ರಾಯಚೂರು: ಒಂದೇ ದಿನ ಆ್ಯಂಬುಲೆನ್ಸ್ ನಲ್ಲಿ ಎರಡು ಹೆರಿಗೆ

ಒಂದೇ ದಿನ ಒಂದೇ 108 ಅಂಬುಲೆನ್ಸ್‌ನಲ್ಲಿ ಪ್ರತ್ಯೇಕ ಸಮಯದಲ್ಲಿ ಎರಡು ಹೆರಿಗೆಗಳಾದ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ರಾಯಚೂರು: ಒಂದೇ ದಿನ ಒಂದೇ 108 ಅಂಬುಲೆನ್ಸ್‌ನಲ್ಲಿ ಪ್ರತ್ಯೇಕ ಸಮಯದಲ್ಲಿ ಎರಡು ಹೆರಿಗೆಗಳಾದ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.

ಸಿರವಾರ ತಾಲೂಕಿನ ಕುರುಕುಂದ ಹಾಗೂ ದೇವದುರ್ಗ ತಾಲೂಕಿನ ಜಂಬಲದಿನ್ನಿ ಗ್ರಾಮದ ಗರ್ಭಿಣಿಯರಿಗೆ ಆಸ್ಪತ್ರೆಗೆ ತೆರಳುವಾಗ ಅಂಬುಲೆನ್ಸ್‌ನಲ್ಲೇ ಹೆರಿಗೆ ನೋವು ಕಾಣಿಸಿಕೊಂಡಿದ್ದು 108 ಸಿಬ್ಬಂದಿಯೇ ಹೆರಿಗೆ ಮಾಡಿಸಿದ್ದಾರೆ.

ಹೆರಿಗೆ ಬಳಿಕ ತಾಯಿ, ಮಗು ಸುರಕ್ಷಿತವಾಗಿದ್ದಾರೆ. ಸಿರವಾರ ತಾಲೂಕಿನ ಕುರುಕುಂದ ಗ್ರಾಮದ ನಿವಾಸಿ ಅನೀಫ್ ಬೇಗಂಗೆ ಗಂಡು ಮಗುವಾಗಿದೆ. ಜಂಬಲದಿನ್ನಿ ಗ್ರಾಮದ ಸಂಗೀತಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. 108 ಸಿಬ್ಬಂದಿ ಶುಶ್ರೂಷಕಿ ಲಕ್ಷ್ಮೀ,‌ ಚಾಲಕ ಯಾಸಿನ್‌ಗೆ ಕುಟುಂಬಸ್ಥರು ಧನ್ಯವಾದ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಕಳೆದ ಎಂಟತ್ತು ದಿನಗಳಲ್ಲಿ ಈ ಎರಡು ಹೆರಿಗೆಗಳು ಸೇರಿ ಒಟ್ಟು 5 ಹೆರಿಗೆಗಳು ಅಂಬುಲೆನ್ಸ್‌ನಲ್ಲೇ ಆಗಿವೆ.

ಬುಧವಾರ ಬೆಳಗ್ಗೆ ಸಿರವಾರ ತಾಲೂಕಿನ ಕುರ್ಕುನಾಡ ಗ್ರಾಮದಿಂದ ಮೊದಲ ಕರೆ ಬಂದಿದೆ ಎಂದರು. ಸಕಾಲಕ್ಕೆ ಸ್ಥಳಕ್ಕೆ ಆಗಮಿಸಿದ ಅವರು, ಸಿರವಾರದ ತಾಲೂಕು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಶಬ್ಬೀರ್ ಅವರ ಪತ್ನಿ ಅನೀಸಾ ಬೇಗಂ (25) ಎಂಬುವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಆಂಬ್ಯುಲೆನ್ಸ್ ನಿಲ್ಲಿಸಿ ಲಕ್ಷ್ಮಿ ಹೆರಿಗೆ ಮಾಡಿಸಿ, ತಾಯಿ ಮತ್ತು ಮಗುವನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಲಾಯಿತು.

ಮಧ್ಯಾಹ್ನ ಸಿರವಾರದಿಂದ ಸುಮಾರು 12 ಕಿ.ಮೀ ದೂರದಲ್ಲಿರುವ ಜಂಬಲದಿನ್ನಿಯಿಂದ ಆಂಬ್ಯುಲೆನ್ಸ್‌ಗೆ ಕರೆ ಬಂತು. ಈ ಪ್ರಕರಣದಲ್ಲೂ ಗುರುನಾಥ್ ಅವರ ಪತ್ನಿ ಸಂಗೀತಾ (23) ಎಂಬ ಮಹಿಳೆಯ ಹೆರಿಗೆ ಆಂಬುಲೆನ್ಸ್ ನಲ್ಲೇ ನಡೆದಿದೆ. ನಂತರ ತಾಯಿ ಮತ್ತು ಮಗುವನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಯಾಸಿನ್ ತಿಳಿಸಿದ್ದಾರೆ.

ರಾಯಚೂರು ತಾಲೂಕಿನ ಬಹುತೇಕ ಗ್ರಾಮಗಳಿಗೆ ಉತ್ತಮ ರಸ್ತೆ ಕೊರತೆ ಇದೆ ಎನ್ನಲಾಗಿದೆ. ಆಂಬ್ಯುಲೆನ್ಸ್‌ನಲ್ಲಿ ಹೆರಿಗೆ ನಡೆಯಲು ಇದೂ ಒಂದು ಕಾರಣ ಎನ್ನುತ್ತಾರೆ ಕುರಕುಂದ ಗ್ರಾಮಸ್ಥರು. ಕುರ್ಕುಂದದಲ್ಲಿ ಉತ್ತಮ ಸಂಪರ್ಕ ರಸ್ತೆಯೂ ಇಲ್ಲ ಎಂದು ಅವರು ಹೇಳಿದರು. 108 ವಾಹನದ ಪೈಲಟ್ (ಚಾಲಕ) ಯಾಸಿನ್ ಬಿ ಗಣೇಕಲ್ ಎಕ್ಸ್‌ಪ್ರೆಸ್‌ಗೆ ದೂರವಾಣಿಯಲ್ಲಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com