'ನನ್ನ ಸಹ ಪ್ರಯಾಣಿಕ, ಪ್ರತ್ಯಕ್ಷದರ್ಶಿ ಅಣ್ಣಾಮಲೈ ಎಲ್ಲ ಹೇಳಿದ್ದಾರೆ, ಇನ್ನು ನಾನು ಮಾತನಾಡುವ ಅಗತ್ಯವಿಲ್ಲ': ಸಂಸದ ತೇಜಸ್ವಿ ಸೂರ್ಯ 

ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಇಂಡಿಗೊ ವಿಮಾನದ ತುರ್ತು ನಿರ್ಗಮನದ ಬಾಗಿಲು ತೆಗೆದಿದದ್ದರು, ಈ ಬಗ್ಗೆ ತನಿಖೆಗೆ ಆದೇಶಿಸಿದಾಗ ಅದು ಸಂಸದ ತೇಜಸ್ವಿ ಸೂರ್ಯ ಎಂದು ತಿಳಿದುಬಂತು ಎಂದು ಸುದ್ದಿಯಾಗಿತ್ತು. ಈ ಘಟನೆ ಬೆಳಕಿಗೆ ಬಂದ ಬಳಿಕ ಸಂಸದ ತೇಜಸ್ವಿ ಸೂರ್ಯ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಟ್ರೋಲ್ ಆದರು. ಪ್ರತಿಪಕ್ಷ ಕಾಂಗ್ರೆಸ್ ತೇಜಸ್ವಿ
ಸಂಸದ ತೇಜಸ್ವಿ ಸೂರ್ಯ
ಸಂಸದ ತೇಜಸ್ವಿ ಸೂರ್ಯ

ಬೆಂಗಳೂರು: ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಇಂಡಿಗೊ ವಿಮಾನದ ತುರ್ತು ನಿರ್ಗಮನದ ಬಾಗಿಲು ತೆಗೆದಿದದ್ದರು, ಈ ಬಗ್ಗೆ ತನಿಖೆಗೆ ಆದೇಶಿಸಿದಾಗ ಅದು ಸಂಸದ ತೇಜಸ್ವಿ ಸೂರ್ಯ ಎಂದು ತಿಳಿದುಬಂತು ಎಂದು ಸುದ್ದಿಯಾಗಿತ್ತು. ಈ ಘಟನೆ ಬೆಳಕಿಗೆ ಬಂದ ಬಳಿಕ ಸಂಸದ ತೇಜಸ್ವಿ ಸೂರ್ಯ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಟ್ರೋಲ್ ಆದರು. ಪ್ರತಿಪಕ್ಷ ಕಾಂಗ್ರೆಸ್ ತೇಜಸ್ವಿ ಸೂರ್ಯ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತಿದೆ.

ಈ ಘಟನೆ ನಡೆಯುವ ಸಂದರ್ಭದಲ್ಲಿ  ಅದೇ ವಿಮಾನದಲ್ಲಿ ತಮಿಳು ನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಕೂಡ ಇದ್ದರಂತೆ. ಅವರು ಮೊನ್ನೆ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿ, ತೇಜಸ್ವಿ ಸೂರ್ಯ ವಿಮಾನದ ತುರ್ತು ನಿರ್ಗಮನದ ಡೋರ್ ಓಪನ್ ಮಾಡಿಲ್ಲ. ಅದನ್ನು ರೊಟೇಟ್ ಮಾಡಿ ಓಪನ್ ಮಾಡ್ಬೇಕು. ಅವರು ಸಂಸದರು, ಬುದ್ಧಿವಂತರು, ಜವಾಬ್ದಾರಿ ಸ್ಥಾನದಲ್ಲಿದ್ದಾರೆ. ಅವರು ಡೋರ್ ಓಪನ್ ಮಾಡಿಲ್ಲ ಎಂದು ಬೆಂಬಲವಾಗಿ ನಿಂತಿದ್ದರು. 

ಅವರು ಕೂತಿದ್ದು ಎಮರ್ಜೆನ್ಸಿ ಎಕ್ಸಿಟ್ ಸೀಟಿನಲ್ಲಿ. ಎಟಿಆರ್ ಫ್ಲೈಟ್ ಸೀಟಲ್ಲಿ ಹ್ಯಾಂಡ್ ರೆಸ್ಟ್ ಇರಲ್ಲ. ಅಲ್ಲಿ ಎಕ್ಸಿಟ್ ಡೋರ್‌ನಲ್ಲಿ ಬೀಡಿಂಗ್ ಸ್ವಲ್ಪ ಓಪನ್ ಇತ್ತು. ಅದನ್ನ ಏರ್ ಹಾಸ್ಟೆಸ್ ಗಮನಕ್ಕೆ ತಂದರು. ಪೈಲೆಟ್ ಬಂದು ಡಿಬೋರ್ಡಿಂಗ್ ಮಾಡಿ, ಸರಿಯಾಗಿ ಫಿಟ್ ಮಾಡಿದ್ರು. ಅಲ್ಲಿ ತೇಜಸ್ವಿ ಇನ್ಸಿಡೆಂಟ್ ರಿಪೋರ್ಟ್ ಕೊಟ್ಟಿದ್ದಾರೆ ಎಂದರು.‌

ತೇಜಸ್ವಿ ಸೂರ್ಯ ಡೋರ್‌ನ ಪುಲ್ ಮಾಡಿಲ್ಲ. ಫ್ಲೈಟ್ ಹೊರಟಿದ್ದು ತಡವಾಗಿದ್ದಕ್ಕೆ ಇತರೆ ಪ್ರಯಾಣಿಕರಿಗೆ ಕ್ಷಮೆ ಕೇಳಿದ್ದಾರೆ. ಇಂಡಿಗೋ ಅವರೇ ಕ್ಲಾರಿಫಿಕೇಶನ್ ಮಾಡಿ, ಇನ್ಸಿಡೆಂಟ್ ರಿಪೋರ್ಟ್ ಬಿಡುಗಡೆ ಮಾಡಿದ್ದಾರೆ ಎಂದು ಅಣ್ಣಾಮಲೈ ಹೇಳಿದ್ದರು.

ಇಂದು ಮಾಧ್ಯಮ ಪ್ರತಿನಿಧಿಗಳಿಗೆ ಸ್ವತಃ ತೇಜಸ್ವಿ ಸೂರ್ಯ ಅವರೇ ಸಿಕ್ಕಿದಾಗ ಅವರಲ್ಲಿ ಪ್ರತಿಕ್ರಿಯೆ ಕೇಳಿದರು. ತುಸು ಗರಂ ಆದವರಂತೆ ಕಂಡುಬಂದ ತೇಜಸ್ವಿ ಸೂರ್ಯ, ನನ್ನ ಸಹಪ್ರಯಾಣಿಕರಾಗಿದ್ದ ಅಣ್ಣಾಮಲೈಯವರು ಈಗಾಗಲೇ ಮಾಧ್ಯಮಗಳಿಗೆ ಸ್ಪಷ್ಟವಾಗಿ ಹೇಳಿಕೆ ಕೊಟ್ಟಿದ್ದಾರೆ. ಅವರು ನೀಡಿರುವ ಹೇಳಿಕೆಯನ್ನೇ ಮತ್ತೊಮ್ಮೆ ಬೇಕಾದರೆ ನೋಡಿ, ಅವರು ಆ ದಿನ ನನ್ನ ಸಹ ಪ್ರಯಾಣಿಕರಾಗಿದ್ದು, ಘಟನೆಯ ಪ್ರತ್ಯಕ್ಷದರ್ಶಿ, ಅವರು ಹೇಳಿದ್ದನ್ನೇ ಮತ್ತೆ ನಾನು ಹೇಳುವ ಅಗತ್ಯವಿಲ್ಲ. ಘಟನೆ ಬಗ್ಗೆ ಅಧಿಕಾರಿಗಳು ಸಹ ಮಾತನಾಡಿದ್ದಾರೆ, ಇನ್ನು ನಾನು ಹೇಳುವುದಕ್ಕೆ ಏನೂ ಇಲ್ಲ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com