ಸಿನಿಮಾ ಕಲಾವಿದರಿಗೆ ತಪ್ಪು ವರದಿ: ಡಯಾಗ್ನೋಸ್ಟಿಕ್ ಕೇಂದ್ರಕ್ಕೆ ದಂಡ ವಿಧಿಸಿದ ಗ್ರಾಹಕ ಆಯೋಗ

ಸಿನಿಮಾ ಕಲಾವಿದರೊಬ್ಬರಿಗೆ ತಪ್ಪಾದ ಆರೋಗ್ಯ ವರದಿ ನೀಡಿದ್ದಕ್ಕಾಗಿ, ಐಕಾನ್ ಡಾಯಾಗ್ನೋಸ್ಟಿಕ್ಸ್ ಕೇಂದ್ರ ಹಾಗೂ ಅದರ ರೇಡಿಯಾಲಜಿಸ್ಟ್ ಡಾ.ರಾಜ್ ಕಮಲ್ ಗೆ ಬೆಂಗಳೂರು ಹೆಚ್ಚುವರಿ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದಂಡ ವಿಧಿಸಿದೆ. 
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ಬೆಂಗಳೂರು: ಸಿನಿಮಾ ಕಲಾವಿದರೊಬ್ಬರಿಗೆ ತಪ್ಪಾದ ಆರೋಗ್ಯ ವರದಿ ನೀಡಿದ್ದಕ್ಕಾಗಿ, ಐಕಾನ್ ಡಾಯಾಗ್ನೋಸ್ಟಿಕ್ಸ್ ಕೇಂದ್ರ ಹಾಗೂ ಅದರ ರೇಡಿಯಾಲಜಿಸ್ಟ್ ಡಾ.ರಾಜ್ ಕಮಲ್ ಗೆ ಬೆಂಗಳೂರು ಹೆಚ್ಚುವರಿ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದಂಡ ವಿಧಿಸಿದೆ. 

ದೂರುದಾರನಿಗೆ 1.50 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಜೊತೆಗೆ 5,000 ದಾವೆ ವೆಚ್ಚಗಳನ್ನು ಭರಿಸುವಂತೆ ಐಕಾನ್ ಡಯಾಗ್ನೋಸ್ಟಿಕ್ ಸೆಂಟರ್ ಗೆ ಸೂಚನೆ ನೀಡಿದೆ.

ಈ ಡಯಾಗ್ನೋಸ್ಟಿಕ್ ಸೆಂಟರ್ ತಮ್ಮ ಆರೋಗ್ಯದ ವಿಷಯದಲ್ಲಿ ತಪ್ಪಾದ ವರದಿಯನ್ನು ನೀಡಿದೆ. ಇದರಿಂದ ತಮಗೆ ಮಾನಸಿಕ ಒತ್ತಡ, ಆಘಾತ ಉಂಟಾಗಿದೆ ಆದ್ದರಿಂದ ಪರಿಹಾರ ನೀಡಬೇಕು ಎಂದು ಕಲಾವಿದ ಗ್ರಾಹಕ ಆಯೋಗದ ಮೊರೆ ಹೋಗಿದ್ದರು.

ಫೆಬ್ರವರಿ 25, 2022 ರಲ್ಲಿ ಪ್ರಾಥಮಿಕವಾಗಿ, ಡಯಾಗ್ನೋಸ್ಟಿಕ್ ಸೆಂಟರ್ ನೀಡಿದ ವರದಿಯ ಪ್ರಕಾರ ಈ ವ್ಯಕ್ತಿ ಫಿಲ್ಬ್ರೊಸಾರ್ಕೊಮಾ ಗರ್ಭಾಶಯದಿಂದ ಹೊಟ್ಟೆಯ ಮೆಟಾಸ್ಟಾಸಿಸ್, ಲಿವರ್ ಮೆಟಾಸ್ಟಾಸಿಸ್ ಮತ್ತು ಗ್ರೇಡ್ -1 ಸ್ಪ್ಲೇನೋಮೆಗಾಲಿದಿಂದ ಬಳಲುತ್ತಿದ್ದಾರೆ ಎಂದು ತೋರಿಸುತ್ತದೆ ಎಂದು ಹೇಳಿತ್ತು. ಆದರೆ ಆ ಬಳಿಕ ಆ ವರದಿ ಸಂಪೂರ್ಣವಾಗಿ ತಪ್ಪು ವರದಿಯಾಗಿದೆ ಎಂಬುದು ಖಾತ್ರಿಯಾಗಿತ್ತು. ಪ್ರಾಥಮಿಕ ವರದಿ ದೂರುದಾರರನ್ನು ತೀವ್ರ ಒತ್ತಡಕ್ಕೆ ಒಳಪಡಿಸಿತ್ತು.

ಮೇಲ್ನೋಟಕ್ಕೆ ರೋಗನಿರ್ಣಯ ಕೇಂದ್ರ ಮತ್ತು ರೇಡಿಯಾಲಜಿಸ್ಟ್ ಸೇವೆಯಲ್ಲಿನ ಕೊರತೆಯನ್ನುಂಟು ಮಾಡಿದ್ದಷ್ಟೇ ದೂರುದಾರರಿಗೆ ಮಾನಸಿಕ ಒತ್ತಡ ಮತ್ತು ಸಂಕಟವನ್ನು ಉಂಟುಮಾಡಿದೆ ಎಂದು ಆಯೋಗದ ಅಧ್ಯಕ್ಷ ಬಿ.ನಾರಾಯಣಪ್ಪ, ಸದಸ್ಯರಾದ ಎನ್.ಜ್ಯೋತಿ, ಎಸ್.ಎಂ.ಶರಾವತಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com