ಪಾರದರ್ಶಕ ಮತ್ತು ಹಗರಣ ಮುಕ್ತ ಆಡಳಿತ ನೀಡುತ್ತೇವೆ: ಸಚಿವ ಈಶ್ವರ್ ಖಂಡ್ರೆ
ಪಾರದರ್ಶಕ ಮತ್ತು ಹಗರಣ ಮುಕ್ತ ಆಡಳಿತ ನೀಡುವುದಾಗಿ ಅರಣ್ಯ ಮತ್ತು ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ. ದಕ್ಷ, ಪ್ರಾಮಾಣಿಕ, ಹಗರಣ ಮುಕ್ತ ಹಾಗೂ ಪಾರದರ್ಶಕ ಆಡಳಿತ ನೀಡಲು ಶ್ರಮಿಸುವುದಾಗಿ ಅವರು ಹೇಳಿದರು.
Published: 09th June 2023 11:24 AM | Last Updated: 09th June 2023 11:24 AM | A+A A-

ವಿಕಾಸ ಸೌಧದಲ್ಲಿ ಅಧಿಕೃತ ಕಚೇರಿಯ ಪೂಜೆ ನೆರವೇರಿಸಿ ಆವರಣದಲ್ಲಿ ಸಸಿ ನೆಟ್ಟ ಅರಣ್ಯ ಖಾತೆ ಸಚಿವ ಈಶ್ವರ್ ಖಂಡ್ರೆ
ಬೆಂಗಳೂರು: ಪಾರದರ್ಶಕ ಮತ್ತು ಹಗರಣ ಮುಕ್ತ ಆಡಳಿತ ನೀಡುವುದಾಗಿ ಅರಣ್ಯ ಮತ್ತು ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ. ದಕ್ಷ, ಪ್ರಾಮಾಣಿಕ, ಹಗರಣ ಮುಕ್ತ ಹಾಗೂ ಪಾರದರ್ಶಕ ಆಡಳಿತ ನೀಡಲು ಶ್ರಮಿಸುವುದಾಗಿ ಅವರು ಹೇಳಿದರು.
ನಾನು ಜನರ ಪರವಾದ ರೀತಿಯಲ್ಲಿ ಕೆಲಸ ಮಾಡಲು ಮನಸ್ಸು ಹೊಂದಿದವನಾಗಿದ್ದು ಜನರ ಕೆಲಸ ದೇವರ ಕೆಲಸ ಎಂದು ಕೈಗೆತ್ತಿಕೊಳ್ಳುತ್ತೇನೆ. ಅರಣ್ಯ ಮತ್ತು ಪರಿಸರ ಇಲಾಖೆಯಲ್ಲಿ ಹಲವು ಸವಾಲುಗಳಿವೆ. ಅವುಗಳನ್ನು ನಿವಾರಿಸಿ ಮಹತ್ವದ ಬದಲಾವಣೆ ತರಲು ಶ್ರಮಿಸುತ್ತೇನೆ ಎಂದರು.
ಪ್ಲಾಸ್ಟಿಕ್ ತ್ಯಾಜ್ಯ, ವಾಯು ಮಾಲಿನ್ಯ ಸೇರಿದಂತೆ ಹಲವು ವಿಷಯಗಳನ್ನು ಪ್ರಸ್ತಾಪಿಸಿದ ಅವರು, 2024ರ ವೇಳೆಗೆ ಐದು ಪ್ಲಾಸ್ಟಿಕ್ ಮುಕ್ತ ನಗರಗಳ ಜೊತೆಗೆ ಕೆರೆಗಳನ್ನು ಸ್ವಚ್ಛಗೊಳಿಸುವ ಭರವಸೆಯನ್ನು ನೀಡಿದರು. ನಾನು ತುಮಕೂರು, ಚಿತ್ರದುರ್ಗ ಮತ್ತು ರಾಮನಗರ ಜಿಲ್ಲೆಗಳಿಗೂ ಭೇಟಿ ನೀಡಿ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ್ದೇನೆ ಎಂದರು.