ಉಚಿತ ವಿದ್ಯುತ್: ಗೃಹಜ್ಯೋತಿ ಯೋಜನೆಗೆ 51 ಲಕ್ಷಕ್ಕೂ ಹೆಚ್ಚು ಗ್ರಾಹಕರು ನೋಂದಣಿ
ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆ ಅಡಿ ಉಚಿತ ವಿದ್ಯುತ್ ಗೆ ನೋಂದಣಿ ಮಾಡಿಸಿಕೊಳ್ಳುವವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಭಾನುವಾರ ನೋಂದಣಿ ಮಾಡಿಕೊಂಡ...
Published: 25th June 2023 11:42 PM | Last Updated: 26th June 2023 08:21 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆ ಅಡಿ ಉಚಿತ ವಿದ್ಯುತ್ ಗೆ ನೋಂದಣಿ ಮಾಡಿಸಿಕೊಳ್ಳುವವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಭಾನುವಾರ ನೋಂದಣಿ ಮಾಡಿಕೊಂಡ ಗ್ರಾಹಕರ ಸಂಖ್ಯೆ 51 ಲಕ್ಷ ದಾಟಿದೆ ಎಂದು ಇಂಧನ ಇಲಾಖೆ ತಿಳಿಸಿದೆ.
ಸರ್ವರ್ ಸಮಸ್ಯೆ ನಡುವೆಯೂ ಗೃಹ ಜ್ಯೋತಿ ಯೋಜನೆಗೆ ಕಳೆದ ಏಳು ದಿನಗಳಲ್ಲಿ ಒಟ್ಟು 51,17,692 ಲಕ್ಷ ಗ್ರಾಹಕರು ನೋಂದಣಿ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಲಾಗಿದ್ದು, ಗೃಹ ಜ್ಯೋತಿ ನೋಂದಣಿಯು ಇನ್ನಷ್ಟು ವೇಗ ಪಡೆದುಕೊಂಡಿದ್ದು, ಭಾನುವಾರ ರಾತ್ರಿ 8 ಗಂಟೆವರೆಗೆ 51,17,692 ಗ್ರಾಹಕರು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಇಂಧನನ ಇಲಾಖೆ ತಿಳಿಸಿದೆ.
ಇದನ್ನು ಓದಿ: ಉಚಿತ ವಿದ್ಯುತ್: ಗೃಹಜ್ಯೋತಿ ಯೋಜನೆಗೆ ಇಂದು 11,17,208 ಗ್ರಾಹಕರು ನೋಂದಣಿ
ಇ-ಆಡಳಿತ ಇಲಾಖೆ ಪ್ರತ್ಯೇಕ ನೋಂದಣಿ ಲಿಂಕ್ ಅನ್ನು ರಾಜ್ಯದ 2,000 ವಿದ್ಯುಚ್ಛಕ್ತಿ ಕಚೇರಿಗಳಿಗೆ ನೀಡಿದ ನಂತರ ನೋಂದಣಿ ಪ್ರಕ್ರಿಯೆ ವೇಗ ಪಡೆದುಕೊಂಡಿದ್ದು, ಶುಕ್ರವಾರ(ಜೂನ್ 23) 10,93,606 ಗ್ರಾಹಕರು ನೋಂದಣಿ ಮಾಡಿಕೊಂಡಿದ್ದರು. ಶನಿವಾರ(ಜೂನ್ 24) ಸಂಜೆ 8 ಗಂಟೆಯವರೆಗೆ 11,17,208 ಗ್ರಾಹಕರು ಯೋಜನೆಗೆ ನೋಂದಣಿ ಮಾಡಿಕೊಂಡಿದ್ದಾರೆ.
ಗೃಹ ಜ್ಯೋತಿ ಯೋಜನೆಯ ನೋಂದಣಿಗೆ 51 ಲಕ್ಷದ ಮೈಲಿಗಲ್ಲು!
— Managing Director, BESCOM (@mdbescom) June 25, 2023
ನೀವೂ https://t.co/iO1tMY4vbZ ಲಿಂಕ್ ಮೂಲಕ ನೋಂದಾಯಿಸಿಕೊಳ್ಳಿ.#GruhaJyothiScheme #GruhaJyothi #milestone #landmarkof50k #registration #freepower @EnergyDeptGoK @CMofKarnataka @siddaramaiah @thekjgeorge @NammaBESCOM pic.twitter.com/o613QPBL4f