ಕೋವಿಡೋತ್ತರ: ನಿಮ್ಹಾನ್ಸ್ ಸಂಸ್ಥೆಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚಳ
ಕೋವಿಡ್ ಸಾಂಕ್ರಾಮಿಕ ನಂತರದಲ್ಲಿ ಮಾನಸಿಕ ಅನಾರೋಗ್ಯ, ಅಸ್ವಸ್ಥತೆ ಹೆಚ್ಚಾಗಿದೆ. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಅಂಡ್ ನ್ಯೂರೋ ಸೈನ್ಸಸ್ (NIMHANS) ಒಂದು ದಶಕದಲ್ಲಿ 6.22 ಲಕ್ಷ ರೋಗಿಗಳg ದಾಖಲಾಗಿದ್ದಾರೆ.
Published: 05th July 2023 02:17 PM | Last Updated: 05th July 2023 02:17 PM | A+A A-

ನಿಮ್ಹಾನ್ಸ್
ಬೆಂಗಳೂರು: ಕೋವಿಡ್ ಸಾಂಕ್ರಾಮಿಕ ನಂತರದಲ್ಲಿ ಮಾನಸಿಕ ಅನಾರೋಗ್ಯ, ಅಸ್ವಸ್ಥತೆ ಹೆಚ್ಚಾಗಿದೆ. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಅಂಡ್ ನ್ಯೂರೋ ಸೈನ್ಸಸ್ (NIMHANS) ಒಂದು ದಶಕದಲ್ಲಿ 6.22 ಲಕ್ಷ ರೋಗಿಗಳು ದಾಖಲಾಗಿದ್ದಾರೆ.
ನಿಮ್ಹಾನ್ಸ್‌ನ ರೆಸಿಡೆಂಟ್ ಮೆಡಿಕಲ್ ಆಫೀಸರ್ ಡಾ ಶಶಿಧರ ಎಚ್‌ಎನ್ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪ್ರತಿನಿಧಿ ಜೊತೆ ಮಾತನಾಡುತ್ತಾ, ನಿಮ್ಹಾನ್ಸ್‌ನ ಕೋವಿಡ್ ಸಾಂಕ್ರಾಮಿಕ ಮತ್ತು ಬಹು ಮಾನಸಿಕ ಆರೋಗ್ಯ ಉಪಕ್ರಮದಲ್ಲಿ ಈ ವರ್ಷ ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ. ಸಾಂಕ್ರಾಮಿಕ(Covid-19) ಸಮಯದಲ್ಲಿ ಸಹಾಯ ಪಡೆಯಲು ಸಾಧ್ಯವಾಗದ ಅನೇಕ ರೋಗಿಗಳು ವೃತ್ತಿಪರ ಆರೈಕೆಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಟೆಲಿ-ಮಾನಸ್, ವ್ಯಸನಕ್ಕಾಗಿ ಬಹು ಸಹಾಯವಾಣಿಗಳು, ಮಾನಸಿಕ ಆರೋಗ್ಯ ಸಮಸ್ಯೆಗಳು ಮತ್ತು ಕೋವಿಡ್‌ನಂತಹ ಉಪಕ್ರಮಗಳು ಭಾರತದಾದ್ಯಂತ ಜಾಗೃತಿ ಮೂಡಿಸಿದವು ಇದರಿಂದ ಮಾನಸಿಕ ಆರೋಗ್ಯ ಹೆಚ್ಚಿಸಿಕೊಳ್ಳಲು ಹೆಚ್ಚಿನ ರೋಗಿಗಳು ದಾಖಲಾದರು.
ನಿಮ್ಹಾನ್ಸ್ ತೃತೀಯ-ಆರೈಕೆ ಕೇಂದ್ರವಾಗಿದ್ದು, ಕರ್ನಾಟಕದಿಂದ ಮಾತ್ರವಲ್ಲದೆ ಇತರ ರಾಜ್ಯಗಳಿಗೂ ಸಹ ಸೇವೆ ಸಲ್ಲಿಸುತ್ತಿದೆ. ನಿಮ್ಹಾನ್ಸ್ ಮಾತ್ರವಲ್ಲದೆ ಇತರ ವೈದ್ಯಕೀಯ ಸಂಸ್ಥೆಗಳಲ್ಲೂ ಮಾನಸಿಕ ಆರೋಗ್ಯ ರೋಗಿಗಳ ಸಂಖ್ಯೆ ಹೆಚ್ಚಿದೆ. ಪ್ರತಿ ರೋಗಿಗೆ ಹೆಚ್ಚಿನ ಸಮಯ ಮತ್ತು ವಿಶೇಷ ಆರೈಕೆಯ ಅಗತ್ಯವಿರುವುದರಿಂದ ಮಾನಸಿಕ ಅಸ್ವಸ್ಥತೆ ಹೊಂದಿರುವ ರೋಗಿಗೆ ಚಿಕಿತ್ಸೆ ನೀಡುವುದು ಇತರ ಕಾಯಿಲೆಗಳಂತೆಯೇ ಅಲ್ಲ ಎಂದು ವೈದ್ಯರು ಹೇಳಿದ್ದಾರೆ.
ಕಾಲಾಂತರದಲ್ಲಿ ಮಾನಸಿಕ ಆರೋಗ್ಯ ರೋಗಿಗಳ ಸಂಖ್ಯೆ ಹೆಚ್ಚಿದೆ, ಆದರೆ ವೃತ್ತಿಪರರ ವೈದ್ಯರ ಸಂಖ್ಯೆ ಅದಕ್ಕೆ ತಕ್ಕಂತೆ ಹೆಚ್ಚಿಲ್ಲ ಎಂದು ನಿಮ್ಹಾನ್ಸ್‌ನ ಮನೋವೈದ್ಯಕೀಯ ವಿಭಾಗದ ಡಾ.ಶಿವರಾಮ ವಾರಂಬಳ್ಳಿ ಹೇಳುತ್ತಾರೆ. ಒಬ್ಬ ಸಾಮಾನ್ಯ ದೈಹಿಕ ಸಮಸ್ಯೆ ವೈದ್ಯರು ಪ್ರತಿದಿನ ಸುಮಾರು 50 ರೋಗಿಗಳನ್ನು ಸಂಪರ್ಕಿಸಿದರೆ, ಮಾನಸಿಕ ಆರೋಗ್ಯ ವೈದ್ಯರು ಕೇವಲ 10 ರೋಗಿಗಳನ್ನು ಮಾತ್ರ ನೋಡಬಹುದು. ಸರಾಸರಿಯಾಗಿ, ಮಾನಸಿಕ ಆರೋಗ್ಯ ರೋಗಿಯೊಂದಿಗೆ ಮೊದಲ ಸಮಾಲೋಚನೆಯ ಸಮಯದಲ್ಲಿ ವೈದ್ಯರು ಕನಿಷ್ಠ 25 ರಿಂದ 30 ನಿಮಿಷಗಳ ಕಾಲ ಅವರ ಮನಸ್ಸನ್ನು ಅರ್ಥಮಾಡಿಕೊಳ್ಳಬೇಕು. ಭಾರತೀಯ ವೈದ್ಯರು ಕೇವಲ 5 ರಿಂದ 10 ನಿಮಿಷಗಳನ್ನು ಕಳೆಯುತ್ತಾರೆ ಎಂದು ತಜ್ಞರು ಹೇಳುತ್ತಾರೆ.
ಹೆಚ್ಚುತ್ತಿರುವ ರೋಗಿಗಳ ಸಂಖ್ಯೆಗಳಿಗೆ ಪೂರಕ ಆರೋಗ್ಯ ವ್ಯವಸ್ಥೆ ನೀಡಲು ನಿಮ್ಹಾನ್ಸ್ ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಪ್ರಸ್ತುತ ಹೊರರೋಗಿ ವಿಭಾಗವು 35 ವರ್ಷಕ್ಕಿಂತ ಹಳೆಯದಾಗಿದೆ ಎಂದು ಡಾ.ಶಶಿಧರ್ ಹೇಳಿದರು. 200 ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ಹೊಸ ಒಪಿಡಿ ಸಂಕೀರ್ಣವನ್ನು ಸ್ಥಾಪಿಸಲು ಅನುಮೋದನೆ ಪಡೆಯಲು ನಾವು ಯೋಜಿಸುತ್ತಿದ್ದೇವೆ ಎಂದು ಅವರು ಹೇಳಿದರು. ಒಳರೋಗಿಗಳಿಗಾಗಿ ಹೊಸ ನರವಿಜ್ಞಾನ ಮತ್ತು ನರಶಸ್ತ್ರಚಿಕಿತ್ಸಾ ಕಟ್ಟಡವನ್ನು ಪ್ರಾರಂಭಿಸಲಾಗಿದೆ. ದೂರದಿಂದ ಬರುವ ರೋಗಿಗಳಿಗೆ ಹೊಸ ವಿಶ್ರಾಂತಿ ಗೃಹವಿದೆ ಎಂದರು.