ಮೈಸೂರು ಮೃಗಾಲಯದಲ್ಲಿ ಡೆಂಬಾ ಗೊರಿಲ್ಲಾದ ಬರ್ತ್ ಡೇ ಸಂಭ್ರಮ ಹೇಗಿತ್ತು ನೋಡಿ....
ಕೇವಲ ಮನುಷ್ಯರ ಹುಟ್ಟುಹಬ್ಬವನ್ನು ಆಚರಿಸಿದರೆ ಸಾಕೇ, ಮನುಷ್ಯರಂತೆಯೇ ಭಾವನಾ ಜೀವಿಗಳಾಗಿರುವ ಪ್ರಾಣಿಗಳ ಬರ್ತ್ ಡೇಯನ್ನು ಆಚರಿಸುವುದು ಕೂಡ ಖುಷಿಕೊಡುತ್ತದೆ ಅಲ್ಲವೇ?
Published: 14th January 2023 09:00 AM | Last Updated: 14th January 2023 09:00 AM | A+A A-

ಡೆಂಬಾ ಗೊರಿಲ್ಲಾ ಹುಟ್ಟುಹಬ್ಬ
ಮೈಸೂರು: ಕೇವಲ ಮನುಷ್ಯರ ಹುಟ್ಟುಹಬ್ಬವನ್ನು ಆಚರಿಸಿದರೆ ಸಾಕೇ, ಮನುಷ್ಯರಂತೆಯೇ ಭಾವನಾ ಜೀವಿಗಳಾಗಿರುವ ಪ್ರಾಣಿಗಳ ಬರ್ತ್ ಡೇಯನ್ನು ಆಚರಿಸುವುದು ಕೂಡ ಖುಷಿಕೊಡುತ್ತದೆ ಅಲ್ಲವೇ?
ನಿನ್ನೆ ಮೈಸೂರು ಮೃಗಾಲಯ ಎಂದು ಕರೆಯಲ್ಪಡುವ ಮೈಸೂರಿನ ಶ್ರೀ ಚಾಮರಾಜೇಂದ್ರ ಝೂಲಾಜಿಕಲ್ ಗಾರ್ಡನ್ಸ್ ನಲ್ಲಿ ಡೆಂಬಾ ಗೊರಿಲ್ಲಾದ ಹುಟ್ಟುಹಬ್ಬವನ್ನು ಆಚರಿಸಲಾಗಿದ್ದು, ಮೃಗಾಲಯದ ಅಧಿಕಾರಿಗಳು ಮತ್ತು ಸಿಬ್ಬಂದಿ ಡೆಂಬಾ ಓಡಾಡುವ ಸ್ಥಳದಲ್ಲಿ ಹೂವು ಹಣ್ಣು ತರಕಾರಿಗಳಿಂದ ಅಲಂಕೃಗೊಳಿಸಿ ಅದನ್ನು ಬಿಡಲಾಯಿತು.
— Sri Chamarajendra Zoological Gardens (Mysore Zoo) (@Mysore_Zoo) January 13, 2023
ಹೊರಗೆ ಬಂದ ಡೆಂಬಾ ಅದನ್ನು ನೋಡಿ ಖುಷಿಯಿಂದ ಮುಂದೆ ಕುಳಿತು ಹೊಟ್ಟೆತುಂಬಾ ಮನಸೋ ಇಚ್ಛೆ ಹಣ್ಣು, ತರಕಾರಿಗಳನ್ನು ತಿಂದಿತು.ಡೆಂಬಾ ಹುಟ್ಟಿದ್ದು 2013ರ ಜನವರಿ 13ರಂದು ಜರ್ಮನಿಯ ಅಲ್ ವೆಟ್ಟರ್ ಮುನ್ಟರ್ ಮೃಗಾಲಯದಲ್ಲಿ. ಕಳೆದ ವರ್ಷ ಇದನ್ನು ಮೈಸೂರು ಮೃಗಾಲಯಕ್ಕೆ ತರಲಾಯಿತು.
Today Mysuru Zoo celebrated Gorilla - Demba’s Birthday. Demba was born on 13.1.2013 in Allwetter Zoo Munster, Germany and was brought to Mysore Zoo last year. Sri. Shivkumar .M Chairman ZAK, Zoo Visitors & Zoo Officials participated in Demba’s Birthday Celebration. pic.twitter.com/g2sVz33bJ6
— Sri Chamarajendra Zoological Gardens (Mysore Zoo) (@Mysore_Zoo) January 13, 2023