'ಸ್ಯಾಂಟ್ರೋ' ಸಂಸ್ಕೃತಿ ಆರಂಭವಾಗಿದ್ದೇ ಕಾಂಗ್ರೆಸ್ ನಿಂದ, ಇಂಥಹ ಸಂಸ್ಕೃತಿಗಳಿಗೆ ಕಾಂಗ್ರೆಸ್ ಮಹಾದ್ವಾರ: ಸಿಎಂ ಬೊಮ್ಮಾಯಿ

ಕಾಂಗ್ರೆಸ್ ರಾಜಕೀಯವಾಗಿ ದಿವಾಳಿತನದತ್ತ ಸಾಗಿದೆ. ಮೊದಲನೆಯದಾಗಿ ಸ್ಯಾಂಟ್ರೊ ರವಿ ಬಿಜೆಪಿ ಕಾರ್ಯಕರ್ತ ಹೌದೇ, ಅಲ್ಲವೇ ಎಂದು ಪರಿಶೀಲಿಸುವಂತೆ ನಾನು ಸೂಚಿಸಿದ್ದೇನೆ. ಕಾಂಗ್ರೆಸ್ ನಲ್ಲಿ ಎಂಥವರಿದ್ದಾರೆ ಎಂದು ದಿನೇಶ್ ಗುಂಡೂರಾವ್ ಅವರಿಗೆ ಗೊತ್ತಿದೆ, ನಾನು ಅವರ ಮಟ್ಟಕ್ಕೆ ಇಳಿಯುವುದಿಲ್ಲ. ಇಂಥಹ ಎಲ್ಲ ಸಂಸ್ಕೃತಿಗಳು ಕಾಂಗ್ರೆಸ್ ನಲ್ಲಿ ಬರುವುದಕ್ಕೆ ಕಾರಣವೇ ಕಾಂಗ್ರೆಸ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
Updated on

ಹುಬ್ಬಳ್ಳಿ: ಕಾಂಗ್ರೆಸ್ ರಾಜಕೀಯವಾಗಿ ದಿವಾಳಿತನದತ್ತ ಸಾಗಿದೆ. ಮೊದಲನೆಯದಾಗಿ ಸ್ಯಾಂಟ್ರೊ ರವಿ ಬಿಜೆಪಿ ಕಾರ್ಯಕರ್ತ ಹೌದೇ, ಅಲ್ಲವೇ ಎಂದು ಪರಿಶೀಲಿಸುವಂತೆ ನಾನು ಸೂಚಿಸಿದ್ದೇನೆ. ಕಾಂಗ್ರೆಸ್ ನಲ್ಲಿ ಎಂಥವರಿದ್ದಾರೆ ಎಂದು ದಿನೇಶ್ ಗುಂಡೂರಾವ್ ಅವರಿಗೆ ಗೊತ್ತಿದೆ, ನಾನು ಅವರ ಮಟ್ಟಕ್ಕೆ ಇಳಿಯುವುದಿಲ್ಲ. ಇಂಥಹ ಎಲ್ಲ ಸಂಸ್ಕೃತಿಗಳು ಕಾಂಗ್ರೆಸ್ ನಲ್ಲಿ ಬರುವುದಕ್ಕೆ ಕಾರಣವೇ ಕಾಂಗ್ರೆಸ್ ನವರು, ರಾಜಕಾರಣಕ್ಕೆ ಇಂಥವರು ಪ್ರವೇಶ ಮಾಡಲು ಕಾಂಗ್ರೆಸ್ ಮಹಾದ್ವಾರವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಸ್ಯಾಂಟ್ರೋ’ ಸಂಸ್ಕೃತಿ ಆರಂಭವಾಗಿದ್ದೇ ಕಾಂಗ್ರೆಸ್‌ನಿಂದ, ಮೊದಲು ಅವರ ಮನೆಯನ್ನು ಸ್ವಚ್ಛಮಾಡುವುದನ್ನು ಕಲಿಯಲಿ ಎಂದರು.

ಅಖಿಲ ಭಾರತ ಮಟ್ಟದ ಯುವಜನೋತ್ಸವ ಪ್ರಥಮ ಬಾರಿ ಉತ್ತರ ಕರ್ನಾಟಕ ಭಾಗದಲ್ಲಿ ನಡೆಯುತ್ತಿರುವುದು ಖುಷಿಯ ವಿಚಾರ. ಪ್ರಥಮ ಬಾರಿಗೆ ಭಾರತ ದೇಶದಲ್ಲಿ ಡೆಮಾಗ್ರಫಿಕ್ ಡೆವಿಡೆಂಟ್ ಅನ್ನುವ ವಿಚಾರ ಹೇಳಿದವರು ನಮ್ಮ ಪ್ರಧಾನ ಮಂತ್ರಿ ಮೋದಿಯವರು, ಇದುವರೆಗೂ ಜನಸಂಖ್ಯೆ ದೇಶದ ಅಭಿವೃದ್ಧಿಗೆ ಮಾರಕ ಎಂಬ ರೀತಿಯಲ್ಲಿ ನಾವೆಲ್ಲರೂ ಮಾತನಾಡುತ್ತಿದ್ದೆವು. ಆದರೆ ಅದೇ ಜನಸಂಖ್ಯೆಯನ್ನು ವಿಶೇಷವಾಗಿ ಶೇಕಡಾ 40ಕ್ಕಿಂತ ಹೆಚ್ಚಿರುವ ಯುವಜನತೆಯಿಂದ ದೇಶ ಅಭಿವೃದ್ದಿ ಮಾಡಬಹುದು, ಕಟ್ಟಬಹುದು ಎಂಬುದನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಇಂದು ತೋರಿಸಿಕೊಟ್ಟಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ತಿಳಿಸಿದರು.

ಯುವಜನತೆಯಲ್ಲಿ ಕೌಶಲ್ಯ ತುಂಬಿಸಿ, ಅವರಿಗೆ ಅವಕಾಶಗಳನ್ನು ಕೊಟ್ಟರೆ ಬಹಳ ದೊಡ್ಡ ಪ್ರಮಾಣದಲ್ಲಿ ಬದಲಾವಣೆ ತರಲು ಸಾಧ್ಯ ಎಂದು ಪ್ರಧಾನಿಗಳು ಯುವಕರಿಗೆ ಹಲವು ಕ್ಷೇತ್ರಗಳಲ್ಲಿ ಹೊಸ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಹೊಸ ಶಿಕ್ಷಣ ನೀತಿಯಲ್ಲಿ ಯುವಕರಿಗೆ ಮುಕ್ತ ಅವಕಾಶಗಳಿವೆ. ಹಲವು ಪದವಿಗಳನ್ನು ಕೇವಲ ಮೂರೇ ವರ್ಷಗಳಲ್ಲಿ ತೆಗೆದುಕೊಳ್ಳುವ ಅವಕಾಶವಿದೆ. ಸಂಸ್ಕೃತಿ ಇಲಾಖೆಯಲ್ಲಿ ಕೂಡ ಬಹಳ ದೊಡ್ಡ ಅವಕಾಶವಿದೆ, ಪ್ರಧಾನಿಗಳು ಬರುವುದರಿಂದ ಯುವಜನ ಮೇಳ ಯಶಸ್ವಿಯಾಗುವುದು ನಿಶ್ಚಿತ ಎಂದರು.

ಪ್ರಧಾನಿ ನರೇಂದ್ರ ಮೋದಿ ಆಗಮನಕ್ಕಾಗಿ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸಿಎಂ ಬೊಮ್ಮಾಯಿ ಸೇರಿದಂತೆ ಕೆಲ ಸಚಿವರು, ಅಧಿಕಾರಿಗಳು ಕಾಯುತ್ತಿದ್ದಾರೆ. ಅವರ ಜೊತೆ ಪೊಲೀಸರು ಇದ್ದಾರೆ, ಕ್ಷಣಕ್ಷಣವೂ ಪ್ರಧಾನಿ ಆಗಮನ ಹಿನ್ನೆಲೆಯಲ್ಲಿ ಭದ್ರತೆ ಹೆಚ್ಚಿಸಲಾಗುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com