ಮತದಾರರ ಸೆಳೆಯಲು ಚಿತ್ರದುರ್ಗದ ಮತಗಟ್ಟೆಗಳಲ್ಲಿ ವಿನೂತನ ವಿಧಾನ 'ವಾರ್ಲಿ ಕಲೆ' ಅಳವಡಿಕೆ

ಚುನಾವಣಾ ಆಯೋಗವು 2009 ರಿಂದ ಪ್ರಬಲ ಪ್ರಜಾಪ್ರಭುತ್ವಕ್ಕಾಗಿ ಮತದಾನ ಮತ್ತು ಒಟ್ಟಾರೆ ಚುನಾವಣಾ ಪ್ರಕ್ರಿಯೆಯಲ್ಲಿ  ಭಾಗವಹಿಸುವಿಕೆ ಎಂಬ ವಿಷಯದಡಿಯಲ್ಲಿ SVEEP (ಸಿಸ್ಟಮ್ಯಾಟಿಕ್ ಮತದಾರರ ಶಿಕ್ಷಣ ಮತ್ತು ಚುನಾವಣಾ ಭಾಗವಹಿಸುವಿಕೆ) ಕಾರ್ಯಕ್ರಮವನ್ನು ಕೈಗೆತ್ತಿಕೊಂಡಾಗಿನಿಂದ ಪ್ರತಿ ಚುನಾವಣೆಯಲ್ಲೂ ಮತದಾರರ ಭಾಗವಹಿಸುವಿಕೆ ಹೆಚ್ಚಾಗುತ್ತಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಚಿತ್ರದುರ್ಗ: ಚುನಾವಣಾ ಆಯೋಗವು 2009 ರಿಂದ ಪ್ರಬಲ ಪ್ರಜಾಪ್ರಭುತ್ವಕ್ಕಾಗಿ ಮತದಾನ ಮತ್ತು ಒಟ್ಟಾರೆ ಚುನಾವಣಾ ಪ್ರಕ್ರಿಯೆಯಲ್ಲಿ  ಭಾಗವಹಿಸುವಿಕೆ ಎಂಬ ವಿಷಯದಡಿಯಲ್ಲಿ SVEEP (ಸಿಸ್ಟಮ್ಯಾಟಿಕ್ ಮತದಾರರ ಶಿಕ್ಷಣ ಮತ್ತು ಚುನಾವಣಾ ಭಾಗವಹಿಸುವಿಕೆ) ಕಾರ್ಯಕ್ರಮವನ್ನು ಕೈಗೆತ್ತಿಕೊಂಡಾಗಿನಿಂದ ಪ್ರತಿ ಚುನಾವಣೆಯಲ್ಲೂ ಮತದಾರರ ಭಾಗವಹಿಸುವಿಕೆ ಹೆಚ್ಚಾಗುತ್ತಿದೆ. 

ಚಿತ್ರದುರ್ಗ ಜಿಲ್ಲೆ ಕೂಡ ಕಾರ್ಯಕ್ರಮದ ಪ್ರಯೋಜನ ಪಡೆದಿದೆ. ನಗರ ಮತ್ತು ಗ್ರಾಮೀಣ ಭಾಗದಲ್ಲಿ ಮತದಾರರ ಶೇಕಡಾವಾರು ಪ್ರಮಾಣ 70-90 ದಾಖಲಾಗುತ್ತಿದೆ. ಜಿಲ್ಲಾ ಸ್ವೀಪ್ ಸಮಿತಿಗಳ ಅಧ್ಯಕ್ಷರೂ ಆಗಿರುವ ಜಿಲ್ಲಾ ಪಂಚಾಯತ್ ಸಿಇಒಗಳು ಕೈಗೊಂಡಿರುವ SVEEP ಚಟುವಟಿಕೆಗಳು ಇದಕ್ಕೆ ಕಾರಣ ಎಂದು ಹೇಳಲಾಗುತ್ತದೆ.

ವಿಧಾನಸಭಾ ಚುನಾವಣೆಗೆ ಮುನ್ನ ಚಿತ್ರದುರ್ಗ ಮತದಾನವನ್ನು ಜನಪ್ರಿಯಗೊಳಿಸಲು ಮತ್ತು ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಉತ್ತೇಜಿಸಲು ವಿಶಿಷ್ಟ ವಿಧಾನವನ್ನು ಪ್ರಯತ್ನಿಸುತ್ತಿದೆ. ಜಿಲ್ಲಾ ಪಂಚಾಯಿತಿ ಸಿಇಒ ಎಂ.ಎಸ್.ದಿವಾಕರ್ ‘ಬ್ರಾಂಡ್ ಚಿತ್ರದುರ್ಗ’ವನ್ನು ಜನಪ್ರಿಯಗೊಳಿಸಲು ಮುಂದಾಗಿದ್ದಾರೆ.

ಸಹ್ಯಾದ್ರಿ ಶ್ರೇಣಿಯ ಉತ್ತರ ಭಾಗದ ಬುಡಕಟ್ಟು ಜನರು ರಚಿಸಿದ ಬುಡಕಟ್ಟು ಕಲೆಯ ಒಂದು ರೂಪವಾದ ವಾರ್ಲಿ ಜಾನಪದ ವರ್ಣಚಿತ್ರಗಳಿಂದ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮತದಾನ ಕೇಂದ್ರಗಳನ್ನು ಅಲಂಕರಿಸಲಾಗಿದೆ. ವಾರ್ಲಿ ಕಲೆಯು, ಮೂಲ ಜ್ಯಾಮಿತೀಯ ಆಕಾರಗಳ ಒಂದು ಗುಂಪಾಗಿದೆ: ವೃತ್ತ, ತ್ರಿಕೋನ ಮತ್ತು ಚೌಕಕಾರದಲ್ಲಿ ಇರುತ್ತದೆ. ಚುನಾವಣೆ ಸಮಯದಲ್ಲಿ ಸರ್ಕಾರಿ ಶಾಲೆಗಳಿಗೆ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತವೆ, ಅವುಗಳಲ್ಲಿ ಹೆಚ್ಚಿನವು ಮತದಾನ ಕೇಂದ್ರಗಳಾಗಿವೆ.

ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ “ಈ ವಿಷಯಾಧಾರಿತ ಅಲಂಕಾರಗಳ ಉದ್ದೇಶವು ಪ್ರಜಾಪ್ರಭುತ್ವದ ಹಬ್ಬದ ಸಮಯದಲ್ಲಿ ಹೆಚ್ಚಿನ ಮತದಾರರನ್ನು ಮತದಾನ ಕೇಂದ್ರಗಳಿಗೆ ಆಕರ್ಷಿಸುವುದಾಗಿದೆ. ತಳಮಟ್ಟದಲ್ಲಿ ಕೆಲಸ ಮಾಡುತ್ತಿರುವ ನಮ್ಮ ಪಿಡಿಒಗಳೂ ಮತದಾರರಿಗೆ ಶಿಕ್ಷಣ ನೀಡುತ್ತಿದ್ದಾರೆ.''ವಾರ್ಲಿ ಕಲಾ ಪ್ರಕಾರವು ಆಕರ್ಷಕ ಮತ್ತು ಗ್ರಾಮೀಣ ಜೀವನಶೈಲಿಗೆ ಹತ್ತಿರವಾಗಿರುವುದರಿಂದ ಅದನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಿದರು. 

ಪ್ರತಿ ಕ್ಷೇತ್ರದ ಮಾದರಿ ಮತಗಟ್ಟೆಗಳನ್ನು ಸ್ಥಳೀಯ ವಿಷಯದೊಂದಿಗೆ ಅಲಂಕರಿಸಲಾಗುವುದು ಎಂದರು. ಚಿತ್ರದುರ್ಗದಲ್ಲಿ ಐತಿಹಾಸಿಕ ಕೋಟೆ, ಹಿರಿಯೂರು ವಾಣಿವಿಲಾಸ ಸಾಗರ ಅಣೆಕಟ್ಟು, ಚಳ್ಳಕೆರೆ ಕಡಲೆ ಉತ್ಪನ್ನಗಳು, ಮೊಳಕಾಲ್ಮೂರು ಪ್ರಸಿದ್ಧ ರೇಷ್ಮೆ ಸೀರೆಗಳು, ಹೊಸದುರ್ಗ ತೆಂಗಿನಕಾಯಿ ಆಧಾರಿತ ವಿಷಯ ಮತ್ತು ಹೊಳಲ್ಕೆರೆ ತೋಟಗಾರಿಕೆ ವಿಷಯವಾಗಿದೆ.

ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ನಗರಂಗೆರೆ ಗ್ರಾಮ ಪಂಚಾಯಿತಿಯಲ್ಲಿ ಈಗಾಗಲೇ ಒಂಬತ್ತು ಮತಗಟ್ಟೆಗಳನ್ನು ವಾರ್ಲಿ ಕಲೆಯಿಂದ ಅಲಂಕರಿಸಲಾಗಿದೆ. ಎಲ್ಲಾ ಮತಗಟ್ಟೆಗಳಲ್ಲಿ ವಿದ್ಯುತ್, ಕುಡಿಯುವ ನೀರು, ವಿಕಲಚೇತನರಿಗೆ ಸೌಲಭ್ಯ ಕಲ್ಪಿಸಲಾಗುವುದು ಎಂದು ದಿವಾಕರ್ ತಿಳಿಸಿದರು. ಚುನಾವಣೆಯ ದಿನದಂದು ಗ್ರಾಮ ಪಂಚಾಯಿತಿಗಳು ವಿಕಲಚೇತನರು ಮತ್ತು ವೃದ್ಧರಿಗೆ ಗಾಲಿಕುರ್ಚಿಗಳನ್ನು ಒದಗಿಸುತ್ತವೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com