ಜೈನ ಮುನಿ ಹತ್ಯೆ, ಯುವ ಬ್ರಿಗೇಡ್ ಸದಸ್ಯನ ಹತ್ಯೆ ಪ್ರಕರಣ: ಬಿಜೆಪಿಯಿಂದ 2 ಸತ್ಯಶೋಧನಾ ತಂಡ ರಚನೆ

ಬೆಳಗಾವಿಯಲ್ಲಿ ನಡೆದ ಜೈನ ಮುನಿ ಹತ್ಯೆ ಪ್ರಕರಣ ಹಾಗೂ ಮೈಸೂರಿನ ತಿ.ನರಸಿಪುರದಲ್ಲಿ ನಡೆದ ಯುವಾ ಬ್ರಿಗೇಡ್ ಕಾರ್ಯಕರ್ತನ ಹತ್ಯೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಬಿಜೆಪಿ ಸತ್ಯ ಶೋಧನ ತಂಡವನ್ನು ರಚಿಸಿದೆ. 
ಬಿಜೆಪಿ
ಬಿಜೆಪಿ

ಬೆಂಗಳೂರು: ಬೆಳಗಾವಿಯಲ್ಲಿ ನಡೆದ ಜೈನ ಮುನಿ ಹತ್ಯೆ ಪ್ರಕರಣ ಹಾಗೂ ಮೈಸೂರಿನ ತಿ.ನರಸಿಪುರದಲ್ಲಿ ನಡೆದ ಯುವಾ ಬ್ರಿಗೇಡ್ ಕಾರ್ಯಕರ್ತನ ಹತ್ಯೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಬಿಜೆಪಿ ಸತ್ಯ ಶೋಧನ ತಂಡವನ್ನು ರಚಿಸಿದೆ. 

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಿಟಿ ರವಿ ನೇತೃತ್ವದಲ್ಲಿ ಈ ಸಮಿತಿ ಕಾರ್ಯನಿರ್ವಹಿಸಲಿದ್ದು, ಘಟನೆಗಳ ಸತ್ಯವನ್ನು ತಿಳಿಯುವ ಕೆಲಸ ಮಾಡಲಿದೆ ಎಂದು ಪಕ್ಷ ತಿಳಿಸಿದೆ.

ಕಟೀಲ್ ನೇತೃತ್ವದಲ್ಲಿ 11 ಮಂದಿ ಕಾರ್ಯನಿರ್ವಹಿಸಲಿದ್ದರೆ, ಸಿಟಿ ರವಿ ನೇತೃತ್ವದಲ್ಲಿ 10 ಸದಸ್ಯರು ಇರಲಿದ್ದಾರೆ. ಅವರಿಗೆ ವಹಿಸಲಾದ ಜಿಲ್ಲೆಗಳಿಗೆ ಇಬ್ಬರೂ ನಾಯಕರೂ ಮಂಗಳವಾರ ಭೇಟಿ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಜೈನಮುನಿ ಆಚಾರ್ಯ ಶ್ರೀ ಕಾಮಕುಮಾರ ನಂದಿ ಮಹಾರಾಜರನ್ನು ಚಿಕ್ಕೋಡಿಯಲ್ಲಿ ಹತ್ಯೆ ಮಾಡಿ ಅವರ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಬೋರ್ವೆಲ್ ನಲ್ಲಿ ಹಾಕಲಾಗಿತ್ತು.

ಈ ಹತ್ಯೆ ಬಿಜೆಪಿ-ಕಾಂಗ್ರೆಸ್ ನಡುವೆ ವಾಗ್ವಾದಕ್ಕೆ, ಪರಸ್ಪರ ಆರೋಪಗಳಿಗೆ ಕಾರಣವಾಗಿತ್ತು. ಈ ನಡುವೆ ಗೃಹ ಸಚಿವ ಡಾ. ಜಿ ಪರಮೇಶ್ವರ ಜೈನ ಮುನಿಗಳ ಹತ್ಯೆ ಪ್ರಕರಣವನ್ನು ಸಿಬಿಐ ಗೆ ವಹಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com