'ನನಗೆ ಪ್ರಧಾನಿ ಮೋದಿಯೆಂದರೆ ಬಹಳ ಪ್ರೀತಿ, ಹೂವಿನ ಹಾರ ನೀಡುವಾಗ ಅವರ ಎಡಗೈ ಟಚ್ ಆಯ್ತು, ಅಷ್ಟು ಸಾಕು': ಹುಬ್ಬಳ್ಳಿ ಬಾಲಕ

ಪ್ರಧಾನಿ ಮೋದಿಯವರಿಗೆ ಭದ್ರತೆ ಭೇದಿಸಿ ಹೂವಿನ ಹಾರ ನೀಡಿದ ಬಾಲಕನ ಹೆಸರು ಕುನಾಲ್ ಎಸ್ ದೊಂಗ್ಡಿ ಎಂದಾಗಿದ್ದು ಈತ 6ನೇ ತರಗತಿಯಲ್ಲಿ ಓದುತ್ತಿದ್ದಾನೆ. ನಾನು ಪ್ರಧಾನಿ ಮೋದಿಯವರ ಅಪ್ಪಟ ಅಭಿಮಾನಿ, ಅವರೆಂದರೆ ಬಹಳ ಪ್ರೀತಿ, ಹೀಗಾಗಿ ನನ್ನ ಕುಟುಂಬ ಮತ್ತು ನೆಂಟರ ಜೊತೆ ಪ್ರಧಾನಿ ನೋಡಲು ಹೋಗಿದ್ದೆ. 
ಪ್ರಧಾನಿ ಬಳಿ ಸಾಗಿ ಹೂವಿನ ಹಾರ ನೀಡಿದ ಬಾಲಕ ಕುನಾಲ್
ಪ್ರಧಾನಿ ಬಳಿ ಸಾಗಿ ಹೂವಿನ ಹಾರ ನೀಡಿದ ಬಾಲಕ ಕುನಾಲ್

ಹುಬ್ಬಳ್ಳಿ: ಪ್ರಧಾನಿ ಮೋದಿಯವರಿಗೆ ಭದ್ರತೆ ಭೇದಿಸಿ ಹೂವಿನ ಹಾರ ನೀಡಿದ ಬಾಲಕನ ಹೆಸರು ಕುನಾಲ್ ಎಸ್ ದೊಂಗ್ಡಿ ಎಂದಾಗಿದ್ದು ಈತ 6ನೇ ತರಗತಿಯಲ್ಲಿ ಓದುತ್ತಿದ್ದಾನೆ. ನಾನು ಪ್ರಧಾನಿ ಮೋದಿಯವರ ಅಪ್ಪಟ ಅಭಿಮಾನಿ, ಅವರೆಂದರೆ ಬಹಳ ಪ್ರೀತಿ, ಹೀಗಾಗಿ ನನ್ನ ಕುಟುಂಬ ಮತ್ತು ನೆಂಟರ ಜೊತೆ ಪ್ರಧಾನಿ ನೋಡಲು ಹೋಗಿದ್ದೆ. 

ನಮ್ಮ ಜೊತೆ ಬಂದ ಮಗುವಿಗೆ ಆರ್ ಎಸ್ ಎಸ್ ಡ್ರೆಸ್ ಹಾಕಿ ಹೂವಿನ ಹಾರ ಹಾಕುವುದಿಲ್ಲ. ಆ ಹಾರವನ್ನು ನಾನು ತೆಗೆದುಕೊಂಡು ಪ್ರಧಾನ ಮಂತ್ರಿಗಳಿಗೆ ಹಾಕ್ಬಿಟ್ಟೆ ಎನ್ನುತ್ತಾನೆ.

ಪ್ರಧಾನಿ ಮೋದಿಯವರೆಂದರೆ ನನಗೆ ಬಹಳ ಅಭಿಮಾನ, ಪ್ರೀತಿ, ಈ ಹಿಂದೆ ಕೂಡ ಹುಬ್ಬಳ್ಳಿಗೆ ಮೋದಿಯವರು ಬಂದಿದ್ದಾಗ ದೂರದಿಂದ ನೋಡಿದ್ದೆ. ಈ ಬಾರಿ ಮೋದಿಯವರನ್ನು ಹತ್ತಿರದಿಂದ ನೋಡಿ ಕೈ ಕುಲಕಬೇಕೆಂದು ಆಸೆಯಾಯಿತು. ಅದಕ್ಕೆ ಬ್ಯಾರಿಕೇಡ್ ದಾಟಿ ಹೋಗ್ಬಿಟ್ಟೆ. ಪ್ರಧಾನಿಯವರು ನನ್ನ ಕೈಯಿಂದ ಹೂವಿನ ಹಾರ ತೆಗೆದುಕೊಂಡರು. ಅವರ ಎಡಗೈ ತಾಗಿದು ಅಷ್ಟು ಸಾಕು. ಕೂಡಲೇ ಪೊಲೀಸ್ ಬಂದು ನನ್ನನ್ನು ಹಿಡಿದು ಬ್ಯಾರಿಕೇಡ್ ನ ಈಚೆ ಬಿಟ್ಟರು ಎನ್ನುತ್ತಾನೆ.

ಮನೆಯಲ್ಲಿ ನಾನು ಮೋದಿಯವರ ಹತ್ತಿರ ಹೋಗಿದ್ದು, ಅವರಿಗೆ ಹಾರ ನೀಡಿದ್ದು ನೋಡಿ ಬಹಳ ಖುಷಿಯಾಯ್ತು. ಮನೆಗೆ ಬಂದ ಮೇಲೆ ನೀನು ಮೋದಿಯವರ ಹತ್ರ ಹೋಗಿ ಅವರಿಗೆ ಹಾರ ನೀಡಿ ಬಂದ್ಯಲ್ಲ, ನೀನು ಟಿವಿಯಲ್ಲಿ ಮಿಂಚ್ತಾ ಇದ್ದಿ, ಬಾಳ ಚಲೋ ಇದ್ದಿ ನೀನು ಎಂದರು. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com