ಶಿಕ್ಷಣ ಸಂಸ್ಥೆಗಳ ವ್ಯವಹಾರ ನಿರ್ವಹಣೆಗೆ ನಿವೃತ್ತ ಕೆಎಎಸ್ ಅಧಿಕಾರಿ ನೇಮಿಸಲು ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಬಯಸಿದ್ದರು!

ಶ್ರವಣಬೆಳಗೊಳದ ದಿಗಂಬರ ಜೈನಮಠದ ಪ್ರಮುಖ ಜೈನ ಮಠಾಧೀಶ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರ ಹಠಾತ್ ನಿಧನದಿಂದ ಸಮಾಜದ ವಿವಿಧ ವರ್ಗಗಳ ಜನರು ದುಃಖತಪ್ತರಾಗದ್ದಾರೆ.
ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ
ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ

ಶ್ರವಣಬೆಳಗೊಳ: ಶ್ರವಣಬೆಳಗೊಳದ ದಿಗಂಬರ ಜೈನಮಠದ ಪ್ರಮುಖ ಜೈನ ಮಠಾಧೀಶ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರ ಹಠಾತ್ ನಿಧನದಿಂದ ಸಮಾಜದ ವಿವಿಧ ವರ್ಗಗಳ ಜನರು ದುಃಖತಪ್ತರಾಗದ್ದಾರೆ.

ಸ್ವಾಮೀಜಿ ಸಕ್ರಿಯರಾಗಿದ್ದರು ಅವರಿಗೆ, ಯಾವುದೇ ಕಾಯಿಲೆಯ ಲಕ್ಷಣಗಳಿಲ್ಲ ಎಂದು ಮೂರು ದಶಕಗಳ ಕಾಲ ಸ್ವಾಮೀಜಿಯವರ ಆಪ್ತ ಸಹಾಯಕರಾಗಿ ಸೇವೆ ಸಲ್ಲಿಸಿದ ಪರಾಸ್  ಹೇಳಿದ್ದಾರೆ. ಮಠದ ಆಡಳಿತಕ್ಕೆ ಸಂಬಂಧಿಸಿದ ಹಲವು ವಿಷಯಗಳ ಕುರಿತು ಬುಧವಾರವೂ ಚರ್ಚೆ ನಡೆಸಿದ್ದರು. ಮಧುಮೇಹ ಹೊರತುಪಡಿಸಿದರೆ ಸ್ವಾಮೀಜಿ ಅವರ ಆರೋಗ್ಯ ಸ್ಥಿತಿ ಚೆನ್ನಾಗಿತ್ತು. ಬುಧವಾರ ರಾತ್ರಿಯವರೆಗೂ ಅವರು ಕ್ರಿಯಾಶೀಲರಾಗಿದ್ದರು ಎಂದು ಅವರು ಹೇಳಿದರು.

ಮಠದ ವತಿಯಿಂದ ನಡೆಯುವ ಶಿಕ್ಷಣ ಸಂಸ್ಥೆಗಳಿಗೆ ಕಾರ್ಯನಿರ್ವಾಹಕ ಅಧಿಕಾರಿಯನ್ನು ನೇಮಿಸಲು ಸ್ವಾಮೀಜಿ ಬಯಸಿದ್ದರು ಮತ್ತು ಇತ್ತೀಚೆಗೆ ಚನ್ನರಾಯಪಟ್ಟಣ ತಾಲೂಕಿನ ತಹಶೀಲ್ದಾರ್ ವರಪ್ರಸಾದ್ ರೆಡ್ಡಿ ಅವರೊಂದಿಗೆ ಚರ್ಚಿಸಿದ್ದರು ಎಂದು ಪರಸ್ ಹೇಳಿದರು.

ಇತ್ತೀಚೆಗೆ ಶ್ರವಣಬೆಳಗೊಳದ ದಿಗಂಬರ ಜೈನಮಠದ ಆಡಳಿತಕ್ಕೆ ನಿವೃತ್ತ ಕೆಎಎಸ್ ಅಧಿಕಾರಿಯೊಬ್ಬರನ್ನು ಆಡಳಿತಾಧಿಕಾರಿಯಾಗಿ ನೇಮಿಸುವಂತೆ ರೆಡ್ಡಿಗೆ ಕೇಳಿಕೊಂಡಿದ್ದರು. ಸ್ವಾಮೀಜಿಯವರ ಪಾರ್ಥಿವ ಶರೀರವನ್ನು ಚಾಮುಂಡರಾಯ ವೇದಿಕೆಯಲ್ಲಿ ಎರಡು ಗಂಟೆಗಳ ಕಾಲ ಸಾರ್ವಜನಿಕ ದರ್ಶನಕ್ಕೆ ಇಡಲಾಗಿದ್ದು, ಜನರು ಅಂತಿಮ ನಮನ ಸಲ್ಲಿಸಿದರು.

ಸ್ವಾಮೀಜಿಯವರು ಪ್ರಾಕೃತ ಭಾಷೆಯ ಏಳು ಆವೃತ್ತಿಗಳನ್ನು ಕನ್ನಡಕ್ಕೆ ಅನುವಾದಿಸಿರುವುದನ್ನು ಇಲ್ಲಿ  ಸ್ಮರಿಸಬಹುದು. ಕಳೆದ ಎರಡು ವರ್ಷಗಳಿಂದ ವಾಹನ ಬಳಸುವುದನ್ನು ನಿಲ್ಲಿಸಿದ್ದರು. ಮಹಾಮಸ್ತಕಾಭಿಷೇಕದ ವೇಳೆ ಮಾಜಿ ಪ್ರಧಾನಿ ಇಂದಿರಾಗಾಂಧಿ, ಮಾಜಿ ರಾಷ್ಟ್ರಪತಿಗಳಾದ ಶಂಕರ್ ನಾರಾಯಣ್ ಮತ್ತು ಶಂಕರ್ ದಯಾಳ್ ಶರ್ಮಾ ಶ್ರವಣಬೆಳಗೊಳಕ್ಕೆ ಭೇಟಿ ನೀಡಿದ್ದರು. ಸಾಹಿತ್ಯ, ಕಲೆ, ಸಂಸ್ಕೃತಿ ಕ್ಷೇತ್ರಕ್ಕೆ ಸ್ವಾಮೀಜಿ ನೀಡಿದ ಕೊಡುಗೆಯನ್ನೂ ಜನ ಸ್ಮರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com