7ನೇ ವೇತನ ಆಯೋಗದ ವರದಿ ಶೀಘ್ರವೇ ಜಾರಿಗೊಳಿಸಿ: ಸರ್ಕಾರಕ್ಕೆ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಒತ್ತಾಯ
ರಾಜ್ಯ ಸರ್ಕಾರಿ ನೌಕರರ ದೀರ್ಘಕಾಲದ ಬೇಡಿಕೆಯಾದ 7ನೇ ವೇತನ ಆಯೋಗದ ವರದಿಯನ್ನು ಕೂಡಲೇ ಜಾರಿಗೊಳಿಸಬೇಕೆಂದು ತಮ್ಮ ಕೊನೆಯ ಅಧಿವೇಶನ ಕಲಾಪದಲ್ಲಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತಮ್ಮದೇ ಪಕ್ಷದ ಸರ್ಕಾರವನ್ನು ಒತ್ತಾಯಿಸಿದ್ದಾರೆ.
Published: 23rd February 2023 11:53 AM | Last Updated: 23rd February 2023 08:46 PM | A+A A-

ಬಿ ಎಸ್ ಯಡಿಯೂರಪ್ಪ
ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ದೀರ್ಘಕಾಲದ ಬೇಡಿಕೆಯಾದ 7ನೇ ವೇತನ ಆಯೋಗದ ವರದಿಯನ್ನು ಕೂಡಲೇ ಜಾರಿಗೊಳಿಸಬೇಕೆಂದು ತಮ್ಮ ಕೊನೆಯ ಅಧಿವೇಶನ ಕಲಾಪದಲ್ಲಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತಮ್ಮದೇ ಪಕ್ಷದ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಸರ್ಕಾರಿ ನೌಕರರ ಬೇಡಿಕೆಯಂತೆ 7ನೇ ವೇತನ ಆಯೋಗದ ವರದಿ ಜಾರಿ ಸ್ವಾಭಾವಿಕ ಅಂಶ. ಅದನ್ನು ಜಾರಿಗೆ ತರಬೇಕಾದ್ದು ಸರ್ಕಾರದ ಕೆಲಸ. ಸರ್ಕಾರಿ ನೌಕರರು ಬೀದಿಗಿಳಿದು ಹೋರಾಡಲು ಅವಕಾಶ ಮಾಡಿಕೊಡದೆ 7ನೇ ವೇತನ ಆಯೋಗದ ವರದಿ ಜಾರಿಗೆ ತರುತ್ತೇವೆ ಎಂದು ಮುಖ್ಯಮಂತ್ರಿ ಬೊಮ್ಮಾಯಿಯವರು ಘೋಷಿಸಲಿ ಎಂದರು.
ಇದನ್ನೂ ಓದಿ: ಈ ವರ್ಷವೇ 7ನೇ ವೇತನ ಆಯೋಗ ಜಾರಿ: ಸರ್ಕಾರಿ ನೌಕರರಿಗೆ ಸಿಎಂ ಬೊಮ್ಮಾಯಿ ಭರವಸೆ
ರಾಜ್ಯ ಸರ್ಕಾರಕ್ಕೆ ಗಡುವು: ರಾಜ್ಯ ಸರ್ಕಾರಿ ನೌಕರರು 7ನೇ ವೇತನ ಆಯೋಗದ ವರದಿ ಜಾರಿ ಮತ್ತು ಒಪಿಎಸ್ ಜಾರಿಗೆ ತರುವಂತೆ ಒತ್ತಾಯಿಸಿ ಸರ್ಕಾರಕ್ಕೆ 7 ದಿನಗಳ ಗಡುವು ನೀಡಿದ್ದು ಈಡೇರಿಸದಿದ್ದರೆ ಮಾರ್ಚ್ 1ರಿಂದ ಮುಷ್ಕರ ನಡೆಸುವುದಾಗಿ ಸರ್ಕಾರಿ ನೌಕರರ ಸಂಘ ಎಚ್ಚರಿಕೆ ನೀಡಿದೆ.