ಹಲವು ವರ್ಷಗಳ ಕಾಯುವಿಕೆ ನಂತರ ವೈಟ್ ಫೀಲ್ಡ್ ಮೆಟ್ರೊ ನಿಲ್ದಾಣಕ್ಕೆ ಉದ್ಘಾಟನೆ ಭಾಗ್ಯ, ಸುತ್ತಮುತ್ತಲ ನಿವಾಸಿಗಳಿಗೆ ಅನುಕೂಲ

ಬೈಯಪ್ಪನಹಳ್ಳಿ ಮತ್ತು ಕೆಆರ್ ಪುರಂ ನಡುವಿನ ಮಹತ್ವದ ಮೆಟ್ರೋ ಸಂಪರ್ಕ ಕೊಂಡಿ ರಸ್ತೆ ಪೂರ್ಣಗೊಳ್ಳದಿದ್ದರೂ, ಸಾವಿರಾರು ಬೆಂಗಳೂರಿಗರು ವಿಶೇಷವಾಗಿ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುವವರು ನಾಳೆ ಪ್ರಧಾನಿ ಮೋದಿಯವರ ವೈಟ್‌ಫೀಲ್ಡ್ ಮತ್ತು ಕೆಆರ್ ಪುರಂ ನಡುವಿನ 13.7 ಕಿಮೀ ಮಾರ್ಗದ ಉದ್ಘಾಟನೆಗೆ ಕಾತುರದಿಂದ ಕಾಯುತ್ತಿದ್ದಾರೆ. 
ಪ್ರಧಾನಿಯವರಿಂದ ಉದ್ಘಾಟನೆಗೆ ಕಾಯುತ್ತಿರುವ ಕೆ ಆರ್ ಪುರಂ ನಿಲ್ದಾಣ
ಪ್ರಧಾನಿಯವರಿಂದ ಉದ್ಘಾಟನೆಗೆ ಕಾಯುತ್ತಿರುವ ಕೆ ಆರ್ ಪುರಂ ನಿಲ್ದಾಣ
Updated on

ಬೆಂಗಳೂರು: ಬೈಯಪ್ಪನಹಳ್ಳಿ ಮತ್ತು ಕೆಆರ್ ಪುರಂ ನಡುವಿನ ಮಹತ್ವದ ಮೆಟ್ರೋ ಸಂಪರ್ಕ ಕೊಂಡಿ ರಸ್ತೆ ಪೂರ್ಣಗೊಳ್ಳದಿದ್ದರೂ, ಸಾವಿರಾರು ಬೆಂಗಳೂರಿಗರು ವಿಶೇಷವಾಗಿ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುವವರು ನಾಳೆ ಪ್ರಧಾನಿ ಮೋದಿಯವರ ವೈಟ್‌ಫೀಲ್ಡ್ ಮತ್ತು ಕೆಆರ್ ಪುರಂ ನಡುವಿನ 13.7 ಕಿಮೀ ಮಾರ್ಗದ ಉದ್ಘಾಟನೆಗೆ ಕಾತುರದಿಂದ ಕಾಯುತ್ತಿದ್ದಾರೆ. 

ನಾಡಿದ್ದು ಭಾನುವಾರ ಈ ಮೆಟ್ರೊ ಮಾರ್ಗವನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಲಾಗುತ್ತದೆ. ನಿಲ್ದಾಣದ ಪ್ರಾರಂಭಕ್ಕಾಗಿ ಕಾಯುತ್ತಿರುವವರಲ್ಲಿ ಎಂಎನ್‌ಸಿಯಲ್ಲಿ ಉದ್ಯೋಗಿಯಾಗಿರುವ ದೃಶ್ಯ ಎಂ, 'ನಾನು ಈ ಮೆಟ್ರೊ ಆರಂಭಕ್ಕಾಗಿ ಕಾತರದಿಂದ ಕಾಯುತ್ತಿದ್ದೇನೆ ಎಂದು ಹೇಳಿದ್ದಾರೆ. ಅವರ ನಿವಾಸವು ಕೆ ಆರ್ ಪುರಂನಲ್ಲಿದ್ದು ಕಚೇರಿ ವೈಟ್‌ಫೀಲ್ಡ್‌ನಲ್ಲಿದೆ. ಪ್ರಸ್ತುತ, ಎಲ್ಲಾ ಉದ್ಯೋಗಿಗಳನ್ನು ಕರೆದುಕೊಂಡು ಹೋಗಲು ಕೆ ಆರ್ ಪುರಂ ರೈಲು ನಿಲ್ದಾಣದ ಬಳಿ ಕಚೇರಿ ಕ್ಯಾಬ್ ಸಾಮಾನ್ಯ ಕೇಂದ್ರವಾಗಿದೆ. ಇದಕ್ಕಾಗಿ ಪ್ರತಿ ವ್ಯಕ್ತಿಗೆ ನಾಮಮಾತ್ರದ ಮಾಸಿಕ ಮೊತ್ತ 1,000 ರೂಪಾಯಿಯಾಗಿದೆ ಎಂದು ಹೇಳಿದರು. 

ಕಚೇರಿಯನ್ನು ತಲುಪಲು ನಾನು ದಿನಕ್ಕೆ 280 ರೂಪಾಯಿಗಳಿಂದ300 ರೂಪಾಯಿಗಳವರೆಗೆ ಪಾವತಿಸುತ್ತೇನೆ. ಹೀಗಾಗಿ ನಾನು ಆಫೀಸ್ ಕ್ಯಾಬ್‌ನಲ್ಲಿ ಬರುತ್ತಿದ್ದೆ. ನನ್ನ ಮನೆ ಕೆಆರ್ ಪುರಂ ನಿಲ್ದಾಣದಿಂದ ಕೇವಲ 5 ನಿಮಿಷಗಳ ನಡಿಗೆ ದೂರ. ಇನ್ನು ಮೆಟ್ರೊ ಆರಂಭವಾದರೆ ಕಚೇರಿಗೆ ಹೋಗಿ ಬರಲು ನನಗೆ ಅನುಕೂಲವಾಗುತ್ತದೆ ಎಂದು ಅವರು TNIE ಗೆ ತಿಳಿಸಿದರು. 

ಅಂಬ್ರುತಾ ಎಂ ಅವರ ಪತಿ TESCO ನಲ್ಲಿ IT ವೃತ್ತಿಪರರಾಗಿ ಕೆಲಸ ಮಾಡುತ್ತಿದ್ದಾರೆ. ನನ್ನ ಪತಿ ಈ ವೈಟ್‌ಫೀಲ್ಡ್-ಆಧಾರಿತ ಕಚೇರಿಯ ಐಟಿ ತಂಡದಲ್ಲಿ ಕೆಲಸ ಮಾಡುತ್ತಾರೆ. ಕಚೇರಿಗೆ ಹೋಗಿ ಬರುವುದು ಅವರಿಗೆ ಸಮಸ್ಯೆಯಾಗಿದೆ. ಕ್ಯಾಬ್‌ಗಳು ನಿರಂತರವಾಗಿ ಬುಕ್ಕಿಂಗ್‌ಗಳನ್ನು ರದ್ದುಗೊಳಿಸುವುದರಿಂದ, ಮೆಟ್ರೋ ಬಹಳ ಅನುಕೂಲವಾಗಿದೆ" ಎಂದು ಹೇಳಿದರು. 

ವೈಟ್‌ಫೀಲ್ಡ್‌ನಲ್ಲಿರುವ ಮಾಲ್‌ಗಳಿಗೆ ಹೋಗುವುದರೆಂದರೆ ನನಗೆ ಎಲ್ಲಿಲ್ಲದ ಪ್ರೀತಿ. ಇನ್ನು ಮುಂದೆ ಶಾಪಿಂಗ್ ಮಾಡಲು ಹೋಗಲು ನನಗೆ ಮೆಟ್ರೊ ಸಹಾಯವಾಗಬಹುದು ಎಂದರು. ಕೆಲವು ಐಟಿ ವೃತ್ತಿಪರರು ಅವರು ಕೋವಿಡ್ ಪೂರ್ವದ ದಿನಗಳಿಗಿಂತ ಭಿನ್ನವಾಗಿ ಅರ್ಧ ವಾರ ಮನೆಯಿಂದ ಕೆಲಸ ಮಾಡುತ್ತಾರೆ ಅಂಥವರಿಗೆ ಪ್ರಯಾಣಕ್ಕೆ ಇದು ಅನುಕೂಲವಾಗಿದೆ. 

ನಗರ ಸಾರಿಗೆ ತಜ್ಞ ಸಂಜೀವ್ ದ್ಯಾಮಣ್ಣನವರ್, ''ಹೂಡಿ ನಿಲ್ದಾಣವು ಉಪನಗರ ರೈಲುಗಳಿಂದ ಇಳಿಯುವ ಐಟಿ ಮಂದಿಯ ಜನಸಂದಣಿಯಿಂದ ತುಂಬಿ ತುಳುಕುತ್ತಿದೆ. ಇದೀಗ ವೈಟ್‌ಫೀಲ್ಡ್ ಅಥವಾ ಮಹದೇವಪುರ ನಿಲ್ದಾಣಗಳಲ್ಲಿ ಇಳಿಯಲು ನಿರ್ಧರಿಸುವುದರಿಂದ ಅನೇಕರಿಗೆ ಇದು ವರದಾನವಾಗಲಿದೆ. ದೇಶದಾದ್ಯಂತ ಬರುವ ಎಕ್ಸ್‌ಪ್ರೆಸ್ ವೇ ಅಥವಾ ಮೇಲ್ ರೈಲುಗಳಿಂದ ವೈಟ್‌ಫೀಲ್ಡ್ ರೈಲು ನಿಲ್ದಾಣದಲ್ಲಿ ಇಳಿಯುವವರು ಈಗ ಇಲ್ಲಿಂದ ಮೆಟ್ರೋ ನಿಲ್ದಾಣಕ್ಕೆ ಹೋಗಿ ತಮ್ಮ ಮನೆಗಳನ್ನು ಸುಲಭವಾಗಿ ತಲುಪಬಹುದು. 1 ಲಕ್ಷದಿಂದ 1.5 ಲಕ್ಷ ಪ್ರಯಾಣಿಕರು ಹೊಸ ಮಾರ್ಗವನ್ನು ಬಳಸುವ ನಿರೀಕ್ಷೆಯಿದೆ ಎಂದು ಬಿಎಂಆರ್‌ಸಿಎಲ್‌ನ ಕಾರ್ಯಾಚರಣೆ ಮತ್ತು ನಿರ್ವಹಣೆಯ ಕಾರ್ಯನಿರ್ವಾಹಕ ನಿರ್ದೇಶಕ ಎ ಎಸ್ ಶಂಕರ್ ಹೇಳುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com