ಈಜಿಪುರ ಎಲಿವೇಟೆಡ್ ಕಾರಿಡಾರ್ ಯೋಜನೆ ಕಾಮಗಾರಿ ಜನವರಿ 2024ಕ್ಕೆ ಆರಂಭ

ಬಹು ನಿರೀಕ್ಷಿತ ಈಜಿಪುರ ಎಲಿವೇಟೆಡ್ ಕಾರಿಡಾರ್ ಯೋಜನೆಯ ಕಾಮಗಾರಿ 176.86 ಕೋಟಿ ರೂಪಾಯಿ ವೆಚ್ಚದಲ್ಲಿ ಹೊಸವರ್ಷ ಜನವರಿಯಲ್ಲಿ ಪ್ರಾರಂಭವಾಗಲಿದ್ದು, ಹೈದರಾಬಾದ್ ಮೂಲದ ಬೊಳ್ಳಿನೇನಿ ಸೀನಯ್ಯ ಕಂಪನಿ ಪ್ರೈವೇಟ್ ಲಿಮಿಟೆಡ್ (BSCPL) ನವೆಂಬರ್ 15 ರಂದು ಬಿಬಿಎಂಪಿಯೊಂದಿಗೆ ಅಪೂರ್ಣ ಯೋಜನೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಒಪ್ಪಂದ ಮಾಡಿಕೊಂಡಿತ್ತು. 
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ
Updated on

ಬೆಂಗಳೂರು: ಬಹು ನಿರೀಕ್ಷಿತ ಈಜಿಪುರ ಎಲಿವೇಟೆಡ್ ಕಾರಿಡಾರ್ ಯೋಜನೆಯ ಕಾಮಗಾರಿ 176.86 ಕೋಟಿ ರೂಪಾಯಿ ವೆಚ್ಚದಲ್ಲಿ ಹೊಸವರ್ಷ ಜನವರಿಯಲ್ಲಿ ಪ್ರಾರಂಭವಾಗಲಿದ್ದು, ಹೈದರಾಬಾದ್ ಮೂಲದ ಬೊಳ್ಳಿನೇನಿ ಸೀನಯ್ಯ ಕಂಪನಿ ಪ್ರೈವೇಟ್ ಲಿಮಿಟೆಡ್ (BSCPL) ನವೆಂಬರ್ 15 ರಂದು ಬಿಬಿಎಂಪಿಯೊಂದಿಗೆ ಅಪೂರ್ಣ ಯೋಜನೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಒಪ್ಪಂದ ಮಾಡಿಕೊಂಡಿತ್ತು. 

ಈ ಯೋಜನೆಯು 15 ತಿಂಗಳಲ್ಲಿ ಪೂರ್ಣಗೊಳ್ಳಲಿದ್ದು, ಆಗ್ನೇಯ ಬೆಂಗಳೂರನ್ನು ಪೂರ್ವ ಮತ್ತು ಪಶ್ಚಿಮ ಬೆಂಗಳೂರಿಗೆ ಸಂಪರ್ಕಿಸುತ್ತದೆ. ಆದರೆ, ಬಿಬಿಎಂಪಿ ಒಪ್ಪಂದದ ಪ್ರಕಾರ ಇನ್ನು 30 ದಿನಗಳೊಳಗೆ ಏಜೆನ್ಸಿಗೆ ಶೇಕಡಾ 5 ರಷ್ಟು ಮುಂಗಡವಾಗಿ 8 ಕೋಟಿ ರೂಪಾಯಿಗಳನ್ನು ನೀಡಬೇಕಿದೆ. ಹೀಗಾಗಿ ಹೊಸ ಏಜೆನ್ಸಿಗೆ ಪಾವತಿ ವಿಳಂಬವಾಗಿರುವುದರಿಂದ ಅರ್ಧಕ್ಕೆ ಯೋಜನೆ ಕೈಬಿಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. 

ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ 2017 ರಲ್ಲಿ ಈ ಯೋಜನೆ ಪ್ರಾರಂಭವಾಯಿತು. ಹಿಂದಿನ ಏಜೆನ್ಸಿಯಾದ ಸಿಂಪ್ಲೆಕ್ಸ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್‌ನಿಂದ ಸುಮಾರು ಶೇಕಡಾ 30ರಷ್ಟು ಕಾಮಗಾರಿ ಪೂರ್ಣಗೊಂಡಿತ್ತು. 2019 ರಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನವಾದ ನಂತರ, ಯೋಜನೆಯು ವಿಳಂಬವಾಯಿತು. ನಂತರ 2021 ರಲ್ಲಿ ಏಜೆನ್ಸಿ ಯೋಜನೆ ಕೈಬಿಟ್ಟಿತು. ಬಿಬಿಎಂಪಿಯು ಆಗ 15 ಕೋಟಿ ರೂಪಾಯಿ ಬಾಕಿ ಮೊತ್ತವನ್ನು ಪಾವತಿಸಬೇಕಾಗಿತ್ತು. ಮತ್ತೊಂದು ಏಜೆನ್ಸಿ ಮುಂದೆ ಬಂದು ಬಿಬಿಎಂಪಿ ಈಗ ಮಾಸಿಕ 8-10 ಕೋಟಿ ರೂಪಾಯಿಗಳನ್ನು ತಪ್ಪದೆ ಪಾವತಿಸಬೇಕು. ಇಲ್ಲದಿದ್ದರೆ ಯೋಜನೆ ಮತ್ತೆ ಸ್ಥಗಿತಗೊಳ್ಳುವ ಸಾಧ್ಯತೆ ಇದೆ ಎಂದು ಅಧಿಕಾರಿಯೊಬ್ಬರು ಹೇಳುತ್ತಾರೆ. 

ಶ್ರೀನಿವಾಗಿಲು-ಈಜಿಪುರ, ಸೋನಿ ವರ್ಲ್ಡ್ ಜಂಕ್ಷನ್, ಬಿಡಿಎ ಕಾಂಪ್ಲೆಕ್ಸ್ ಜಂಕ್ಷನ್, ಮಡಿವಾಳ-ಸರ್ಜಾಪುರ ವಾಟರ್ ಟ್ಯಾಂಕ್ ಜಂಕ್ಷನ್, ಕೇಂದ್ರೀಯ ಸದನ್ ಜಂಕ್ಷನ್ ಮತ್ತು ಬೆಂಗಳೂರು ಪಶ್ಚಿಮ ಹಾಗೂ ಪೂರ್ವ ಭಾಗಕ್ಕೆ ಆಗ್ನೇಯ ಭಾಗದಿಂದ ಸಂಪರ್ಕ ಕಲ್ಪಿಸುವ ಸಂಚಾರ ದಟ್ಟಣೆಯ ಜಂಕ್ಷನ್‌ಗಳನ್ನು ತಪ್ಪಿಸಲು ಈ ಮೇಲ್ಸೇತುವೆ ಸಹಾಯ ಮಾಡುತ್ತದೆ ಎಂದು ಬಿಟಿಎಂ ಲೇಔಟ್ ಶಾಸಕರೂ ಆಗಿರುವ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳುತ್ತಾರೆ. ಹಿಂದಿನ ಬಿಜೆಪಿ ಸರ್ಕಾರವು ಈ ಯೋಜನೆಯಲ್ಲಿ ಆಸಕ್ತಿ ವಹಿಸಲಿಲ್ಲ. ಬಿಜೆಪಿ ಶಾಸಕರ ಆಳ್ವಿಕೆಯ ಪ್ರದೇಶಗಳಿಗೆ ಹಣವನ್ನು ಬದಲಾಯಿಸಿಕೊಂಡರು ಎಂದು ಆರೋಪಿಸುತ್ತಾರೆ. 

ಪ್ರಸ್ತುತ ಕಾಂಗ್ರೆಸ್ ಸರಕಾರದಲ್ಲಿ ಯೋಜನೆಗೆ ಮರುಜೀವ ಬಂದಿದ್ದು, ಶೀಘ್ರದಲ್ಲಿ ಪೂರ್ಣಗೊಳ್ಳಲಿದೆ ಎಂದು ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು. ಕೆಲಸವು ವೇಗವನ್ನು ಪಡೆಯುವ ಮೊದಲು, ಏಜೆನ್ಸಿಯು ಪೂರ್ವ-ಬಿತ್ತರಿಸುವ ಕೆಲಸವನ್ನು ಮತ್ತು ಯೋಜನೆಗಾಗಿ ಗುರುತಿಸಲಾದ ಮರಗಳನ್ನು ಕಡಿಯುವ ಕೆಲಸ ಕೈಗೆತ್ತಿಕೊಂಡಿತು. ಯೋಜನೆಯ ಪ್ರಕಾರ 63 ಮರಗಳನ್ನು ಗುರುತಿಸಲಾಗಿದ್ದು, ಇಲ್ಲಿಯವರೆಗೆ 25 ಮರಗಳನ್ನು ಕಡಿಯಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಂಚಾರದಟ್ಟಣೆಗೆ ಪರಿಹಾರ ಕಂಡುಹಿಡಿಯಲು ಸರ್ಕಾರವು ಉತ್ಸುಕರಾಗಿರುವುದರಿಂದ ಪಾವತಿ ಇನ್ನು ಮುಂದೆ ಸಮಸ್ಯೆಯಾಗುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com