ಯಾದಗಿರಿಯಲ್ಲಿ ನಾರಾಯಣಪುರ ಎಡದಂಡೆ ಕಾಲುವೆ ಯೋಜನೆ: ಪ್ರಧಾನಿ ಮೋದಿಯಿಂದ ನಾಳೆ ಉದ್ಘಾಟನೆ
ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಕರ್ನಾಟಕಕ್ಕೆ ಬರುತ್ತಿದ್ದಾರೆ.ಈ ಬಾರಿ ಅವರು ಬರುತ್ತಿರುವುದು ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಿಗೆ. ನಾಳೆ ಮೋದಿಯವರು ಯಾದಗಿರಿ ಜಿಲ್ಲೆಯ ಹುಣಸಗಿ ತಾಲ್ಲೂಕಿನ ಕೊಡೆಕಲ್ ಗ್ರಾಮದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯ ಎಡದಂಡೆ ನಾಲೆಯನ್ನು ಉದ್ಘಾಟಿಸಲಿದ್ದಾರೆ.
Published: 18th January 2023 08:47 AM | Last Updated: 18th January 2023 06:33 PM | A+A A-

ಪಿಎಂ ನರೇಂದ್ರ ಮೋದಿ
ಯಾದಗಿರಿ: ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಕರ್ನಾಟಕಕ್ಕೆ ಬರುತ್ತಿದ್ದಾರೆ.ಈ ಬಾರಿ ಅವರು ಬರುತ್ತಿರುವುದು ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಿಗೆ. ನಾಳೆ ಮೋದಿಯವರು ಯಾದಗಿರಿ ಜಿಲ್ಲೆಯ ಹುಣಸಗಿ ತಾಲ್ಲೂಕಿನ ಕೊಡೆಕಲ್ ಗ್ರಾಮದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯ ಎಡದಂಡೆ ನಾಲೆಯನ್ನು ಉದ್ಘಾಟಿಸಲಿದ್ದಾರೆ.
ಈ ಭಾಗದ ರೈತರ ಕೃಷಿ ಚಟುವಟಿಕೆಗಳಿಗೆ ಈ ಯೋಜನೆಯಿಂದ ನೀರು ಹರಿಸುವ ಉದ್ದೇಶ ಸರ್ಕಾರದ್ದಾಗಿದೆ. ನಾರಾಯಣಪುರ ಅಣೆಕಟ್ಟನ್ನು ಆಲಮಟ್ಟಿ ಅಣೆಕಟ್ಟಿನ ಕೆಳಭಾಗದಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿ 1982 ರಲ್ಲಿ ಕಾರ್ಯಾರಂಭ ಮಾಡಿತು.
ಈ ಜಲಾಶಯವು ಎಡ ಮತ್ತು ಬಲದಂಡೆ ಕಾಲುವೆಗಳು ಮತ್ತು ಏತ ನೀರಾವರಿ ಜಾಲಗಳ ಮೂಲಕ ವಿಜಯಪುರ, ಕಲಬುರಗಿ, ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳ ಸುಮಾರು 5.40 ಲಕ್ಷ ಹೆಕ್ಟೇರ್ ಭೂಮಿಗೆ ನೀರುಣಿಸುತ್ತದೆ. ನಾರಾಯಣಪುರ ಎಡದಂಡೆ ಕಾಲುವೆಯು ಕಮಾಂಡ್ ಪ್ರದೇಶಕ್ಕೆ 4.50 ಲಕ್ಷ ಹೆಕ್ಟೇರ್‌ಗೆ ನೀರು ಸರಬರಾಜು ಮಾಡುವ ಮುಖ್ಯ ದಾರಿಯಾಗಿದ್ದು, ಕಲಬುರಗಿ, ಯಾದಗಿರಿ ಮತ್ತು ವಿಜಯಪುರದ ದೀರ್ಘಕಾಲಿಕ ಬರಪೀಡಿತ ಜಿಲ್ಲೆಗಳಲ್ಲಿ ಹರಡಿದೆ. ಹುಣಸಗಿ, ಶಹಾಪುರ, ಮುಡಬಾಳ, ಜೇವರ್ಗಿ, ಇಂಡಿ ಶಾಖಾ ಕಾಲುವೆಗಳು ಹಾಗೂ ಇಂಡಿ ಏತ ಕಾಲುವೆ ಮೂಲಕ 10 ಸಾವಿರ ಕ್ಯೂಸೆಕ್ ನೀರು ಹರಿಸಲಾಗುತ್ತಿದೆ.
ಹೊಸ ಯೋಜನೆಯು ನೀರನ್ನು ಸಂರಕ್ಷಿಸಲು, ನೀರು ಸುಮ್ಮನೆ ಪೋಲಾಗುವುದನ್ನು ಕಡಿಮೆ ಮಾಡಲು ಮತ್ತು ಹೆಚ್ಚು ಸಮಾನವಾದ ವಿತರಣೆಯನ್ನು ನೋಡಲು ಹವಾಮಾನ ಬದಲಾವಣೆಗಾಗಿ ರಾಷ್ಟ್ರೀಯ ಕ್ರಿಯಾ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರದ ರಾಷ್ಟ್ರೀಯ ಜಲ ಮಿಷನ್‌ನ ಭಾಗವಾಗಿದೆ.
ನಾರಾಯಣಪುರ ಎಡದಂಡೆ ಕಾಲುವೆಯಲ್ಲಿ (NLBC) ಶೇಕಡಾ 25 ರಷ್ಟು ದಕ್ಷತೆಯನ್ನು ಸುಧಾರಿಸಲು ಕೃಷ್ಣ ಭಾಗ್ಯ ಜಲ ನಿಗಮ ಲಿಮಿಟೆಡ್ (ಖಱಳಥ) ಕಾರ್ಯತಂತ್ರವನ್ನು ರೂಪಿಸಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. KBJNL ಅಡಿಯಲ್ಲಿ ರಾಜ್ಯ ಸರ್ಕಾರವು ಪ್ರಾಯೋಗಿಕ ಯೋಜನೆಯನ್ನು ಕೈಗೆತ್ತಿಕೊಂಡಿದೆ.
ಇದನ್ನೂ ಓದಿ: ಗಿನ್ನಿಸ್ ಪುಸ್ತಕ ಸೇರಲಿದೆ ಪ್ರಧಾನಿ ಮೋದಿ ಕಲಬುರಗಿ ಕಾರ್ಯಕ್ರಮ: 50 ಸಾವಿರ ಕುಟುಂಬಗಳಿಗೆ ಹಕ್ಕು ಪತ್ರ ವಿತರಣೆ!
ಕಳೆದ 30 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಎನ್‌ಎಲ್‌ಬಿಸಿ, ಹಾನಿಗೊಳಗಾದ ಕಾಲುವೆ ಜಾಲ ವ್ಯವಸ್ಥೆ ಮತ್ತು ಕಾಲುವೆ ಇಳಿಜಾರು, ಕಾಲುವೆ ಜಾಲದಲ್ಲಿ ಸೋರಿಕೆ, ಸರಿಯಾದ ಸರದಿ ವ್ಯವಸ್ಥೆಯ ಕೊರತೆಯಿಂದಾಗಿ ತನ್ನ ನಿಗದಿತ ಪ್ರದೇಶಕ್ಕೆ ಅಗತ್ಯವಿರುವ ಪ್ರಮಾಣದ ನೀರನ್ನು ತಲುಪಿಸುವಲ್ಲಿ ಕೆಲವು ನ್ಯೂನತೆಗಳನ್ನು ಹೊಂದಿದೆ. ಸುಮಾರು 1.5 ಲಕ್ಷ ಹೆಕ್ಟೇರ್‌ಗೆ ಅಗತ್ಯ ಪ್ರಮಾಣದ ನೀರು ಸಿಗುತ್ತಿಲ್ಲ ಎಂದು ತಜ್ಞರು ಹೇಳಿದ್ದಾರೆ.
ಈ ಸಮಸ್ಯೆಗಳನ್ನು ಪರಿಹರಿಸಲು ವಿಸ್ತರಣೆ, ನವೀಕರಣ ಮತ್ತು ಆಧುನೀಕರಣ ಕಾರ್ಯಕ್ರಮವನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 3,752.18 ಕೋಟಿ ವೆಚ್ಚದ ಈ ಯೋಜನೆಗೆ ಕೇಂದ್ರ ಜಲ ಆಯೋಗದ ತಾಂತ್ರಿಕ ಸಲಹಾ ಸಮಿತಿ ಅನುಮತಿ ನೀಡಿದೆ. ಯೋಜನೆಯ ಪರಿಷ್ಕೃತ ವೆಚ್ಚದ ಅಂದಾಜು 4,233.98 ಕೋಟಿ ರೂ. (ಎಐಬಿಪಿ ಕಾಮಗಾರಿಗಳು: ರೂ. 2405.84 ಕೋಟಿ + ಎಐಬಿಪಿ ಅಲ್ಲದ ರೂ.1828.14 ಕೋಟಿ). 2,405.84 ಕೋಟಿ ರೂಪಾಯಿ ವೆಚ್ಚದಲ್ಲಿ ಕೇಂದ್ರದ ನೆರವು 940.50 ಕೋಟಿ ರೂಪಾಯಿಗಳಾಗಿದೆ.