'ಏರೋ ಇಂಡಿಯಾ ಈ ಬಾರಿ ಅತಿದೊಡ್ಡ ಏರ್ ಶೋ ಆಗಲಿದೆ': ಸಿಎಂ ಬಸವರಾಜ ಬೊಮ್ಮಾಯಿ

ರಾಜಧಾನಿ ಬೆಂಗಳೂರಿನಲ್ಲಿ ಫೆಬ್ರವರಿ 13 ರಿಂದ 17 ರವರೆಗೆ ನಡೆಯಲಿರುವ ಏರೋ ಇಂಡಿಯಾ ಶೋದ 14 ನೇ ಆವೃತ್ತಿಯು ಅತಿ ಹೆಚ್ಚು ಜನರ ಭಾಗವಹಿಸುವಿಕೆಯ ಮೂಲಕ "ಅತಿದೊಡ್ಡ ವೈಮಾನಿಕ ಪ್ರದರ್ಶನ" ಎನಿಸಿಕೊಳ್ಳಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಗಳವಾರ ಹೇಳಿದ್ದಾರೆ.
ಏರೊ ಇಂಡಿಯಾ ಶೋಗೆ ಸಂಬಂಧಿಸಿ ಆಯೋಜನೆಯಾದ ಸಭೆಯಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ, ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಏರೊ ಇಂಡಿಯಾ ಶೋಗೆ ಸಂಬಂಧಿಸಿ ಆಯೋಜನೆಯಾದ ಸಭೆಯಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ, ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್

ಕಲಬುರಗಿ: ರಾಜಧಾನಿ ಬೆಂಗಳೂರಿನಲ್ಲಿ ಫೆಬ್ರವರಿ 13 ರಿಂದ 17 ರವರೆಗೆ ನಡೆಯಲಿರುವ ಏರೋ ಇಂಡಿಯಾ ಶೋದ 14ನೇ ಆವೃತ್ತಿಯು ಅತಿ ಹೆಚ್ಚು ಜನರ ಭಾಗವಹಿಸುವಿಕೆಯ ಮೂಲಕ "ಅತಿದೊಡ್ಡ ವೈಮಾನಿಕ ಪ್ರದರ್ಶನ" ಎನಿಸಿಕೊಳ್ಳಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಗಳವಾರ ಹೇಳಿದ್ದಾರೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ನಡೆದ 'ಅಪೆಕ್ಸ್ ಕಮಿಟಿ' ಸಭೆಯಲ್ಲಿ ಕಾರ್ಯಕ್ರಮದ ಸಿದ್ಧತೆಗಳನ್ನು ಪರಿಶೀಲಿಸಲು ಮುಖ್ಯಮಂತ್ರಿಗಳು ವಿಡಿಯೊ ಕಾನ್ಫರೆನ್ಸ್ ಮೂಲಕ ಕಲಬುರಗಿಯಿಂದ ಭಾಗವಹಿಸಿದ್ದರು. 

ಅತಿ ಹೆಚ್ಚು ಜನರು ಭಾಗವಹಿಸುವಿಕೆಯೊಂದಿಗೆ ಅತಿ ದೊಡ್ಡ ಏರ್ ಶೋ ಆಗಲಿದೆ. ಪ್ರತಿನಿಧಿಗಳು, ಏರೋಸ್ಪೇಸ್ ಮತ್ತು ರಕ್ಷಣಾ ಉದ್ಯಮದ ಪ್ರಮುಖರು ಮತ್ತು ಕಂಪನಿಗಳಿಂದ ಹೆಚ್ಚಿನ ಸಂಖ್ಯೆಯ ಭಾಗವಹಿಸುವಿಕೆ ಇರುತ್ತದೆ ಎಂದು ಹೇಳಿದರು. 

ವರ್ಚುವಲ್ ಸಭೆಯಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಇಂಡಿಯಾ ಪೆವಿಲಿಯನ್, ಕರ್ನಾಟಕ ಪೆವಿಲಿಯನ್ ಹಾಗೂ ಏರೋಸ್ಪೇಸ್ ಕಂಪನಿಗಳ ಬೃಹತ್ ಪ್ರದರ್ಶನ ಏರ್ ಶೋದಲ್ಲಿ ನಡೆಯಲಿದೆ. ಅಲ್ಲದೆ ವಿಮಾನಗಳ ಮೂಲಕ ವೈಮಾನಿಕ ಪ್ರದರ್ಶನಗಳು ಇರುತ್ತವೆ. ಸಾರ್ವಜನಿಕರಿಗೆ ವೀಕ್ಷಿಸಲು ಅವಕಾಶವಿದೆ ಎಂದರು.

ಪ್ರಧಾನಿ ಮೋದಿ ಉದ್ಘಾಟನೆ: ಈ ಮೆಗಾ ಏರ್ ಶೋವನ್ನು ಪ್ರಧಾನಿ ಮೋದಿ ಫೆಬ್ರವರಿ 13ರಂದು ಉದ್ಘಾಟಿಸಲಿದ್ದಾರೆ. ಬೆಂಗಳೂರಿನ ಯಲಹಂಕದ ವಾಯುಪಡೆ ನಿಲ್ದಾಣದಲ್ಲಿ ದ್ವೈವಾರ್ಷಿಕ ವೈಮಾನಿಕ ಪ್ರದರ್ಶನ ನಡೆಯಲಿದೆ.

ಏರೋ ಇಂಡಿಯಾ ವೆಬ್‌ಸೈಟ್ ಪ್ರಕಾರ, ಒಟ್ಟು 731 ಪ್ರದರ್ಶಕರು ನೋಂದಾಯಿಸಿಕೊಂಡಿದ್ದಾರೆ, ಅದರಲ್ಲಿ 633 ಭಾರತೀಯ ಮತ್ತು 98 ವಿದೇಶಿ ಪ್ರದರ್ಶಕರಾಗಿದ್ದಾರೆ. 

ಏರೋ ಇಂಡಿಯಾ 1996 ರಿಂದ ಬೆಂಗಳೂರಿನಲ್ಲಿ ಆಯೋಜಿಸಲಾದ 13 ಯಶಸ್ವಿ ಆವೃತ್ತಿಗಳೊಂದಿಗೆ ಪ್ರಧಾನ ಏರೋಸ್ಪೇಸ್ ಪ್ರದರ್ಶನಗಳಲ್ಲಿ ಒಂದಾಗಿ ಜಾಗತಿಕವಾಗಿ ತನ್ನದೇ ಆದ ಸ್ಥಾನವನ್ನು ಪಡೆದುಕೊಂಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com