ಕೇರಳಕ್ಕೆ ಮುಂಗಾರು ಆಗಮನ: ವಾಡಿಕೆಗಿಂತ ಒಂದು ವಾರ ವಿಳಂಬ, ಕರಾವಳಿ ಮೇಲೆ ಪ್ರಭಾವ

ನೈಋತ್ಯ ಮುಂಗಾರು ಕೇರಳಕ್ಕೆ ಇಂದು ಗುರುವಾರ ಪ್ರವೇಶಿಸುವ ಮೂಲಕ ದೇಶಕ್ಕೆ ಈ ವರ್ಷ ಆಗಮನವಾಗಿದೆ. ವಾಡಿಕೆಯ ರೂಢಿಗಿಂತ ಒಂದು ವಾರ ತಡವಾಗಿ ಪ್ರವೇಶಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ನೈಋತ್ಯ ಮುಂಗಾರು ಕೇರಳಕ್ಕೆ ಇಂದು ಗುರುವಾರ ಪ್ರವೇಶಿಸುವ ಮೂಲಕ ದೇಶಕ್ಕೆ ಈ ವರ್ಷ ಆಗಮನವಾಗಿದೆ. ವಾಡಿಕೆಯ ರೂಢಿಗಿಂತ ಒಂದು ವಾರ ತಡವಾಗಿ ಪ್ರವೇಶಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ. 

'ಬೈಪರ್‌ಜೋಯ್' ಚಂಡಮಾರುತ ಮಾನ್ಸೂನ್‌ನ ತೀವ್ರತೆಯ ಮೇಲೆ ಪರಿಣಾಮ ಬೀರುತ್ತಿದ್ದು ಕೇರಳದ ಮೇಲೆ ಅದರ ಆಕ್ರಮಣವು ಸೌಮ್ಯ ರೀತಿಯಿಂದಿರುತ್ತದೆ ಎಂದು ಹವಾಮಾನ ಇಲಾಖೆ ತಜ್ಞರು ತಿಳಿಸಿದ್ದಾರೆ. 

ದಕ್ಷಿಣ ಅರೇಬಿಯನ್ ಸಮುದ್ರದ ಉಳಿದ ಭಾಗಗಳು ಮತ್ತು ಮಧ್ಯ ಅರೇಬಿಯನ್ ಸಮುದ್ರದ ಕೆಲವು ಭಾಗಗಳು, ಸಂಪೂರ್ಣ ಲಕ್ಷದ್ವೀಪ ಪ್ರದೇಶಗಳು, ಕೇರಳದ ಹೆಚ್ಚಿನ ಭಾಗಗಳು, ದಕ್ಷಿಣ ತಮಿಳುನಾಡಿನ ಹೆಚ್ಚಿನ ಭಾಗಗಳು, ಕೊಮೊರಿನ್ ಪ್ರದೇಶದ ಉಳಿದ ಭಾಗಗಳು, ಮನ್ನಾರ್ ಕೊಲ್ಲಿ ಮತ್ತು ಇನ್ನೂ ಕೆಲವು ಭಾಗಗಳಲ್ಲಿ ನೈಋತ್ಯ, ಮಧ್ಯ ಮತ್ತು ಈಶಾನ್ಯ ಬಂಗಾಳ ಕೊಲ್ಲಿಯಲ್ಲಿ ಇಂದು ತನ್ನ ಪ್ರಭಾವವನ್ನು ಬೀರಿದೆ. 

ನೈಋತ್ಯ ಮಾನ್ಸೂನ್ ಸಾಮಾನ್ಯವಾಗಿ ಪ್ರತಿವರ್ಷ ಜೂನ್ 1 ರಂದು ಕೇರಳ ಪ್ರವೇಶವಾಗುತ್ತದೆ. ಕಳೆದ 150 ವರ್ಷಗಳಲ್ಲಿ, ಕೇರಳದ ಮೇಲೆ ಮಾನ್ಸೂನ್ ಆರಂಭದ ದಿನಾಂಕವು ವ್ಯಾಪಕವಾಗಿ ಬದಲಾಗಿದೆ, ಹವಾಮಾನ ಇಲಾಖೆ ಪ್ರಕಾರ, 1918 ರಲ್ಲಿ ಮೇ 11 ಮತ್ತು ಹೆಚ್ಚು ವಿಳಂಬವಾಗಿ ಆಗಮನವಾಗಿದ್ದು 1972 ರಲ್ಲಿ ಜೂನ್ 18ರಂದು ಪ್ರವೇಶವಾಗಿತ್ತು.

ಸಂಶೋಧನೆಯು ಕೇರಳದ ಮೇಲೆ ಮಾನ್ಸೂನ್ ಪ್ರಾರಂಭದಲ್ಲಿ ವಿಳಂಬವನ್ನು ತೋರಿಸಿದರೂ ವಾಯವ್ಯ ಭಾರತದಲ್ಲಿ ಮಾನ್ಸೂನ್ ಪ್ರಾರಂಭದಲ್ಲಿ ವಿಳಂಬವಾಗಿದೆ ಎಂದರ್ಥವಲ್ಲ. ಆದಾಗ್ಯೂ, ಕೇರಳಕ್ಕೆ ವಿಳಂಬ ಪ್ರವೇಶವು ಸಾಮಾನ್ಯವಾಗಿ ದಕ್ಷಿಣದ ರಾಜ್ಯಗಳು ಮತ್ತು ಮುಂಬೈನಲ್ಲಿ ಪ್ರಾರಂಭದಲ್ಲಿ ವಿಳಂಬವಾಗಿರುತ್ತದೆ. 

ಆರಂಭದಲ್ಲಿ ಮುಂಗಾರು ವಿಳಂಬವಾದರೂ ದೇಶದಲ್ಲಿ ಮಳೆ ಬೀಳುವ ಪ್ರಮಾಣ ಕಡಿಮೆಯಾಗಬೇಕೆಂದಿಲ್ಲ. ನೈಋತ್ಯ ಮಾನ್ಸೂನ್ ಅವಧಿಯಲ್ಲಿ ಭಾರತವು ಸಾಮಾನ್ಯ ಮಳೆಯನ್ನು ಪಡೆಯುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಈ ಹಿಂದೆ ಹೇಳಿತ್ತು. ವಾಯುವ್ಯ ಭಾರತದಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗುವ ನಿರೀಕ್ಷೆಯಿದೆ. ಪೂರ್ವ ಮತ್ತು ಈಶಾನ್ಯ, ಮಧ್ಯ ಮತ್ತು ದಕ್ಷಿಣ ಪರ್ಯಾಯ ದ್ವೀಪವು ದೀರ್ಘಾವಧಿಯ ಸರಾಸರಿಯ ಶೇಕಡಾ 94ರಿಂದ 106ರಷ್ಟು ಸಾಮಾನ್ಯ ಮಳೆಯನ್ನು ಪಡೆಯುವ ನಿರೀಕ್ಷೆಯಿದೆ.

ದೀರ್ಘಾವಧಿಯ ಸರಾಸರಿಯಲ್ಲಿ ಶೇಕಡಾ 90 ಕ್ಕಿಂತ ಕಡಿಮೆ ಮಳೆ ಬಿದ್ದರೆ 'ಕೊರತೆ' ಎಂದು ಪರಿಗಣಿಸಲಾಗುತ್ತದೆ, 90 ಪ್ರತಿಶತ ಮತ್ತು 95 ಪ್ರತಿಶತದ ನಡುವೆ 'ಸಾಮಾನ್ಯಕ್ಕಿಂತ ಕಡಿಮೆ', 105 ಮತ್ತು 110 ಪ್ರತಿಶತ ನಡುವೆ 'ಸಾಮಾನ್ಯಕ್ಕಿಂತ ಹೆಚ್ಚು' ಮತ್ತು 100 ಕ್ಕಿಂತ ಹೆಚ್ಚು ಶೇಕಡಾ ಮಳೆ ಬಿದ್ದರೆ 'ಹೆಚ್ಚುವರಿ' ಮಳೆಯಾಗಿದೆ.

ಕೃಷಿ ಪ್ರಧಾನ ದೇಶವಾದ ಭಾರತದಲ್ಲಿ ಮಳೆಯು ಬೆಳೆಗಳಿಗೆ ನಿರ್ಣಾಯಕವಾಗಿರುತ್ತದೆ., ನಿವ್ವಳ ಕೃಷಿ ಪ್ರದೇಶದ ಶೇಕಡಾ 52 ಭಾಗವು ಮಳೆಯನ್ನೇ ನಂಬಿಕೊಂಡಿವೆ. ದೇಶಾದ್ಯಂತ ವಿದ್ಯುತ್ ಉತ್ಪಾದನೆಯ ಹೊರತಾಗಿ ಕುಡಿಯುವ ನೀರಿಗೆ ನಿರ್ಣಾಯಕವಾದ ಜಲಾಶಯಗಳನ್ನು ಮರುಪೂರಣಗೊಳಿಸಲು ಮಳೆ ನಿರ್ಣಾಯಕವಾಗಿದೆ.

ಮಳೆಯಾಶ್ರಿತ ಕೃಷಿಯು ದೇಶದ ಒಟ್ಟು ಆಹಾರ ಉತ್ಪಾದನೆಯ ಸುಮಾರು ಶೇಕಡಾ 40ರಷ್ಟನ್ನು ಹೊಂದಿದೆ, ಇದು ಭಾರತದ ಆಹಾರ ಭದ್ರತೆ ಮತ್ತು ಆರ್ಥಿಕ ಸ್ಥಿರತೆಗೆ ನಿರ್ಣಾಯಕ ಕೊಡುಗೆ ನೀಡುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com