ಕಲಬುರಗಿಗೆ ಪ್ರಧಾನಿ ಮೋದಿ ಆಗಮನ: ರಾಜ್ಯಪಾಲ, ಸಿಎಂ ಸೇರಿ ಗಣ್ಯರಿಂದ ಸ್ವಾಗತ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಲ್ಯಾಣ ಕರ್ನಾಟಕ ಜಿಲ್ಲೆ ಕಲಬುರಗಿಗೆ ಬಂದಿಳಿದಿದ್ದಾರೆ. ದೆಹಲಿಯಿಂದ ವಿಶೇಷ ವಿಮಾನದಲ್ಲಿ ಬಂದಿಳಿದ ಅವರನ್ನು ರಾಜ್ಯಪಾಲ ತಾವರ್ ಚಂದ್ ಗೆಹ್ಲೊಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯ ಬಿಜೆಪಿ ನಾಯಕರು, ಕೇಂದ್ರ ಸಚಿವರು ಬರಮಾಡಿಕೊಂಡಿದ್ದಾರೆ. 
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ

ಕಲಬುರಗಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಲ್ಯಾಣ ಕರ್ನಾಟಕ ಜಿಲ್ಲೆ ಕಲಬುರಗಿಗೆ ಬಂದಿಳಿದಿದ್ದಾರೆ. ದೆಹಲಿಯಿಂದ ವಿಶೇಷ ವಿಮಾನದಲ್ಲಿ ಬಂದಿಳಿದ ಅವರನ್ನು ರಾಜ್ಯಪಾಲ ತಾವರ್ ಚಂದ್ ಗೆಹ್ಲೊಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯ ಬಿಜೆಪಿ ನಾಯಕರು, ಕೇಂದ್ರ ಸಚಿವರು ಬರಮಾಡಿಕೊಂಡಿದ್ದಾರೆ. 

ಇಲ್ಲಿಂದ ಪ್ರಧಾನಿಯವರು ಯಾದಗಿರಿ ಜಿಲ್ಲೆ ಹುಣಸಗಿ ತಾಲ್ಲೂಕು ಕೊಕೊಡೆಕಲ್‌ ಹೆಲಿಪ್ಯಾಡ್‌ಗೆ ತೆರಳಿದ್ದಾರೆ. ಮಾರ್ಗದುದ್ದಕ್ಕೂ ಎರಡೂ ಕಡೆ ಲಕ್ಷಾಂತರ ಮಂದಿ ಮೋದಿಯವರ ಸ್ವಾಗತಕ್ಕೆ ಜಮಾಯಿಸಿದ್ದಾರೆ. ಅವರತ್ತ ನಗುತ್ತಾ, ಕೈಬೀಸುತ್ತಾ ಪ್ರಧಾನಿ ಮೋದಿಯವರು ಸಾಗುತ್ತಿದ್ದಾರೆ.

ಕೊಡೆಕಲ್ ತಾಲ್ಲೂಕಿನಲ್ಲಿ ಪ್ರಧಾನಿಯವರು ನಾರಾಯಣಪುರ ಎಡದಂಡೆ ಕಾಲುವೆ ಜಾಲದ ವಿಸ್ತರಣೆ ನವೀಕರಣ ಮತ್ತು ಆಧುನೀಕರಣ ಕಾಮಗಾರಿ ಲೋಕಾರ್ಪಣೆ ಮಾಡಲಿದ್ದಾರೆ. ಕಾರ್ಯಕ್ರಮ ನಡೆಯುವ ವೇದಿಕೆಯ ಮುಂಭಾಗ ಪ್ರಧಾನಿಯವರನ್ನು ಸ್ವಾಗತಿಸಲು ಕಲಾತಂಡಗಳು, ಸಾಂಪ್ರದಾಯಿಕ ಉಡುಗೆ ಲಂಬಾಣಿ ಉಡುಗೆಯಲ್ಲಿ ಮಹಿಳೆಯರು ಸಜ್ಜಾಗಿದ್ದಾರೆ. 

ಮಧ್ಯಾಹ್ನ 1 ಗಂಟೆಗೆ ಜಲ್‌ ಜೀವನ್‌ ಮಿಷನ್‌ ಅಡಿಯಲ್ಲಿ ಯಾದಗಿರಿ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆ ಮತ್ತು ಸರತ್‌ ಚೆನ್ನೈ ಎಕ್ಸ್‌ಪ್ರೆಸ್‌ ವೇ ಪ್ಯಾಕೇಜ್‌ 3ನೇ ಕಾಮಗಾರಿಗಳ ಶಂಕುಸ್ಥಾಪನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.  ಅಲ್ಲಿಂದ ಕೊಡೆಕಲ್‌ ಹೆಲಿಪ್ಯಾಡ್‌ಗೆ ರಸ್ತೆ ಮೂಲಕ ಹೊರಡು ಹೆಲಿಪ್ಯಾಡ್‌ ಮೂಲಕ ಕಲಬುರಗಿ ಜಿಲ್ಲೆ ಸೇಡಂ ತಾಲೂಕು ಮಳಖೇಡ ಹೆಲಿಪ್ಯಾಡ್‌ಗೆ ತಲುಪಲಿದ್ದಾರೆ. ಅಲ್ಲಿಂದ ರಸ್ತೆ ಮೂಲಕ ಸಾಗಿ ನೂತನವಾಗಿ ರಚಿಸಲಾಗಿರುವ ಕಂದಾಯ ಗ್ರಾಮಗಳ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ ಹಾಗೂ ವಿವಿಧ ಕಾರ್ಯಕ್ರಮಗಳ ಶಿಲನ್ಯಾಸ ಮಾಡಲಿದ್ದಾರೆ.

ಕಳೆದ 10 ದಿನಗಳಲ್ಲಿ ಕರ್ನಾಟಕಕ್ಕೆ ಪ್ರಧಾನಿ ಮೋದಿಯವರ ಎರಡನೇ ಕರ್ನಾಟಕ ರಾಜ್ಯ ಭೇಟಿ ಇದಾಗಿದೆ. ಯಾದಗಿರಿ ಹಾಗೂ ಕಲಬುರಗಿ ಜಿಲ್ಲೆಯಲ್ಲಿ ಇಂದು ಮೋದಿಯವರು 10 ಸಾವಿರದ 800 ಕೋಟಿ ರೂಪಾಯಿಗೂ ಅಧಿಕ ಮೊತ್ತದ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com