ನಂದಿನ ಜಂಬೂ ಪ್ಯಾಕೆಟ್ ಹಾಲಿನ ದರ 3 ರೂ ಹೆಚ್ಚಳ
ರಾಜ್ಯ ಚುನಾವಣೆ ಹೊಸ್ತಿಲಿನಲ್ಲಿ ನಂದಿನಿ ಜಂಬೂ ಹಾಲಿನ ದರ ಹೆಚ್ಚಳ ಮಾಡಲಾಗಿದೆ. ನಂದಿನಿ ಹಾಲು, ಮೊಸರು, ತುಪ್ಪ ಸೇರಿದಂತೆ ನಂದಿನಿ ಉತ್ಪನ್ನಗಳ ದರವನ್ನು ಕೆಎಂಎಫ್ ನಿಂದ ಇತ್ತೀಚೆಗೆ ಹೆಚ್ಚಳ ಮಾಡಿತ್ತು. ಇದೀಗ ನಂದಿನ ಜಂಬೂ ಹಾಲಿನ ದರ 3 ರೂಪಾಯಿ ಹೆಚ್ಚಳವಾಗಿದೆ.
Published: 11th February 2023 09:31 AM | Last Updated: 11th February 2023 09:31 AM | A+A A-

ನಂದಿನಿ ಹಾಲಿನ ಪ್ಯಾಕೆಟ್ ಸಾಂದರ್ಭಿಕ ಚಿತ್ರ
ಬೆಂಗಳೂರು: ರಾಜ್ಯ ಚುನಾವಣೆ ಹೊಸ್ತಿಲಿನಲ್ಲಿ ನಂದಿನಿ ಜಂಬೂ ಹಾಲಿನ ದರ ಹೆಚ್ಚಳ ಮಾಡಲಾಗಿದೆ. ನಂದಿನಿ ಹಾಲು, ಮೊಸರು, ತುಪ್ಪ ಸೇರಿದಂತೆ ನಂದಿನಿ ಉತ್ಪನ್ನಗಳ ದರವನ್ನು ಕೆಎಂಎಫ್ ನಿಂದ ಇತ್ತೀಚೆಗೆ ಹೆಚ್ಚಳ ಮಾಡಿತ್ತು. ಇದೀಗ ನಂದಿನ ಜಂಬೂ ಹಾಲಿನ ದರ 3 ರೂಪಾಯಿ ಹೆಚ್ಚಳವಾಗಿದೆ.
ಈ ದರ ಇಂದಿನಿಂದಲೇ ಜಾರಿಗೆ ಬರಲಿದೆ. ಈ ಕುರಿತಂತೆ ಮಾಹಿತಿ ನೀಡಿರುವ ಕೆಎಂಎಫ್, ಜಂಬೂ ಪ್ಯಾಕೇಟ್ ಹಾಲಿನ ದರವನ್ನು 3 ರೂ ಹೆಚ್ಚಳ ಮಾಡಲಾಗುತ್ತಿದೆ. ದರ ಹೆಚ್ಚಳದ ಹಿನ್ನಲೆಯಲ್ಲಿ ನಂದಿನಿ ಜಂಬೂ ಪ್ಯಾಕೇಟ್ ಹಾಲಿನ ದರಗಳು ನಾಳೆಯಿಂದ 231 ರಿಂದ 234 ರೂಪಾಯಿಗೆ ಏರಿಕೆಯಾಗಲಿದೆ ಎಂದು ಹೇಳಿದೆ.
ನಂದಿನಿ ಜಂಬೂ ಪ್ಯಾಕೇಟ್ ಹಾಲು 6 ಲೀಟರ್ ಸಾಮರ್ಥ್ಯದ್ದಾಗಿದೆ. ಈ ದರವನ್ನು ಇಂದಿನಿಂದ ಜಾರಿಗೆ ಬರುವಂತೆ 3 ರೂ ಹೆಚ್ಚಿಸಿದ ಪರಿಣಾಮ 234 ರೂಪಾಯಿ ದರವನ್ನು ಇನ್ನು ಮುಂದೆ ಗ್ರಾಹಕರು ನೀಡಬೇಕು.