ಏರೋ ಇಂಡಿಯಾ 2023: ತೇಜಸ್ ಯುದ್ಧ ವಿಮಾನ 'ಭಾರತದ ಪೆವಿಲಿಯನ್'ನ ಪ್ರಮುಖ ಆಕರ್ಷಣೆ
ಯಲಹಂಕ ವಾಯುನೆಲೆಯಲ್ಲಿ ಫೆಬ್ರವರಿ 13ರಿಂದ ಫೆಬ್ರವರಿ 17ರವರೆಗೆ ಐದು ದಿನಗಳ ಕಾಲ ನಡೆಯಲಿರುವ ಏಷ್ಯಾದ ಅತಿದೊಡ್ಡ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದಲ್ಲಿ ಹಿಂದೂಸ್ತಾನ್ ಏರೊನಾಟಿಕ್ಸ್ ಲಿಮಿಟೆಡ್(ಎಚ್‌ಎಎಲ್)...
Published: 02nd February 2023 03:15 PM | Last Updated: 02nd February 2023 03:24 PM | A+A A-

ತೇಜಸ್ ಲಘು ಯುದ್ಧ ವಿಮಾನ
ಬೆಂಗಳೂರು: ಯಲಹಂಕ ವಾಯುನೆಲೆಯಲ್ಲಿ ಫೆಬ್ರವರಿ 13ರಿಂದ ಫೆಬ್ರವರಿ 17ರವರೆಗೆ ಐದು ದಿನಗಳ ಕಾಲ ನಡೆಯಲಿರುವ ಏಷ್ಯಾದ ಅತಿದೊಡ್ಡ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದಲ್ಲಿ ಹಿಂದೂಸ್ತಾನ್ ಏರೊನಾಟಿಕ್ಸ್ ಲಿಮಿಟೆಡ್(ಎಚ್‌ಎಎಲ್) ಅಭಿವೃದ್ಧಿಪಡಿಸಿರುವ ಲಘು ಯುದ್ಧ ವಿಮಾನ ಎಲ್‌ಸಿಎ-ತೇಜಸ್ "ಭಾರತದ ಪೆವಿಲಿಯನ್" ನ ಪ್ರಮಖ ಆಕರ್ಷಣೆಯಾಗಲಿದೆ.
ರಕ್ಷಣಾ ಸಚಿವಾಲಯವು ಆಯೋಜಿಸಿರುವ ದ್ವೈವಾರ್ಷಿಕ ಏರೋ ಶೋ ಮತ್ತು ವೈಮಾನಿಕ ಪ್ರದರ್ಶನದ 14ನೇ ಆವೃತ್ತಿಯಲ್ಲಿ ಫಿಕ್ಸೆಡ್ ವಿಂಗ್ ಪ್ರದೇಶದಲ್ಲಿ ಭಾರತದ ಪ್ರಗತಿಯನ್ನು ಪ್ರದರ್ಶಿಸಲು 'ಫಿಕ್ಸೆಡ್ ವಿಂಗ್ ಪ್ಲಾಟ್‌ಫಾರ್ಮ್' ಥೀಮ್ ಆಧಾರಿತ ಪ್ರತ್ಯೇಕ "ಇಂಡಿಯಾ ಪೆವಿಲಿಯನ್" ಅನ್ನು ಹೊಂದಿರಲಿದೆ ಎಂದು ಗುರುವಾರ ರಕ್ಷಣಾ ಇಲಾಖೆಯ ಪ್ರಕಟಣೆ ತಿಳಿಸಿದೆ.
ಇಂಡಿಯಾ ಪೆವಿಲಿಯನ್, ಖಾಸಗಿ ಪಾಲುದಾರಿಕೆಯಲ್ಲಿ ತಯಾರಿಸುತ್ತಿರುವ ಎಲ್‌ಸಿಎ-ತೇಜಸ್ ಯುದ್ಧ ವಿಮಾನಗಳ ವಿವಿಧ ರಚನಾತ್ಮಕ ಮಾಡ್ಯೂಲ್‌ಗಳು, ಸಿಮ್ಯುಲೇಟರ್‌ಗಳು ಮತ್ತು ಸಿಸ್ಟಮ್‌ಗಳ ಪ್ರದರ್ಶನವನ್ನು ಒಳಗೊಂಡಿರುತ್ತದೆ.
ಇದನ್ನು ಓದಿ: ಏರ್ ಶೋ-2023: ಯಲಹಂಕ ವಾಯು ನೆಲೆ ಸುತ್ತಮುತ್ತ ನಿರ್ಮಾಣ ಹಂತದ ಕಟ್ಟಡಗಳ ಮೇಲಿನ ಕ್ರೇನ್ ಎತ್ತರ ತಗ್ಗಿಸಲು ಸೂಚನೆ
LCA ತೇಜಸ್ ಒಂದೇ ಎಂಜಿನ್ ಹೊಂದಿದ್ದು, ಕಡಿಮೆ ತೂಕ, ಹೆಚ್ಚು ಚುರುಕು, ಬಹು-ಪಾತ್ರದ ಸೂಪರ್ಸಾನಿಕ್ ಯುದ್ಧವಿಮಾನವಾಗಿದೆ. ಇದು ಕ್ವಾಡ್ರಪ್ಲೆಕ್ಸ್ ಡಿಜಿಟಲ್ ಫ್ಲೈ-ಬೈ-ವೈರ್ ಫ್ಲೈಟ್ ಕಂಟ್ರೋಲ್ ಸಿಸ್ಟಮ್ (ಎಫ್‌ಸಿಎಸ್) ಜೊತೆಗೆ ಸಂಬಂಧಿತ ಸುಧಾರಿತ ವಿಮಾನ ನಿಯಂತ್ರಣ ವ್ಯವಸ್ಥೆಯನ್ನು ಹೊಂದಿದೆ.