ಧಾರವಾಡ: ಕರ್ನಾಟಕ ವಿವಿ ಸಹಾಯಕ ಪ್ರಾಧ್ಯಾಪಕಿ ಚೇಂಬರ್​ನಲ್ಲಿ ವಾಮಾಚಾರ!

ಧಾರವಾಡದ ಪ್ರತಿಷ್ಠಿತ ಕರ್ನಾಟಕ ವಿಶ್ವವಿದ್ಯಾಲಯದ ಇತಿಹಾಸ ಮತ್ತು ಶಾಸನಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಅವರ ಚೇಂಬರ್‌ನಲ್ಲಿ ವಾಮಾಚಾರ ಮಾಡಿರುವುದಾಗಿ ಹೇಳಲಾಗಿದ್ದು, ಅದಕ್ಕೆ ಸಂಬಂಧಿಸಿದ ಕುರುಹುಗಳು ಪತ್ತೆಯಾಗಿವೆ.
ಬ್ಲ್ಯಾಕ್ ಮ್ಯಾಜಿಕ್
ಬ್ಲ್ಯಾಕ್ ಮ್ಯಾಜಿಕ್

ಧಾರವಾಡ: ಧಾರವಾಡದ ಪ್ರತಿಷ್ಠಿತ ಕರ್ನಾಟಕ ವಿಶ್ವವಿದ್ಯಾಲಯದ ಇತಿಹಾಸ ಮತ್ತು ಶಾಸನಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಅವರ ಚೇಂಬರ್‌ನಲ್ಲಿ ವಾಮಾಚಾರ ಮಾಡಿರುವುದಾಗಿ ಹೇಳಲಾಗಿದ್ದು, ಅದಕ್ಕೆ ಸಂಬಂಧಿಸಿದ ಕುರುಹುಗಳು ಪತ್ತೆಯಾಗಿವೆ.

ಪ್ರಾಚೀನ ಇತಿಹಾಸ ಮತ್ತು ಶಾಸನಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿಯಾಗಿರುವ ಡಾ.ರಮಾ ಗುಂಡೂರಾವ್‌ ಅವರ ಚೇಂಬರ್‌ನಲ್ಲಿ ವಾಮಾಚಾರ ಮಾಡಿದ್ದು ಪತ್ತೆಯಾಗಿದೆ. ರಮಾ ಅವರು ಕೆಲವು ದಿನದ ಹಿಂದೆ ರಜೆಯಲ್ಲಿ ತೆರಳಿದ್ದರು. ಶುಕ್ರವಾರ ಅವರು ಮರಳಿ ಬಂದು ತಮ್ಮ ಕೊಠಡಿಯ ಬಾಗಿಲು ತೆಗೆದಾಗ ವಾಮಾಚಾರ ಮಾಡಿರುವುದು ಬೆಳಕಿಗೆ ಬಂದಿದೆ. ಕೊಠಡಿಯ ಕೀ ಅವರ ಬಳಿಯೇ ಇದ್ದು ಈ ವಸ್ತುಗಳನ್ನು ಕಿಟಕಿಯ ಮೂಲಕ ಒಳಗೆ ಎಸೆಯಲಾಗಿದೆ.

ಅಲ್ಲಿರುವ ಮೇಜಿನ ಮೇಲೆ ಕಪ್ಪು ಬಣ್ಣದ ಮಾಟದ ಗೊಂಬೆ, ಮೂರು ನಿಂಬೆ ಹಣ್ಣು ಎಸೆಯಲಾಗಿದೆ. ಜತೆಗೆ ಅರಿಷಿಣ-ಕುಂಕುಮ ಹಾಕಲಾಗಿದೆ. ಕಿಟಕಿ ಮೂಲಕ ಈ ವಸ್ತುಗಳನ್ನು ಎಸೆಯಲಾಗಿದೆ. ಎರಡು ದಿನಗಳ ಹಿಂದೆ ವಾಮಾಚಾರ ಮಾಡಿರುವ ಅನುಮಾನ ಅಲ್ಲಿರುವ ವಸ್ತುಗಳನ್ನು ನೋಡಿದಾಗ ಬರುತ್ತದೆ.

ಬಾಗಿಲು ತೆರೆಯುತ್ತಿದ್ದಂತೆಯೇ ಒಳಗಡೆ ವಾಮಾಚಾರ ಸಂಬಂಧಿತ ವಸ್ತುಗಳನ್ನು ನೋಡಿದ ಡಾ. ರಮಾ ಅವರು ಬೆಚ್ಚಿ ಬಿದ್ದು ಹೊರಗೋಡಿ ಬಂದಿದ್ದಾರೆ. ಮತ್ತು ಕುಲಪತಿಗಳಿಗೆ ದೂರು ನೀಡಿದ್ದಾರೆ.

ಈ ಘಟನೆಯಲ್ಲಿ ವಿಭಾಗದ ಪ್ರಾಧ್ಯಾಪಕರೊಬ್ಬರ ಮೇಲೆ ಸಂಶಯ ವ್ಯಕ್ತಪಡಿಸಲಾಗುತ್ತಿದೆ. ರಮಾ ಅವರ ಅಳಿಯ ಇದೇ ವಿಭಾಗದಲ್ಲಿ ಉಪನ್ಯಾಸಕರಾಗಿದ್ದಾರೆ. ಈ ಚೇಂಬರನ್ನು ಅವರಿಗೆ ಬಿಟ್ಟುಕೊಡಬೇಕು ಎಂಬ ವಿಚಾರದಲ್ಲಿ ರಮ್ಯಾ ಮತ್ತು ಆ ಉಪನ್ಯಾಸಕರ ನಡುವೆ ಜಗಳ ನಡೆದಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com