ಬಿಡಿಎ
ಬಿಡಿಎ

ಬೆಂಗಳೂರು: ಬಿಡಿಎನಿಂದ ಕೆಂಪೇಗೌಡ ಲೇಔಟ್‌ನಲ್ಲಿ ಬೆಟರ್‌ಮೆಂಟ್ ಶುಲ್ಕ ಸಂಗ್ರಹ

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ನಾಡಪ್ರಭು ಕೆಂಪೇಗೌಡ ಲೇಔಟ್‌ನಲ್ಲಿ(ಎನ್‌ಪಿಕೆಎಲ್) 827 ಎಕರೆ ಜಮೀನಿನ ಭೂಮಾಲೀಕರಿಂದ ಬೆಟರ್‌ಮೆಂಟ್ ಶುಲ್ಕ ಸಂಗ್ರಹಿಸುವ ಪ್ರಕ್ರಿಯೆ ಆರಂಭಿಸಿದ್ದು, 90 ದಿನಗಳಲ್ಲಿ ಶುಲ್ಕ ಪಾವತಿಸುವಂತೆ...

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ನಾಡಪ್ರಭು ಕೆಂಪೇಗೌಡ ಲೇಔಟ್‌ನಲ್ಲಿ(ಎನ್‌ಪಿಕೆಎಲ್) 827 ಎಕರೆ ಜಮೀನಿನ ಭೂಮಾಲೀಕರಿಂದ ಬೆಟರ್‌ಮೆಂಟ್ ಶುಲ್ಕ ಸಂಗ್ರಹಿಸುವ ಪ್ರಕ್ರಿಯೆ ಆರಂಭಿಸಿದ್ದು, 90 ದಿನಗಳಲ್ಲಿ ಶುಲ್ಕ ಪಾವತಿಸುವಂತೆ ಮಾಲೀಕರಿಗೆ ಈ ವಾರ ನೋಟಿಸ್ ಕಳುಹಿಸಿದೆ.

ಒಂದು ಬಾರಿ ವಿಧಿಸುವ ಈ ಶುಲ್ಕವನ್ನು ಸಂಗ್ರಹಿಸಲು ಆರಂಭದಲ್ಲಿ ಭೂಮಿ ಸ್ವಾಧೀನಪಡಿಸಿಕೊಳ್ಳುವಾಗ ನಿರ್ಧರಿಸಲಾಗಿತ್ತು. ಆದರೆ ನಂತರ ಲೇಔಟ್ ರಚನೆಯ ಸಮಯದಲ್ಲಿ ಇದನ್ನು ಕೈಬಿಡಲಾಗಿತ್ತು. ನಂತರ ಪ್ರಾಧಿಕಾರಕ್ಕೆ ಆದಾಯ ಕ್ರೋಢೀಕರಿಸಲು ಬೆಟರ್‌ಮೆಂಟ್ ಶುಲ್ಕ ಸಂಗ್ರಹಿಸಲು ನಿರ್ಧರಿಸಲಾಯಿತು.

ಹಿಂದಿನ ಸರ್ಕಾರ 2019 ರಲ್ಲಿ ಪ್ರಸ್ತಾವನೆಯನ್ನು ಅನುಮೋದಿಸಿತ್ತು. ಆದರೆ ತಾಂತ್ರಿಕ ಸಮಸ್ಯೆಗಳು ಮತ್ತು ಕೋವಿಡ್ ಸಾಂಕ್ರಾಮಿಕದಿಂದ ಶುಲ್ಕ ಸಂಗ್ರಹ ಪ್ರಕ್ರಿಯೆ ಪ್ರಾರಂಭವಾಗಲಿಲ್ಲ. ಈ ಸಂಬಂಧ ಈಗ ಏಪ್ರಿಲ್ 20, 2023 ರಂದು ಅಧಿಕೃತವಾಗಿ ಅಧಿಸೂಚನೆ ಹೊರಡಿಸಲಾಗಿದೆ.

ನಾವು ಕೆಂಪೇಗೌಡ ಲೇಔಟ್‌ನಲ್ಲಿ ಒಂದು ಗುಂಟೆ ಭೂಮಿಗೆ 80,208 ರೂಪಾಯಿ ಶುಲ್ಕ ವಿಧಿಸುತ್ತಿದ್ದೇವೆ. ಒಂದು ಎಕರೆಗೆ, ಇದು 32 ಲಕ್ಷಕ್ಕಿಂತ ಸ್ವಲ್ಪ ಹೆಚ್ಚಾಗಬಹುದು. ನೋಟಿಸ್ ನೀಡಿದ ದಿನಾಂಕದಿಂದ ಈ ಶುಲ್ಕ ಪಾವತಿಸಲು ಮಾಲೀಕರಿಗೆ 90 ದಿನಗಳ ಕಾಲಾವಕಾಶ ನೀಡಲಾಗುತ್ತದೆ ಎಂದು ಬಿಡಿಎ ಭೂಸ್ವಾಧೀನ ವಿಭಾಗದ ಡೆಪ್ಯುಟಿ ಕಮಿಷನರ್ ಎ ಸೌಜನ್ಯ ಅವರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ಬಿಡಿಎ ಇಲ್ಲಿ 357 ಪಾಲುದಾರರಿಂದ 265 ಕೋಟಿ ರೂಪಾಯಿ ಸಂಗ್ರಹಿಸಲು ಯೋಜಿಸಿದೆ ಎಂದು ಸೌಜನ್ಯ ಅವರು ಹೇಳಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com