ಹಾಸನ: ಕಸ ಸಂಗ್ರಹಣೆ ಆಟೋ ಚಾಲಕರಾದ ನಗರಸಭೆ ಅಧ್ಯಕ್ಷ!

ಹಾಸನ ನಗರದ ಮೊದಲ ಪ್ರಜೆ (ನಗರಸಭೆ ಅಧ್ಯಕ್ಷರು) ಕಸ ಸಂಗ್ರಹಣೆ ಆಟೋ ಆಟೋ ಚಾಲಕನ ಕೆಲಸವನ್ನು ನಿಭಾಯಿಸಿದ್ದಾರೆ.
ಕಸ ಸಂಗ್ರಹಣೆಯ ಆಟೋ ಚಾಲನೆ ಮಾಡುತ್ತಿರುವ ಹಾಸನ ನಗರಸಭೆ ಅಧ್ಯಕ್ಷ
ಕಸ ಸಂಗ್ರಹಣೆಯ ಆಟೋ ಚಾಲನೆ ಮಾಡುತ್ತಿರುವ ಹಾಸನ ನಗರಸಭೆ ಅಧ್ಯಕ್ಷ

ಹಾಸನ: ಹಾಸನ ನಗರದ ಮೊದಲ ಪ್ರಜೆ (ನಗರಸಭೆ ಅಧ್ಯಕ್ಷರು) ಕಸ ಸಂಗ್ರಹಣೆ ಆಟೋ ಆಟೋ ಚಾಲಕನ ಕೆಲಸವನ್ನು ನಿಭಾಯಿಸಿದ್ದಾರೆ.
 
ಚಾಲಕರು, ಕಸ ಸಂಗ್ರಹಿಸುವವರು ಮುಷ್ಕರ ನಡೆಸುತ್ತಿರುವ ಹಿನ್ನೆಲೆಯಲ್ಲಿ  ನಗರದ ಇತಿಹಾಸದಲ್ಲೇ ಮೊದಲ ಬಾರಿಗೆ ಹಾಸನ ನಗರಸಭೆಯ ಅಧ್ಯಕ್ಷರು ಕಸ ಸಂಗ್ರಹಣೆ ಆಟೋವನ್ನು ಸ್ವತಃ ಸಾರ್ವಜನಿಕರ ಮನೆ ಬಾಗಿಲಿಗೆ ಕೊಂಡೊಯ್ದು ಮನೆ ಮನೆಯಿಂದ ಕಸ ಸಂಗ್ರಹಿಸಿದ್ದಾರೆ. 

ಬೇರೆ ಸರ್ಕಾರಿ ಉದ್ಯೋಗಿಗಳಿಗೆ ನೀಡುವ ಸವಲತ್ತುಗಳನ್ನು ನೀಡಬೇಕು ಹಾಗೂ ಉದ್ಯೋಗ ಭದ್ರತೆಯನ್ನು ನೀಡಬೇಕೆಂದು ಆಗ್ರಹಿಸಿ ಸಿಬ್ಬಂದಿಗಳು ಮುಷ್ಕರ ನಡೆಸುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಸಮಸ್ಯೆ ಉಂಟಾಗಿತ್ತು.

ಕಸ ಸಂಗ್ರಹಣೆಯ 36 ವಾಹನಗಳು ಕಳೆದ ಮಂಗಳವಾರದಿಂದ ಕಾರ್ಯಾಚರಣೆ ಮಾಡುತ್ತಿರಲಿಲ್ಲ. ಸಿಎಂಸಿ ಅಧ್ಯಕ್ಷ ಮೋಹನ್ ಹಾಗೂ ವಾರ್ಡ್ ನಂ.1 ರ ಕೌನ್ಸಿಲರ್ ರಕ್ಷಿತ್ ಕಸ ಸಂಗ್ರಹಿಸಲು ಆಟೋ ಟಿಪ್ಪರ್ ಗಳ ಚಾಲಕರಾಗಿ ಮನೆ ಮನೆಗೆ ತೆರಳಿ ಕಸ ಸಂಗ್ರಹಿಸಿದ್ದು, ಇದಕ್ಕೆ ಪುರಸಭೆಯ ಆರೋಗ್ಯ ನಿರೀಕ್ಷಕರಾದ ಮನುನಾಥ್ ಮತ್ತು ಪ್ರಸಾದ್ ಕೈ ಜೋಡಿಸಿ ಸ್ವಚ್ಛತೆಯ ಕಾರ್ಯಾಚರಣೆಗೆ ಅರ್ತ್ ಮೂವಿಂಗ್ ಮಷಿನ್ ಹಾಗೂ ಟ್ರಾಕ್ಟರ್ ಗಳನ್ನು ತೆಗೆದುಕೊಂಡು ನೆರವಾಗಿದ್ದಾರೆ. 

ಆರೋಗ್ಯ ನಿರೀಕ್ಷಕರು ಹಾಗೂ ಸಿಎಂಸಿ ಅಧ್ಯಕ್ಷರು, ಕೌನ್ಸಿಲರ್ ನ ನಡೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. 

ತಾವು ಚುನಾಯಿತರಾಗಿರುವ ವಾರ್ಡ್ 34 ರಲ್ಲಿ ಮೋಹನ್ ಅವರು ಮಂಕಿ ಕ್ಯಾಪ್ ಧರಿಸಿ ಕಸ ಸಂಗ್ರಹಣೆ ವಾಹನವನ್ನು ಚಾಲನೆ ಮಾಡಿದ್ದರು. ಈ ಬಗ್ಗೆ ದಿ ನ್ಯೂಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿರುವ ಮೋಹನ್, ತಮ್ಮೊಂದಿಗೆ ಸಾರ್ವಜನಿಕರು ಮಾತನಾಡುವುದನ್ನು ತಪ್ಪಿಸುವುದಕ್ಕಾಗಿ ಮಂಕಿ ಕ್ಯಾಪ್ ಧರಿಸಿದ್ದೆ ಎಂದು ಹೇಳಿದ್ದಾರೆ. ಒಂದು ವೇಳೆ ಸಾರ್ವಜನಿಕರು ತಮ್ಮನ್ನು ಗುರುತಿಸಿ ಮಾತನಾಡಲು ಆರಂಭಿಸಿದರೆ, ಇಡೀ ವಾರ್ಡ್ ನಲ್ಲಿ ಕಸ ಸಂಗ್ರಹಣೆ ಸಂಪೂರ್ಣವಾಗುವುದಿಲ್ಲ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ ಮುಷ್ಕರ ಕೈಬಿಡುವಂತೆ ಸಿಬ್ಬಂದಿಗಳಿಗೆ ಮಾಡಿದ್ದ ಮನವಿ, ಮನವೊಲಿಕೆ ಫಲಿಸಲಿಲ್ಲ ಎಂದು ಮೋಹನ್ ಹೇಳಿದ್ದಾರೆ.

ಸೇವೆಗಳನ್ನು ಪುನಾರಂಭಗೊಳಿಸುವ ನಿಟ್ಟಿನಲ್ಲಿ, ಸಿಎಂಸಿ ಡ್ರೈವರ್ ಗಳನ್ನು ದಿನಗೂಲಿ ಆಧಾರದಲ್ಲಿ ನೇಮಕ ಮಾಡಿಕೊಳ್ಳುವುದಕ್ಕೆ ಚಿಂತನೆ ನಡೆಸಿದೆ. ಮುಷ್ಕರ ಹಿಂಪಡೆಯುವವರೆಗೂ ತಾವು 34 ನೇ ವಾರ್ಡ್ ನಲ್ಲಿ ಕಸ ಸಂಗ್ರಹಿಸುವುದನ್ನು ಮುಂದುವರೆಸುವುದಾಗಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com