ಅಧಿಕಾರಿಗಳಿಗಿಂತ ಮಕ್ಕಳಲ್ಲಿ ಉತ್ತಮ ಆಲೋಚನೆ; ಬೆಂಗಳೂರು ಕಟ್ಟಿದ್ದು ಮಾಜಿ-ಹಾಲಿ ಸಿಎಂಗಳಲ್ಲ: ಡಿ.ಕೆ ಶಿವಕುಮಾರ್

ಬೆಂಗಳೂರು ಕಟ್ಟಿದ್ದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ಬಸವರಾಜ ಬೊಮ್ಮಾಯಿ ಅಥವಾ ಈಗಿನ ಸಿಎಂ ಸಿದ್ದರಾಮಯ್ಯ ಅಲ್ಲ ಎಂದು ಶಿವಕುಮಾರ್ ಹೇಳಿದರು.
ಡಿ.ಕೆ ಶಿವಕುಮಾರ್
ಡಿ.ಕೆ ಶಿವಕುಮಾರ್
Updated on

ಬೆಂಗಳೂರು: ಅಧಿಕಾರಶಾಹಿಗಿಂತ ಮಕ್ಕಳಿಗೆ ಉತ್ತಮ ಆಲೋಚನೆಗಳಿವೆ ಎಂದು  ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ. ಮಂಗಳವಾರ ಬ್ರ್ಯಾಂಡ್ ಬೆಂಗಳೂರು ಯೋಜನೆಯ ಸಂಬಂಧ ವಿವಿಧ ಶಾಲೆಗಳ ವಿದ್ಯಾರ್ಥಿಗಳ ಸಂವಾದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಬ್ರಾಂಡ್ ಬೆಂಗಳೂರು ಅಭಿಯಾನಕ್ಕೆ ಸಾರ್ವಜನಿಕರು ಮತ್ತು ತಜ್ಞರಿಂದ 70,000 ಕ್ಕೂ ಹೆಚ್ಚು ಸಲಹೆಗಳನ್ನು ಸ್ವೀಕರಿಸಿದ ನಂತರ, ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಶಿವಕುಮಾರ್ ಅವರು ತಮ್ಮ ಮೆಚ್ಚಿನ ಯೋಜನೆಗಾಗಿ ಶಾಲಾ ಮಕ್ಕಳಿಂದಲೂ ಸಲಹೆಗಳನ್ನು ಪಡೆದರು.

ಮೆಟ್ರೊ ಬಳಕೆಯ ಮಹತ್ವ, ಪರಿಸರ ಮತ್ತು ವಾಹನ ದಟ್ಟಣೆಯ ಮೇಲೆ ಅದರ ಪರಿಣಾಮ ಮತ್ತು ಘನತ್ಯಾಜ್ಯ ಕಳಪೆ  ನಿರ್ವಹಣೆ, ಜನರ ಉದಾಸೀನ ಮನೋಭಾವದಿಂದ ಉದ್ಯಾನ ನಗರವು ಹೇಗೆ ಕಸ ನಗರವಾಯಿತು ಎಂಬ ಬಗ್ಗೆ ವಿದ್ಯಾರ್ಥಿಗಳು ಚರ್ಚಿಸಿದರು.

ಬೆಂಗಳೂರು ಕಟ್ಟಿದ್ದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ಬಸವರಾಜ ಬೊಮ್ಮಾಯಿ ಅಥವಾ ಈಗಿನ ಸಿಎಂ ಸಿದ್ದರಾಮಯ್ಯ ಅಲ್ಲ ಎಂದು ಶಿವಕುಮಾರ್ ಹೇಳಿದರು.

"ನಿಮ್ಮಿಂದ (ಶಾಲಾ ಮಕ್ಕಳು) ನಗರವು ಅಭಿವೃದ್ಧಿ ಹೊಂದುತ್ತಿದೆ ಮತ್ತು ಅಭಿವೃದ್ಧಿಯ ಪರಿಣಾಮವಾಗಿ ನೀವು ಪಡೆಯುತ್ತಿರುವ ಶಿಕ್ಷಣದ ಗುಣಮಟ್ಟ ಉತ್ತಮವಾಗಿದೆ. ಭವಿಷ್ಯದಲ್ಲಿ, ನೀವೆಲ್ಲರೂ ಸಮೃದ್ಧ ಬೆಂಗಳೂರಿನ ಭಾಗವಾಗಬೇಕು. ವಿದ್ಯಾರ್ಥಿಗಳು ಐಎಎಸ್ ಅಧಿಕಾರಿಗಳಿಗಿಂತ ಉತ್ತಮ ಸಲಹೆಗಳನ್ನು ನೀಡಬಹುದು ಮತ್ತು ಆದ್ದರಿಂದ ನಾವು ಬೆಂಗಳೂರನ್ನು ಪರಿವರ್ತಿಸುವಲ್ಲಿ ನಿಮ್ಮನ್ನೂ ಸಂಪರ್ಕಿಸುತ್ತಿದ್ದೇವೆ" ಎಂದು ಅವರು ಹೇಳಿದರು.

ಗ್ರೀನ್ ಬೆಂಗಳೂರು ಕುರಿತು ವಿದ್ಯಾರ್ಥಿಯೊಬ್ಬರು ಮಾತನಾಡಿದರು. ತಾವು ಸಚಿವರಾದ ನಂತರ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ , ಶಾಲಾ ಆಡಳಿತ ಮಂಡಳಿಗಳೊಂದಿಗೆ ಒಪ್ಪಂದ ಮಾಡಿಕೊಂಡು ಸಸಿಗಳನ್ನು ನೆಟ್ಟು ನಿರ್ವಹಣೆ ಮಾಡುವ ಜವಾಬ್ದಾರಿಯನ್ನು ನಗರಸಭೆ ನೀಡಬೇಕು ಎಂದು ಸಲಹೆ ನೀಡಿದರು.

ಸಸಿಗಳನ್ನು ನೆಟ್ಟು ಅದನ್ನು ನಿರ್ವಹಿಸುವ ಮಕ್ಕಳಿಗೆ ಅವರ ಹೆಸರಿಡಲು ಅವಕಾಶ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು. ಉದ್ಯಾನನಗರಿಯ ಕಡೆಗೆ ಮಕ್ಕಳು ಮಾಲೀಕತ್ವವನ್ನು ಪ್ರದರ್ಶಿಸುವುದನ್ನು ಖಚಿತಪಡಿಸಿಕೊಳ್ಳಲು ಈ ಕೆಲಸ ಮಾಡಬೇಕೆಂದು ಶಿವಕಮಾರ್ ಸೂಚಿಸಿದರು.

ಬೆಂಗಳೂರು ಪೂರ್ವ ನಿಯೋಜಿತ ನಗರವಲ್ಲ ಎಂದು ಸಚಿವರು ಹೇಳಿದರು. "ಇದನ್ನು ನವೀಕರಿಸುವುದು ಸವಾಲಿನ ಕೆಲಸವಾಗಿದೆ. ಇದಕ್ಕಾಗಿ ಸರ್ಕಾರವು ಬೆಂಗಳೂರಿನ ಅಂತಾರಾಷ್ಟ್ರೀಯ ಏಜೆನ್ಸಿಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ" ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com