ಕೆಎಸ್ ಆರ್ ಟಿಸಿಯ 'ನಮ್ಮ ಕಾರ್ಗೋ' ಟ್ರಕ್ ಸೇವೆಗೆ ಸಚಿವ ರಾಮಲಿಂಗಾ ರೆಡ್ಡಿ ಚಾಲನೆ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ ಆರ್ ಟಿಸಿ)ಯ ‘ನಮ್ಮ ಕಾರ್ಗೋ’ ಟ್ರಕ್ ಸೇವೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಶನಿವಾರ ಚಾಲನೆ ನೀಡಿದರು.
'ನಮ್ಮ ಕಾರ್ಗೋ' ಟ್ರಕ್ ಸೇವೆಗೆ ಸಚಿವ ರಾಮಲಿಂಗಾ ರೆಡ್ಡಿ ಚಾಲನೆ
'ನಮ್ಮ ಕಾರ್ಗೋ' ಟ್ರಕ್ ಸೇವೆಗೆ ಸಚಿವ ರಾಮಲಿಂಗಾ ರೆಡ್ಡಿ ಚಾಲನೆ
Updated on

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ ಆರ್ ಟಿಸಿ)ಯ ‘ನಮ್ಮ ಕಾರ್ಗೋ’ ಟ್ರಕ್ ಸೇವೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಶನಿವಾರ ಚಾಲನೆ ನೀಡಿದರು.

ಇಂದು 20 ಟ್ರಕ್ ಗಳಿಗೆ ಚಾಲನೆ ನೀಡಿ ಮಾತನಾಡಿದ ಸಾರಿಗೆ ಸಚಿವರು, ಒಂದು ತಿಂಗಳಲ್ಲಿ 100 ಟ್ರಕ್‌ಗಳನ್ನು ಮತ್ತು ಮುಂದಿನ ವರ್ಷದ ಅಂತ್ಯದ ವೇಳೆಗೆ 500 ಟ್ರಕ್‌ಗಳನ್ನು ಕಾರ್ಗೋ ಸೇವೆಗೆ ಒದಗಿಸಲಾಗುವುದು ಎಂದು ಹೇಳಿದರು.

ಈ ಟ್ರಕ್‌ಗಳ ಕಾರ್ಯಾಚರಣೆ ಮತ್ತು ನಿರ್ವಹಣೆಗಾಗಿ ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣವನ್ನು ಡಿಪೋವಾಗಿ ಬಳಸಿಕೊಳ್ಳಲಾಗುವುದು ಮತ್ತು ವಾಣಿಜ್ಯ ಆದಾಯ ಗಳಿಸಲು ಉಳಿದ ಖಾಲಿ ಜಾಗವನ್ನು ಸರ್ಕಾರಿ ಕಂಪನಿಗಳಿಗೆ ನೀಡಲಾಗುವುದು ಎಂದು ರೆಡ್ಡಿ ತಿಳಿಸಿದರು.

ಕೆಎಸ್‌ಆರ್‌ಟಿಸಿ 2021 ರಲ್ಲಿಯೇ ಬಸ್ ಗಳಲ್ಲಿ ತನ್ನ ಸರಕು ವ್ಯಾಪಾರ ಸೇವೆಯನ್ನು ಪ್ರಾರಂಭಿಸಿತು. ಇದೀಗ ಸಾರಿಗೆ ಸಂಸ್ಥೆ ಹೆಚ್ಚು ಭಾರವಾದ ಸರಕುಗಳನ್ನು ಸಾಗಿಸಲು ಟ್ರಕ್‌ಗಳನ್ನು ಬಳಸಲು ಆರಂಭಿಸಿದೆ. ಈಗ ಆರು ಚಕ್ರಗಳ ಟ್ರಕ್​​ನಲ್ಲಿ 6 ಟನ್ ಸರಕುಗಳನ್ನು ಸಾಗಿಸಬಹುದಾಗಿದೆ.

ಕೆಎಸ್‌ಆರ್‌ಟಿಸಿ ಪ್ರಕಾರ, ಈ ಟ್ರಕ್‌ಗಳು ಬೆಂಗಳೂರು, ಮೈಸೂರು, ತುಮಕೂರು, ಹಾಸನ, ಮಂಗಳೂರು, ಶಿವಮೊಗ್ಗ, ಚಿಕ್ಕಮಗಳೂರು, ಕೋಲಾರ, ದಾವಣಗೆರೆ ಸೇರಿದಂತೆ ರಾಜ್ಯದ ವಿವಿಧ ಸ್ಥಳಗಳಿಂದ ಕಾರ್ಯನಿರ್ವಹಿಸುತ್ತವೆ. ಈ ಕುರಿತು ಉತ್ತಮ ಪ್ರತಿಕ್ರಿಯೆ ಬಂದಲ್ಲಿ, ಹೆಚ್ಚಿನ ಟ್ರಕ್‌ಗಳನ್ನು ಕೊಂಡುಕೊಂಡು ಇನ್ನಷ್ಟು ಜಿಲ್ಲೆಗಳಿಂದ ಸಂಚರಿಸಲಿವೆ. ಆರಂಭದಲ್ಲಿ, ಸಾರಿಗೆ ಇಲಾಖೆಯು ಔಷಧಿ, ಜವಳಿ, ಆಹಾರ ಉದ್ಯಮಗಳಿಂದ ಸರಕುಗಳನ್ನು ಸಾಗಿಸಲು ಯೋಜಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com