಗ್ಗೆ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ, ಅವರಿಗೆ ಸಹಾಯ ಮಾಡಲು ಕೋರ್ಸ್ ನ್ನು ವಿನ್ಯಾಸಗೊಳಿಸಲಾಗಿದೆ.

“ಹಲವು ಅಂತಾರಾಷ್ಟ್ರೀಯ ಉಗ್ರಗಾಮಿ ಸಂಘಟನೆಗಳು ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಧರ್ಮದ ಹೆಸರಿನಲ್ಲಿ ಸಮುದಾಯದ ಯುವಕರನ್ನು ದಾರಿ ತಪ್ಪಿಸುತ್ತಿವೆ. ವಿದ್ಯಾವಂತ ಯುವಕರನ್ನು ಗುರಿಯಾಗಿಸಿಕೊಂಡು ಬ್ರೈನ್ ವಾಶ್ ಮಾಡುವ ಪ್ರಯತ್ನಗಳು ನಡೆಯುತ್ತಿವೆ. ವಿದ್ವಾಂಸರು ಧರ್ಮ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಜನರ ಬಳಿಗೆ ಕೊಂಡೊಯ್ಯುವವರಾಗಿರುವುದರಿಂದ, ಅವರು ಸರಿಯಾದ ಜ್ಞಾನವನ್ನು ಬೋಧಿಸಲು ಭಾಷೆಯನ್ನು ಚೆನ್ನಾಗಿ ತಿಳಿದಿರುವುದು ಮುಖ್ಯವಾಗಿರುತ್ತದೆ'' ಎಂದರು. 

ಸಮುದಾಯದ ಯುವಕರು ಉಗ್ರಗಾಮಿ ಸಂಘಟನೆಗಳಿಗೆ ಬಲಿಯಾಗುವುದನ್ನು ತಡೆಯುವುದು ಇದರ ಮುಖ್ಯ ಉದ್ದೇಶವಾಗಿದೆ. ವಿದ್ವಾಂಸರಿಗೆ ನಿರರ್ಗಳವಾಗಿ ಇಂಗ್ಲಿಷ್ ಮಾತನಾಡಲು ಕಲಿಸಲಾಗುವುದು. ಕಳೆದ ಶುಕ್ರವಾರ ಇಪ್ಪತ್ತೈದು ವಿದ್ವಾಂಸರು ತರಗತಿಗಳಿಗೆ ಹಾಜರಾಗಿದ್ದರು ಎಂದು ಹೇಳಿದರು. 

ಐವತ್ತು ವಿದ್ವಾಂಸರು ಕೋರ್ಸ್‌ಗೆ ದಾಖಲಾಗಿದ್ದಾರೆ. ತಮಿಳುನಾಡು ಮತ್ತು ಆಂಧ್ರಪ್ರದೇಶದ ವಿದ್ವಾಂಸರು ಕೋರ್ಸ್‌ನಲ್ಲಿ ಆಸಕ್ತಿ ತೋರಿಸಿದ್ದಾರೆ ಎಂದರು. 

ನಗರದ ಡಿ.ಜೆ.ಹಳ್ಳಿ, ಶಿವಾಜಿನಗರ ಮತ್ತಿತರ ಪ್ರದೇಶಗಳಲ್ಲಿನ ಮದರಸಾ ಮತ್ತು ಮಸೀದಿಗಳ ವಿದ್ವಾಂಸರಿಗೆ ಈ ಕೋರ್ಸ್ ನೀಡಲಾಗುತ್ತಿದೆ. ಅವರಲ್ಲದೆ, ಸಮುದಾಯದ ವ್ಯಾಪಾರಿಗಳು ಮತ್ತು ಉದ್ಯಮಿಗಳಿಗೂ ಪ್ರವೇಶ ಪಡೆಯಲು ಪ್ರೋತ್ಸಾಹಿಸಲಾಗುತ್ತಿದೆ. ವಿದ್ವಾಂಸರು ಮತ್ತು ಪ್ರವೇಶ ಪಡೆಯುವವರ ಸಂಖ್ಯೆ ಹೆಚ್ಚಾದರೆ ಆನ್‌ಲೈನ್‌ನಲ್ಲಿ ಕೋರ್ಸ್ ನೀಡಲು ಐಐಸಿ ಸಿದ್ಧವಿದೆ ಎಂದರು.

ಡಿ.ಜೆ.ಹಳ್ಳಿಯ ಮಸೀದಿ-ಇ-ಘಾನಿಯಲ್ಲಿ ಮಕ್ಕಳಿಗೆ ಅರೇಬಿಕ್ ಕಲಿಸುವ ಅಬ್ದುಲ್ ರಹೀಂ, ನಾನು ನಾಲ್ಕು ವರ್ಷಗಳಿಂದ ಅರೇಬಿಕ್ ಕಲಿಸುತ್ತಿದ್ದೇನೆ. ಈಗ ಇಂಗ್ಲಿಷ್ ಕಲಿಯಲು ಬಯಸುತ್ತೇನೆ. ಈ ಕೋರ್ಸ್ ನನಗೆ ಇಸ್ಲಾಮಿಕ್ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಮಕ್ಕಳಿಗೆ ತಲುಪಿಸಲು ಮತ್ತು ಧಾರ್ಮಿಕ ವಿಷಯಗಳ ಬಗ್ಗೆ ಅವರ ಅನುಮಾನಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com