ಕೊಡಗು: ಅರಣ್ಯದಲ್ಲಿನ ಬೆಂಕಿ ಅವಘಡಗಳಿಗೆ ಭೂ ಸಮಸ್ಯೆಯೇ ಕಾರಣ!

ಆಕಸ್ಮಿಕ ಬೆಂಕಿಯಂತಹ ಅವಘಡಗಳಿಂದ ರಕ್ಷಣೆಗಾಗಿ ಕೊಡಗಿನ ಅರಣ್ಯದಲ್ಲಿ 200 ಕಿ.ಮೀ.ಗೂ ಹೆಚ್ಚು ದೂರ ಬೆಂಕಿ ರೇಖೆಗಳನ್ನು ಎಳೆಯಲಾಗಿದೆ. ಅರಣ್ಯದಂಚಿನಲ್ಲಿ  ಆಕಸ್ಮಿಕ  ಬೆಂಕಿ ಘಟನೆಗಳು ನಿಯಮಿತವಾಗಿ ವರದಿಯಾಗುತ್ತಿದ್ದು, ಭೂ ಸಮಸ್ಯೆಗಳು ಅವುಗಳಿಗೆ ಕಾರಣವೆಂದು ಪರಿಗಣಿಸಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮಡಿಕೇರಿ: ಆಕಸ್ಮಿಕ ಬೆಂಕಿಯಂತಹ ಅವಘಡಗಳಿಂದ ರಕ್ಷಣೆಗಾಗಿ ಕೊಡಗಿನ ಅರಣ್ಯದಲ್ಲಿ 200 ಕಿ.ಮೀ.ಗೂ ಹೆಚ್ಚು ದೂರ ಬೆಂಕಿ ರೇಖೆಗಳನ್ನು ಎಳೆಯಲಾಗಿದೆ. ಅರಣ್ಯದಂಚಿನಲ್ಲಿ  ಆಕಸ್ಮಿಕ  ಬೆಂಕಿ ಘಟನೆಗಳು ನಿಯಮಿತವಾಗಿ ವರದಿಯಾಗುತ್ತಿದ್ದು, ಭೂ ಸಮಸ್ಯೆಗಳು ಅವುಗಳಿಗೆ ಕಾರಣವೆಂದು ಪರಿಗಣಿಸಲಾಗಿದೆ.

ಜಿಲ್ಲೆಯಾದ್ಯಂತ ಕಳೆದ ಒಂದು ವಾರದಲ್ಲಿ ಆಕಸ್ಮಿಕ ಬೆಂಕಿಗೆ 100 ಎಕರೆಗೂ ಹೆಚ್ಚು ಪ್ರದೇಶದಲ್ಲಿನ ಹುಲ್ಲುಗಾವಲು ನಾಶವಾಗಿದೆ. (ಅರಣ್ಯ ಪ್ರದೇಶವೆಂದು ಗುರುತಿಸಿಕೊಳ್ಳುವ ಡೀಮ್ಡ್ ) ಸಿ ಆ್ಯಂಡ್ ಡಿ ಭೂಮಿಯನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸುವಲ್ಲಿ ಆಡಳಿತದ ವೈಫಲ್ಯ ಕೂಡಾ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಬೆಂಕಿ ಅವಘಡಗಳಿಗೆ ಒಂದು ಕಾರಣ ಎಂದು ವಿಶ್ಲೇಷಿಸಬಹುದು.

ಈ ಹಿಂದೆ ಹಾನಿಗೊಳಗಾದ ಜಮೀನುಗಳು ಅರಣ್ಯ ಪ್ರದೇಶದಂತೆಯೇ ಇವೆ, ಆದರೆ ಅವು ಅರಣ್ಯ ಇಲಾಖೆಯ ಸ್ವಾಧೀನದಲ್ಲಿಲ್ಲದ ಸಿ & ಡಿ ಜಮೀನುಗಳಾಗಿದ್ದರೂ ಗೊತ್ತುಪಡಿಸಿದ ಅರಣ್ಯ ಪ್ರದೇಶಗಳಾಗಿಲ್ಲ. ಈ ಪ್ರದೇಶಗಳಲ್ಲಿ ಯಾವುದೇ ಬೆಂಕಿಯ ರೇಖೆಗಳನ್ನು ಎಳೆಯದೇ ಇರುವುದರಿಂದ, ಬೇಸಿಗೆಯಲ್ಲಿ ಅವು ಬೆಂಕಿಗೆ ಗುರಿಯಾಗುತ್ತವೆ, ಹಲವಾರು ಜಾತಿಯ ವನ್ಯಜೀವಿಗಳು ತೊಂದರೆಯನ್ನು ಎದುರಿಸುತ್ತಿವೆ. ಇದಲ್ಲದೆ, ನ್ಯಾಯಾಲಯದ ಆದೇಶದಂತೆ, ಜಿಲ್ಲಾಡಳಿತವ 11,000 ಹೆಕ್ಟೇರ್‌ಗಿಂತ ಹೆಚ್ಚಿನ ಸಿ & ಡಿ ಭೂಮಿಯನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಬೇಕಾಗಿದೆ.

ಹಾರಂಗಿ ಜಲಾಶಯ ನಿರ್ಮಾಣದ ವೇಳೆ ನಿವಾಸಿಗಳ ಪುನರ್ವಸತಿಗೆ ಬಳಕೆಯಾದ ಅರಣ್ಯ ಭೂಮಿಗೆ ಪರಿಹಾರ ನೀಡಲು ಇಷ್ಟು ಪ್ರಮಾಣದ ಭೂಮಿಯನ್ನು ಅರಣ್ಯ ಇಲಾಖೆಗೆ ವರ್ಗಾಯಿಸಬೇಕು. ಆದಾಗ್ಯೂ, ಉಳಿದ ಭೂಮಿಯನ್ನು ಹಸ್ತಾಂತರಿಸುವಂತೆ ಆಡಳಿತಕ್ಕೆ ನಿರಂತರ ಮನವಿಗಳನ್ನು ಸಲ್ಲಿಸಿದ್ದರೂ ಸಹ 4,500 ಎಕರೆ ಸಿ & ಡಿ ಭೂಮಿಯನ್ನು ಮಾತ್ರ ಇಲಾಖೆಗೆ ಹಸ್ತಾಂತರಿಸಲಾಗಿದೆ ಎಂದು ಮೂಲಗಳು ಖಚಿತಪಡಿಸಿವೆ. ನಿರ್ವಹಣೆಯಿಲ್ಲದ ಸರ್ಕಾರಿ ಜಮೀನುಗಳಲ್ಲಿ ಹೆಚ್ಚಿದ ಬೆಂಕಿ ಅವಘಡಗಳಿಗೆ ಇದು ಕೂಡಾ ಕಾರಣವಾಗಿದೆ  ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈ ಭೂಮಿಗಳು ಅರಣ್ಯ ಇಲಾಖೆ  ಸ್ವಾಧೀನದಲ್ಲಿಲ್ಲ ಕಾರಣ  ಗೊತ್ತುಪಡಿಸದ ಅರಣ್ಯ ಪ್ರದೇಶಗಳಲ್ಲಿ ಕಾಡ್ಗಿಚ್ಚು ನಿಯಂತ್ರಿಸಲು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ, ಅಲ್ಲದೇ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಅತಿಕ್ರಮಣ ಜಮೀನುಗಳಲ್ಲಿ ಬೆಂಕಿಯ ರೇಖೆಗಳನ್ನು ಎಳೆಯಲು ಅನುಮತಿಸದ ಕಾರಣ ಹಲವಾರು ನಿವಾಸಿಗಳ ಕೂಗು ಹೆಚ್ಚಾಗಿದೆ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿಎನ್ ಮೂರ್ತಿ ಹೇಳಿದರು. 

ಕೆಲವು ಅಗ್ನಿ ಅವಘಡಗಳು ಆಕಸ್ಮಿಕವಾಗಿದ್ದರೆ, ಇನ್ನು ಹಲವು ಕಿಡಿಗೇಡಿಗಳ ಕೆಲಸವಾಗಿರುತ್ತದೆ.  ಹುಲ್ಲುಗಾವಲು ಬೆಳಗಿಸುವ ಕಾರ್ಯದಲ್ಲಿ ನಿವಾಸಿಗಳು ತೊಡಗಿಸಿಕೊಂಡಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ. "ಇದುವರೆಗೆ ವರದಿಯಾದ ಬೆಂಕಿ ಘಟನೆಗಳ ಪೈಕಿ ದುಬಾರೆ ಅರಣ್ಯ ಪ್ರದೇಶ ಮಾತ್ರ ಮೀಸಲು ಅರಣ್ಯ ವರ್ಗಕ್ಕೆ ಸೇರಿದೆ. ಸರ್ಕಾರಿ ಜಮೀನುಗಳಲ್ಲಿ ಬೆಂಕಿ ಹಚ್ಚುವ ಕೆಲ ಕಿಡಿಗೇಡಿಗಳನ್ನು ಗುರುತಿಸಿದ್ದು, ಪ್ರಕರಣಗಳನ್ನು ದಾಖಲಿಸಲಾಗಿದೆ, ಆದರೆ ಇನ್ನೂ ಬಂಧಿಸಲಾಗಿಲ್ಲ ಎಂದು ಅವರು ತಿಳಿಸಿದರು. 

ಅರಣ್ಯ ಇಲಾಖೆಗೆ ಸಿ & ಡಿ ಭೂಮಿಯನ್ನು ಹಸ್ತಾಂತರಿಸದಿದ್ದರೆ,  ಬೇಸಿಗೆ ವೇಳೆಯಲ್ಲಿ ಬೆಂಕಿ ಆಕಸ್ಮಿಕ ಘಟನೆಗಳು ವರದಿಯಾಗುತ್ತವೆ . ಅವು ಪರಿಸರ ವ್ಯವಸ್ಥೆಗೆ ಅಪಾಯವನ್ನುಂಟುಮಾಡುತ್ತವೆಯಾದರೂ, ಸಸ್ಯವರ್ಗದ ಹಾನಿ ಮುಂದಿನ ದಿನಗಳಲ್ಲಿ ಭೂಕುಸಿತಕ್ಕೆ ಕಾರಣವಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com