ಎಸ್ ಸಿ/ಎಸ್ಟಿ ವಿದ್ಯಾರ್ಥಿಗಳಿಗಾಗಿ ನಿರ್ಮಿಸಲಾದ ಹಾಸ್ಟೆಲ್‌ಗಳಲ್ಲಿ ಸೌಲಭ್ಯಗಳ ಕೊರತೆ: ಸಿಎಜಿ ವರದಿ

ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗಾಗಿ ವಸತಿ ನಿಲಯಗಳನ್ನು ನಿರ್ಮಿಸಿದ ಉನ್ನತ ಶಿಕ್ಷಣ ಇಲಾಖೆ ವಸತಿಗೆ ಯಾವುದೇ ಸೌಲಭ್ಯ ಕಲ್ಪಿಸದ ಕಾರಣ ಖಾಲಿ ಬಿದ್ದಿದೆ. ಗುರುವಾರ ಮಂಡಿಸಲಾದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ವರದಿಯು ಹಾಸ್ಟೆಲ್‌ಗಳ ನಿರ್ಮಾಣ ಫಲಪ್ರದವಾಗಿಲ್ಲ ಎಂದು ಹೇಳಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗಾಗಿ ವಸತಿ ನಿಲಯಗಳನ್ನು ನಿರ್ಮಿಸಿದ ಉನ್ನತ ಶಿಕ್ಷಣ ಇಲಾಖೆ ವಸತಿಗೆ ಯಾವುದೇ ಸೌಲಭ್ಯ ಕಲ್ಪಿಸದ ಕಾರಣ ಖಾಲಿ ಬಿದ್ದಿದೆ. ಗುರುವಾರ ಮಂಡಿಸಲಾದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ವರದಿಯು ಹಾಸ್ಟೆಲ್‌ಗಳ  ನಿರ್ಮಾಣ ಫಲಪ್ರದವಾಗಿಲ್ಲ ಎಂದು ಹೇಳಿದೆ.

ವರದಿಯ ಪ್ರಕಾರ, ತಾಂತ್ರಿಕ ಶಿಕ್ಷಣ ನಿರ್ದೇಶನಾಲಯವು ಎಸ್‌ಸಿ ಮತ್ತು ಎಸ್‌ಟಿಗಳ ಹಾಸ್ಟೆಲ್ ಕಾಮಗಾರಿಯನ್ನು ಕರ್ನಾಟಕ ರೂರಲ್ ಇನ್‌ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಲಿಮಿಟೆಡ್‌ಗೆ (ಕೆಆರ್‌ಐಡಿಎಲ್) ಮಾರ್ಚ್ 2014 ರಲ್ಲಿ ಟೆಂಡರ್ ಕರೆಯದೆ ನೀಡಿತ್ತು.

ಮಾರ್ಚ್ 2021 ರಲ್ಲಿ ಸಹ 44 ಹಾಸ್ಟೆಲ್‌ಗಳಲ್ಲಿ 31 ಮಾತ್ರ ಪೂರ್ಣಗೊಂಡಿದೆ. ಮುಂಗಡವಾಗಿ ಹಣ ಬಿಡುಗಡೆ ಮಾಡಿದ್ದರೂ ಕಾಮಗಾರಿ ಅಪೂರ್ಣವಾಗಿದ್ದು, ಅವುಗಳನ್ನು ಮುಗಿಸುವಂತೆ ಕೆಆರ್‌ಐಡಿಎಲ್‌ಗೆ ಒತ್ತಾಯಿಸುವಲ್ಲಿ ಇಲಾಖೆ ವಿಫಲವಾಗಿದೆ.

ರಾಜ್ಯ ಸರ್ಕಾರವು ನಿರ್ವಹಿಸುವ ಎಲ್ಲಾ ಹಾಸ್ಟೆಲ್‌ಗಳು ಗ್ರಾಮೀಣ ಬಡ ವಿದ್ಯಾರ್ಥಿಗಳಿಗೆ  ಬೋರ್ಡಿಂಗ್ ಮತ್ತು ಲಾಡ್ಜಿಂಗ್ ಎರಡನ್ನೂ ಒದಗಿಸಬೇಕು. "ಆದಾಗ್ಯೂ, ಅವರು ನಿರ್ಮಿಸಿದ ಹಾಸ್ಟೆಲ್‌ಗಳು ಉಚಿತ ಆಹಾರದ ಮೂಲಭೂತ ಅವಶ್ಯಕತೆಗಳನ್ನು ಒದಗಿಸುವ ಉದ್ದೇಶವನ್ನು ಹೊಂದಿಲ್ಲ. ಹೀಗಾಗಿಯೇ ಈ ಹಾಸ್ಟೆಲ್‌ಗಳ ಪ್ರವೇಶಕ್ಕೆ ಪಾಲಿ ಟೆಕ್ನಿಕಲ್ ವಿದ್ಯಾರ್ಥಿಗಳು ಸ್ಪಂದಿಸಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಎಸ್‌ಸಿ ಮತ್ತು ಎಸ್‌ಟಿ ಸಮುದಾಯಗಳಿಗೆ ಸೇರಿದ ವಿದ್ಯಾರ್ಥಿಗಳಿಗೆ ವಿಶೇಷ ಪ್ರಯೋಜನಗಳನ್ನು ಒದಗಿಸಲು ಮಾಡಿದ 43.82 ಕೋಟಿ ರೂಪಾಯಿ ಹಣ ವೆಚ್ಚವಾಗಿದ್ದರೂ ಪ್ರಯೋಜನವಾಗಿಲ್ಲ, ಎಂದು ವರದಿ ಹೇಳಿದೆ. ಆದರೆ ಸಮಸ್ಯೆ ಇಲ್ಲಿಗೆ ಮುಗಿಯಲಿಲ್ಲ. "ಈಗಾಗಲೇ ನಿರ್ಮಿಸಿರುವ ಹಾಸ್ಟೆಲ್ ಕಟ್ಟಡಗಳನ್ನು ಉದ್ದೇಶಿತ ಉದ್ದೇಶಕ್ಕೆ ಬಳಸಿಕೊಳ್ಳಲು ಸಾಧ್ಯವಾಗದಿದ್ದರೂ, ಇಲಾಖೆಯು ತನ್ನ ಕ್ರಿಯಾ ಯೋಜನೆಯಲ್ಲಿ 44 ಹಾಸ್ಟೆಲ್‌ಗಳ ಪೈಕಿ 43 ರಲ್ಲಿ ಹೆಚ್ಚುವರಿ ಕೊಠಡಿಗಳನ್ನು 27.9 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ನಿರ್ಮಿಸಲು ಪ್ರಸ್ತಾಪಿಸಿದೆ.

ಯಾವುದೇ ಪರಿಶೀಲನೆ ನಡೆಸದೆ ಕ್ರಿಯಾ ಯೋಜನೆಗೂ ಅನುಮೋದನೆ ನೀಡಲಾಗಿದೆ. 31 ಪೂರ್ಣಗೊಂಡಿರುವ ಹಾಸ್ಟೆಲ್‌ಗಳ ಪ್ರತಿ ಹಾಸ್ಟೆಲ್‌ನಲ್ಲಿ 6 ಹೆಚ್ಚುವರಿ ಕೊಠಡಿಗಳನ್ನು ನಿರ್ಮಿಸಲು ರಾಜ್ಯ ಸರ್ಕಾರವು 90 ಲಕ್ಷ ರೂ. ವೆಚ್ಚದಲ್ಲಿ 27.90 ಕೋಟಿ ರೂ.ಗಳ ಮೊತ್ತವನ್ನು ಕರ್ನಾಟಕ ಗೃಹ ಮಂಡಳಿಗೆ (ಕೆಎಚ್‌ಬಿ) ಬಿಡುಗಡೆ ಮಾಡಿದೆ.

ಉಚಿತ ಆಹಾರವನ್ನು ನೀಡಲು ಉದ್ದೇಶಿಸದ ಹಾಸ್ಟೆಲ್ ಕಟ್ಟಡಗಳ ನಿರ್ಮಾಣ ಮತ್ತು ವಿಸ್ತರಣೆಗೆ ಇಲಾಖೆಯು 64.59 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದ್ದು ಅನ್ಯಾಯವಾಗಿದೆ ಮತ್ತು ವಿದ್ಯಾರ್ಥಿಗಳ ಸ್ಪಂದಿಸದ ಕಾರಣ ಉದ್ದೇಶಿತ ಸಮುದಾಯಕ್ಕೆ ಪ್ರಯೋಜನವಾಗಲು ವಿಫಲವಾಗಿದೆ ಎಂದು ವರದಿ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com