ಬೆಳಗಾವಿ: ಲಿಕ್ಕರ್ ಬಾಕ್ಸ್ ನಾಪತ್ತೆ, ಐವರು ಅಬಕಾರಿ ಸಿಬ್ಬಂದಿ ಅಮಾನತು!
ಇದೇ ತಿಂಗಳ ಆರಂಭದಲ್ಲಿ ಕಾರ್ಯಾಚರಣೆ ವೇಳೆಯಲ್ಲಿ ವಶಕ್ಕೆ ಪಡೆಯಲಾದ ಮದ್ಯದ ಬಾಟಲಿಗಳನ್ನು ನಿಗೂಢವಾಗಿ ಸಾಗಿಸಿರುವುದು ಇಲಾಖಾ ತನಿಖೆ ವೇಳೆ ತಿಳಿದುಬಂದ ನಂತರ ಮೂವರು ಶ್ರೇಣಿ ಅಧಿಕಾರಿಗಳು ಸೇರಿದಂತೆ ಐವರು ಅಬಕಾರಿ ಸಿಬ್ಬಂದಿಯನ್ನು ಶನಿವಾರ ಅಮಾನುತು ಮಾಡಲಾಗಿದೆ.
Published: 20th March 2023 09:23 AM | Last Updated: 20th March 2023 09:23 AM | A+A A-

ಸಾಂದರ್ಭಿಕ ಚಿತ್ರ
ಬೆಳಗಾವಿ: ಇದೇ ತಿಂಗಳ ಆರಂಭದಲ್ಲಿ ಕಾರ್ಯಾಚರಣೆ ವೇಳೆಯಲ್ಲಿ ವಶಕ್ಕೆ ಪಡೆಯಲಾದ ಮದ್ಯದ ಬಾಟಲಿಗಳನ್ನು ನಿಗೂಢವಾಗಿ ಸಾಗಿಸಿರುವುದು ಇಲಾಖಾ ತನಿಖೆ ವೇಳೆ ತಿಳಿದುಬಂದ ನಂತರ ಮೂವರು ಶ್ರೇಣಿ ಅಧಿಕಾರಿಗಳು ಸೇರಿದಂತೆ ಐವರು ಅಬಕಾರಿ ಸಿಬ್ಬಂದಿಯನ್ನು ಶನಿವಾರ ಅಮಾನುತು ಮಾಡಲಾಗಿದೆ.
ರಾಜ್ಯ ವಿಧಾನಸಭಾ ಚುನಾವಣೆ ಸನ್ನಿಹದಲ್ಲಿರುವಂತೆಯೇ ಅಕ್ರಮ ಹಣ ಹಾಗೂ ಮಧ್ಯ ಸಾಗಾಟವನ್ನು ತಡೆಯಲು ಗೋವಾ ಮತ್ತು ಮಹಾರಾಷ್ಟ್ರ ಗಡಿಯಲ್ಲಿ ಅಬಕಾರಿ ಮತ್ತು ಪೊಲೀಸ್ ಇಲಾಖೆ ನಿಗಾ ವಹಿಸಿದೆ. ಮಾರ್ಚ್ 7 ರ ಸಂಜೆ ಖಾನಪುರ ತಾಲೂಕಿನ ಮೊಡೆಕೊಪ್ಪ ಬಳಿ ಸುಮಾರು 47 ಲಕ್ಷ ರೂ. ಮೊತ್ತದ 753 ವಿದೇಶಿ ಮದ್ಯದ ಪೆಟ್ಟಿಗೆ ಸಾಗಿಸುತ್ತಿದ್ದ ವಾಹನವೊಂದನ್ನು ಅಬಕಾರಿ ಇಲಾಖೆ ವಿಚಕ್ಷಣಾ ದಳ ವಶಕ್ಕೆ ಪಡೆದಿತ್ತು.
ಆದರೆ, ಮಾರನೆ ದಿನ 301 ಲಿಕ್ಕರ್ ಬಾಕ್ಸ್ ನಾಪತ್ತೆಯಾಗಿತ್ತು. ಈ ಸಂಬಂಧ ತನಿಖೆಗೆ ಹಿರಿಯ ಅಧಿಕಾರಿಗಳು ಆದೇಶಿಸಿದ್ದರು. ಮದ್ಯ ಕಳವು ಪ್ರಕರಣದಲ್ಲಿ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಶಾಮೀಲಾಗಿರುವುದು ತನಿಖೆ ವೇಳೆ ತಿಳಿದುಬಂದಿತ್ತು.
ಅಬಕಾರಿ ಇನ್ಸ್ ಪೆಕ್ಟರ್ ದವಾಲ್ ಸಾಬಾ ಸಿಂದೊಗಿ ಮತ್ತು ಸದಾಶಿವ ಕೊರ್ತಿ, ಅಬಕಾರಿ ಡೆಫ್ಯೂಟಿ ಇನ್ಸ್ ಪೆಕ್ಟರ್ ಪುಷ್ಪಾ ಗಡಾದಿ ಅವರ ಅಮಾನತಿಗೆ ಆದೇಶಿಸಲಾಗಿದ್ದು, ಅವರ ವಿರುದ್ಧ ಎಫ್ಐಆರ್ ಕೂಡಾ ದಾಖಲಿಸಲಾಗಿದೆ.