ಕರ್ನಾಟಕ ಸರ್ಕಾರದಿಂದ ಯಾವುದೇ ಹಣ, ಜಮೀನು ಪಡೆದಿಲ್ಲ: ಇಶಾ ಫೌಂಡೇಶನ್
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ತನ್ನ ಯೋಜನೆಗಾಗಿ ಕರ್ನಾಟಕ ಸರ್ಕಾರದಿಂದ ಯಾವುದೇ ಹಣ ಅಥವಾ ಭೂಮಿಯನ್ನು ಪಡೆದಿಲ್ಲ ಎಂದು ಇಶಾ ಫೌಂಡೇಶನ್ ಸೋಮವಾರ ಸ್ಪಷ್ಟಪಡಿಸಿದೆ.
Published: 07th February 2023 12:55 AM | Last Updated: 07th February 2023 07:39 PM | A+A A-

ಜಗ್ಗಿ ವಾಸುದೇವ್
ಬೆಂಗಳೂರು: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ತನ್ನ ಯೋಜನೆಗಾಗಿ ಕರ್ನಾಟಕ ಸರ್ಕಾರದಿಂದ ಯಾವುದೇ ಹಣ ಅಥವಾ ಭೂಮಿಯನ್ನು ಪಡೆದಿಲ್ಲ ಎಂದು ಇಶಾ ಫೌಂಡೇಶನ್ ಸೋಮವಾರ ಸ್ಪಷ್ಟಪಡಿಸಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಅರಣ್ಯ ಇಲಾಖೆಗೆ ಮಣ್ಣಿನ ಸಂರಕ್ಷಣೆಗೆ ಒತ್ತು ನೀಡಿ ರಾಜ್ಯ ಪರಿಸರ ಚಟುವಟಿಕೆಗಳಿಗೆ 100 ಕೋಟಿ ರೂ. ಮೀಸಲಿಟ್ಟಿರುವುದಾಗಿ ಘೋಷಿಸಿದ್ದರು. ಇದನ್ನು ಮಾಧ್ಯಮಗಳು ತಪ್ಪಾಗಿ ವರದಿ ಮಾಡಿದ್ದು, ಇಶಾ ಫೌಂಡೇಶನ್ ಅಥವಾ ಸದ್ಗುರು ಯಾವುದೇ ಹಣ ಪಡೆದಿಲ್ಲ ಎಂದು ಹೇಳಿದೆ.
"ಈಶಾ ಫೌಂಡೇಶನ್ ಅಥವಾ ಸದ್ಗುರುಗಳು ಈಗಿನ ಸರ್ಕಾರದಿಂದ ಅಥವಾ ಕರ್ನಾಟಕದ ಹಿಂದಿನ ಸರ್ಕಾರಗಳಿಂದ ಯಾವುದೇ ಹಣವನ್ನು ಪಡೆದಿಲ್ಲ. ಆಧ್ಯಾತ್ಮಿಕ ಗುರು ಸದ್ಗುರು ಜಗ್ಗಿ ಅವರು ಸ್ಥಾಪಿಸಿದ ಇಶಾ ಫೌಂಡೇಶನ್ ರಾಜ್ಯ ಸರ್ಕಾರದೊಂದಿಗೆ ನೇರವಾಗಿ ಅಥವಾ ಪರೋಕ್ಷವಾಗಿ ಯಾವುದೇ ಹಣಕಾಸಿನ ವಹಿವಾಟುಗಳಲ್ಲಿ ಭಾಗಿಯಾಗಿಲ್ಲ ಎಂದು ಇಶಾ ಫೌಂಡೇಶನ್ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನು ಓದಿ: ಯಥಾಸ್ಥಿತಿ ಜನವರಿ 15ರ ಇಶಾ ಯೋಗ ಕೇಂದ್ರದ ಕಾರ್ಯಕ್ರಮದ ಮೇಲೆ ಪರಿಣಾಮ ಬೀರಲ್ಲ: ಹೈಕೋರ್ಟ್ ಸ್ಪಷ್ಟನೆ
"ಚಿಕ್ಕಬಳ್ಳಾಪುರದ ಸದ್ಗುರು ಸನ್ನಿಧಿಯಲ್ಲಿರುವ ಎಲ್ಲಾ ಜಮೀನನ್ನು ಮೂಲ ಮಾಲೀಕರಿಂದ ಮಾರುಕಟ್ಟೆ ಮೌಲ್ಯ ನೀಡಿ ಖರೀದಿಸಲಾಗಿದೆ" ಎಂದು ಇಶಾ ಫೌಂಡೇಶನ್ ಹೇಳಿದೆ.
ಜನವರಿ 15 ರಂದು ಉದ್ಘಾಟನೆಯಾದ ಆದಿಯೋಗಿ ಪ್ರತಿಮೆಯು ನಂದಿ ಬೆಟ್ಟದಿಂದ 31 ಕಿಮೀ ದೂರದಲ್ಲಿದೆ ಎಂದು ಫೌಂಡೇಶನ್ ತಿಳಿಸಿದೆ.