ಬಕ್ರೀದ್ ಸಾಮೂಹಿಕ ಪ್ರಾರ್ಥನೆಯಲ್ಲಿ ಸಿದ್ದರಾಮಯ್ಯ ಭಾಗಿ; ದ್ವೇಷ ಸೃಷ್ಟಿಸಲು ಬಯಸುವವರಿಗೆ ಪ್ರಾಮುಖ್ಯತೆ ನೀಡಬೇಕಿಲ್ಲ ಎಂದ ಸಿಎಂ
ಮುಸ್ಲಿಂ ಬಾಂಧವರ ಪವಿತ್ರ ಹಬ್ಬವಾದ ಈದ್-ಅಲ್-ಅಧಾ ಹಬ್ಬವನ್ನು ಇಂದು ಗುರುವಾರ ದೇಶಾದ್ಯಂತ ಬಕ್ರೀದ್ ಎಂದು ಭಕ್ತಿ, ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವ ಜಮೀರ್ ಅಹ್ಮದ್ ಖಾನ್ ಅವರ ಜೊತೆಗೆ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡರು.
Published: 29th June 2023 11:04 AM | Last Updated: 29th June 2023 06:49 PM | A+A A-

ಮುಖ್ಯಮಂತ್ರಿ ಸಿದ್ದರಾಮಯ್ಯ ಬಕ್ರೀದ್ ಹಬ್ಬದ ಪ್ರಯುಕ್ತ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡರು
ಬೆಂಗಳೂರು: ಮುಸ್ಲಿಂ ಬಾಂಧವರ ಪವಿತ್ರ ಹಬ್ಬವಾದ ಈದ್-ಅಲ್-ಅಧಾ ಹಬ್ಬವನ್ನು ಇಂದು ಗುರುವಾರ ದೇಶಾದ್ಯಂತ ಬಕ್ರೀದ್ ಎಂದು ಭಕ್ತಿ, ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವ ಜಮೀರ್ ಅಹ್ಮದ್ ಖಾನ್ ಅವರ ಜೊತೆಗೆ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡರು.
ಮುಖ್ಯಮಂತ್ರಿ @siddaramaiah ಅವರು ಬಕ್ರೀದ್ ಹಬ್ಬದ ಪ್ರಯುಕ್ತ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡು, ಆಗಮಿಸಿದ್ದ ಸಹಸ್ರಾರು ಮುಸ್ಲಿಂ ಬಂಧುಗಳಿಗೆ ಹಬ್ಬದ ಶುಭ ಹಾರೈಸಿದರು.
— CM of Karnataka (@CMofKarnataka) June 29, 2023
ವಸತಿ ಸಚಿವರಾದ @BZZameerAhmedK ಸೇರಿದಂತೆ ಸಮುದಾಯದ ಮುಖಂಡರು ಹಾಗೂ ಹಿರಿಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. pic.twitter.com/9KsolfO24o
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಜನರ ಶಾಂತಿ ಮತ್ತು ಸೌಹಾರ್ದತೆಗಾಗಿ ಪ್ರಾರ್ಥನೆ ಸಲ್ಲಿಸಲು ನಾವಿಲ್ಲಿ ಸೇರಿದ್ದೇವೆ. ಕೆಲವು ಶಕ್ತಿಗಳು ಕೋಮು ಉದ್ವಿಗ್ನತೆ ಮತ್ತು ದ್ವೇಷವನ್ನು ಸೃಷ್ಟಿಸಲು ಬಯಸುತ್ತವೆ. ನಾವು ಅವರಿಗೆ ಪ್ರಾಮುಖ್ಯತೆ ನೀಡಬೇಕಾಗಿಲ್ಲ, ಶಾಂತಿ ನೆಲೆಸುವ ನಿಟ್ಟಿನಲ್ಲಿ ನಾವೆಲ್ಲರೂ ಕೆಲಸ ಮಾಡಬೇಕಾಗಿದೆ ಎಂದರು.
VIDEO | Karnataka CM Siddaramaiah attended Eid-al-Adha prayer in Bengaluru earlier today.#EidUlAdha2023 pic.twitter.com/kjwRHUsQO3
— Press Trust of India (@PTI_News) June 29, 2023
ಇಸ್ಲಾಂ ಧರ್ಮದಲ್ಲಿ ಬಕ್ರೀದ್ ಹಬ್ಬಕ್ಕೆ ವಿಶೇಷ ಮಹತ್ವವಿದೆ. ಇಸ್ಲಾಮಿಕ್ ಕ್ಯಾಲೆಂಡರ್ನ 12ನೇ ತಿಂಗಳಾದ ಜುಲ್-ಹಜ್ಜಾದ 10ನೇ ದಿನದಂದು ಈದ್-ಉಲ್-ಅಧಾ ಹಬ್ಬವನ್ನು ಆಚರಿಸಲಾಗುತ್ತದೆ. ತ್ಯಾಗದ ಸಂಕೇತವಾಗಿ ಆಚರಿಸಲಾಗುವ ಈ ಹಬ್ಬದಲ್ಲಿ ಕುರಿಗಳನ್ನು ಏಕೆ ಬಲಿಕೊಡಲಾಗುತ್ತದೆ ಹಾಗೂ ಈ ಹಬ್ಬವನ್ನು ಭಾರತದಲ್ಲಿ ಬಕ್ರೀದ್ ಎಂಬ ಹೆಸರಿನಿಂದ ಆಚರಿಸಲಾಗುತ್ತದೆ.
ಬಕ್ರೀದ್ ಅಥವಾ ಈದ್ ಉಲ್ ಅಧಾ ಈದ್-ಉಲ್-ಫಿತರ್ ಹಬ್ಬ ಆಚರಿಸಿದ ಸುಮಾರು ಎರಡು ತಿಂಗಳುಗಳ ನಂತರ ಆಚರಿಸಲಾಗುತ್ತದೆ. ಈ ದಿನದಂದು ಉಳ್ಳವರು ಬಡವರಿಗೆ ದಾನ ಮಾಡುತ್ತಾರೆ ಹಾಗೂ ಈ ದಿನ ಸಾಮೂಹಿಕ ಪ್ರಾರ್ಥನೆಯನ್ನು ಸಲ್ಲಿಸಿದ ನಂತರ ಒಂದು ಮೇಕೆಯನ್ನು ಬಲಿ ನೀಡಲಾಗುತ್ತದೆ. ಮುಸ್ಲಿಮರಿಗೆ ಮಾರ್ಗದರ್ಶನ ನೀಡಲು ಅಲ್ಲಾಹನು ಕಳುಹಿಸಿದ ಪ್ರವಾದಿಗಳಲ್ಲಿ ಒಬ್ಬರಾದ ಹಜರತ್ ಇಬ್ರಾಹಿಂ ಅವರ ತ್ಯಾಗವನ್ನು ಸ್ಮರಿಸುವ ಹಬ್ಬ ಇದಾಗಿದೆ.
Muslims gather in large numbers at the Idgah Grounds for mass prayers in #Hubballi on account of #EidAlAdha
— Amit Upadhye (@Amitsen_TNIE) June 29, 2023
Video @HemanthTnie @NewIndianXpress @XpressBengaluru @KannadaPrabha @NammaBengaluroo @karnatakacom @HubliCityeGroup @Namma_HD @hublimandi pic.twitter.com/7wHUFA2rhu
ಬಕ್ರೀದ್ ಎಂದು ಏಕೆ ಕರೆಯುತ್ತಾರೆ: ಇದನ್ನು ವಿಶ್ವಾದ್ಯಂತ ಈದ್-ಉಲ್-ಅಧಾ, ಈದ್-ಉಲ್-ಜುಹಾ, ಬಕ್ರೀದ್ ಎಂಬೆಲ್ಲಾ ಹೆಸರುಗಳಿಂದ ಕರೆಯಲಾಗುತ್ತದೆ. ಈದ್-ಉಲ್-ಅಧಾ, ಈದ್-ಉಲ್-ಜುಹಾ ಇವೆರಡು ಅರೆಬಿಕ್ ಪದವಾಗಿದ್ದು, ತ್ಯಾಗದ ಹಬ್ಬ ಎಂಬ ಅರ್ಥವನ್ನು ಸೂಚಿಸುತ್ತದೆ. ಬಕ್ರ್ ಅಥವಾ ಬಕ್ರಿ ಎಂಬುದು ಮೇಕೆಯ ಉರ್ದ ಪದವಾಗಿದ್ದು, ಈ ಹಬ್ಬದಂದು ತ್ಯಾಗದ ಸಂಕೇತವಾಗಿ ಅಲ್ಲಾಹನಿಗೆ ಮೇಕೆ ಮತ್ತು ಕುರಿಗಳನ್ನು ಬಲಿ ನೀಡುವುದರಿಂದ ಬಕ್ರೀದ್ ಅಥವಾ ಬಕ್ರ-ಈದ್ ಎಂಬ ಹೆಸರು ಬಂದಿದೆ.
#EidUlAdha2023 | Prayers offered at India’s largest mosque, #JamaMasjid in New Delhi#EidMubarak pic.twitter.com/PbbvOylQZp
— DD News (@DDNewslive) June 29, 2023