ಬೆಂಗಳೂರು: ಶೇ.50 ರಷ್ಟು ರಿಯಾಯಿತಿಗೆ ಭರ್ಜರಿ ಪ್ರತಿಕ್ರಿಯೆ; ಮೊದಲ ದಿನವೇ 5.60 ಕೋ. ರೂ. ದಂಡ ವಸೂಲಿ!

ಸಂಚಾರಿ ನಿಯಮ ಉಲ್ಲಂಘಿಸಿ ದಂಡ ಬಾಕಿ ಉಳಿಸಿರುವ ಸವಾರರಿಗೆ ಶೇ. 50ರಷ್ಟು ರಿಯಾಯಿತಿ ನೀಡಲಾಗಿದ್ದು, ಶುಕ್ರವಾರ 2,01,828 ಪ್ರಕರಣಗಳಿಗೆ ಸಂಬಂಧಿಸಿ 5,61,45,000 ರೂ. ದಂಡ ಸಂಗ್ರಹವಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಜನರು ಸಂಚಾರಿ ನಿಯಮಗಳನ್ನು ಪಾಲಿಸಬೇಕು ಎಂದು ಸಂಚಾರಿ ಪೊಲೀಸರು ಏನೇನೋ ಕಸರತ್ತು ಮಾಡುತ್ತಾರೆ. ಆದರೆ ಜನ ಮಾತ್ರ ಕ್ಯಾರೇ ಅನ್ನಲ್ಲ. ಸಂಚಾರಿ ನಿಯಮ ಪಾಲಿಸ್ತಿಲ್ಲ, ದಂಡ ಕೂಡಾ ಪಾವತಿ ಮಾಡ್ತಿಲ್ಲ. ಹೀಗಾಗಿ ಸಂಚಾರಿ ಪೊಲೀಸರು ಬೇಸತ್ತು ಹೋಗಿದ್ದರು. ಇದೀಗ ಸೂಪರ್​ ಡಿಸ್ಕೌಂಟ್​ ಕೊಟ್ಟಿದ್ದಾರೆ

ಸಂಚಾರಿ ನಿಯಮ ಉಲ್ಲಂಘಿಸಿ ದಂಡ ಬಾಕಿ ಉಳಿಸಿರುವ ಸವಾರರಿಗೆ ಶೇ. 50ರಷ್ಟು ರಿಯಾಯಿತಿ ನೀಡಲಾಗಿದ್ದು, ಶುಕ್ರವಾರ 2,01,828 ಪ್ರಕರಣಗಳಿಗೆ ಸಂಬಂಧಿಸಿ 5,61,45,000 ರೂ. ದಂಡ ಸಂಗ್ರಹವಾಗಿದೆ.

ಯಾವ ನಿಯಮಗಳ ಉಲ್ಲಂಘನೆಗೆ ಎಷ್ಟು ರಿಯಾಯಿತಿ ಎಂಬ ಕುರಿತು ಸಂಚಾರ ವಿಭಾಗದ ಪೊಲೀಸರು ಶುಕ್ರವಾರ 44 ತರಹದ ನಿಯಮಗಳ ಉಲ್ಲಂಘನೆಯ ಪಟ್ಟಿ ಬಿಡು ಗಡೆ ಮಾಡಿದ್ದಾರೆ. ಇದರ ಬೆನ್ನಲ್ಲೇ ಬೆಂಗಳೂರಿನ ವಾಹನ ಸವಾರರು ದಂಡ ಕಟ್ಟಲು ಮುಗಿಬಿದ್ದಿದ್ದಾರೆ.

ಜನರು ಡಿಸ್ಕೌಂಟ್​ ಅಂದರೆ ಮುಗಿ ಬೀಳ್ತಾರೆ ಅನ್ನೋದನ್ನೇ ಎನ್​ಕ್ಯಾಷ್​ ಮಾಡಿಕೊಂಡ ಟ್ರಾಫಿಕ್ ಪೊಲೀಸರು, 50 ಪರ್ಸೆಂಟ್​ ಡಿಸ್ಕೌಂಟ್​ ಕೊಟ್ಟಿದ್ದಾರೆ. ಇದರೊಂದಿಗೆ ಇಂದು ಒಂದೇ ದಿನ ಬರೋಬ್ಬರಿ 2.1 ಲಕ್ಷ ಕೇಸ್​​ಗಳಿಂದ 5 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಹಣ ಸಂಗ್ರಹವಾಗಿದೆ. ಹೌದು, ಡಿಸ್ಕೌಂಟ್​ ಆಫರ್ ಕೊಟ್ಟ ಮೊದಲ ದಿನವೇ 2,01,828 ಲಕ್ಷ ಪ್ರಕರಣಗಳಲ್ಲಿ ವಾಹನ ಸವಾರರು ದಂಡ ಪಾವತಿ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com