13 ವರ್ಷಗಳ ಬಳಿಕ ಜನಾರ್ಧನ ರೆಡ್ಡಿ ಹೆಲಿಕಾಪ್ಟರ್ ಪ್ರಯಾಣ!

ಕರ್ನಾಟಕ ವಿಧಾನಸಭಾ ಚುನಾವಣೆಗೆ ಹೊಸ ಪಕ್ಷ ಸ್ಥಾಪಿಸಿ ಅಖಾಡಕ್ಕಿಳಿದಿರುವ ಜನಾರ್ಧನ ರೆಡ್ಡಿ ಮಿಂಚಿನ ಪ್ರಚಾರ ನಡೆಸುತ್ತಿದ್ದಾರೆ. ಕಾರ್ಯಕ್ರಮದ ನಿಮಿತ್ತ ಜನಾರ್ಧನ ರೆಡ್ಡಿ ಸಿಂಧನೂರಿಗೆ ಹೆಲಿಕಾಪ್ಟರ್ ಮೂಲಕ ಪ್ರಯಾಣ ಮಾಡಿದ್ದಾರೆ.
ಜನಾರ್ದನ ರೆಡ್ಡಿ
ಜನಾರ್ದನ ರೆಡ್ಡಿ

ಬಳ್ಳಾರಿ: ಕರ್ನಾಟಕ ವಿಧಾನಸಭಾ ಚುನಾವಣೆಗೆ ಹೊಸ ಪಕ್ಷ ಸ್ಥಾಪಿಸಿ ಅಖಾಡಕ್ಕಿಳಿದಿರುವ ಜನಾರ್ಧನ ರೆಡ್ಡಿ ಮಿಂಚಿನ ಪ್ರಚಾರ ನಡೆಸುತ್ತಿದ್ದಾರೆ. ಕಾರ್ಯಕ್ರಮದ ನಿಮಿತ್ತ ಜನಾರ್ಧನ ರೆಡ್ಡಿ ಸಿಂಧನೂರಿಗೆ ಹೆಲಿಕಾಪ್ಟರ್ ಮೂಲಕ ಪ್ರಯಾಣ ಮಾಡಿದ್ದಾರೆ.

ರಾಜಕಾರಣಿಗಳು ಹೆಲಿಕಾಪ್ಟರ್ ಪ್ರಯಾಣ ಹೊಸದೇನಲ್ಲ, ಇದರಲ್ಲಿ ಅಚ್ಚರಿಯೂ ಇಲ್ಲ. ಆದರೆ ಜನಾರ್ಧನ ರೆಡ್ಡಿ ಈ ಬಾರಿಯ ಹೆಲಿಕಾಪ್ಟರ್ ಪ್ರಯಾಣದಲ್ಲಿ ಕೆಲ ವಿಶೇಷತೆಗಳಿವೆ. ಜನಾರ್ಧನ ರೆಡ್ಡಿ ಬರೋಬ್ಬರಿ 13 ವರ್ಷಗಳ ಬಳಿಕ ಹೆಲಿಕಾಪ್ಟರ್ ಪ್ರಯಾಣ ನಡೆಸಿದ್ದಾರೆ. 13 ವರ್ಷಗಳ ಅಂದರೆ 2011ರಲ್ಲೇ ರೆಡ್ಡಿ ಹೆಲಿಕಾಪ್ಟರ್ ಪ್ರಯಾಣ ಕೊನೆಯಾಗಿತ್ತು. ಬಳಿಕ ಜೈಲುವಾಸ ಸೇರಿದಂತೆ ಹಲವು ಅಡೆತಡೆಗಳಿಂದ ರೆಡ್ಡಿ ಹೆಲಿಕಾಪ್ಟರ್‌ನಿಂದ ದೂರ ಉಳಿದಿದ್ದರು.

ನಿನ್ನೆ ಬಹಳ ಸಂತೋಷವಾದ ದಿನ, ಸಿಂಧನೂರಿಗೆ ಕಾರ್ಯಕ್ರಮದ ನಿಮಿತ್ತ ತೆರಳ ಬೇಕಾದ ಕಾರಣ 13 ವರ್ಷಗಳ ನಂತರ ಆಕಸ್ಮಿಕವಾಗಿ ಹೆಲಿಕ್ಯಾಪ್ಟರ್ ಅಲ್ಲಿ ಪ್ರಯಾಣಿಸುವ ಸಂಧರ್ಭ ಒದಗಿತು. ಬೆಂಗಳೂರಿಂದ ಸಿಂಧನೂರಿಗೆ ಹಾರಾಟದ ಮಧ್ಯದಲ್ಲಿ ನನ್ನ ತವರು ಜಿಲ್ಲೆ ಬಳ್ಳಾರಿಯ ಮೇಲೆ ಹಾದು ಹೋಗುವ ದೃಶ್ಯವನ್ನು ಕಂಡು ಒಂದು ಕ್ಷಣ ಭಾವುಕನಾದೆನು. ಬಳ್ಳಾರಿಗೆ ತೆರಳಲು ಆಗದಿದ್ದರೂ ಸಹ ಆಕಸ್ಮಿಕ ಪ್ರಯಾಣದಲ್ಲಿ ನನ್ನ ಬಳ್ಳಾರಿಯನ್ನು ಮೇಲಿನಿಂದ ವೀಕ್ಷಿಸುವ ಭಾಗ್ಯ ನನ್ನದಾಯಿತು ಎಂದು ಜನಾರ್ಧನ ರೆಡ್ಡಿ ಟ್ವಿಟರ್ ಮೂಲಕ ಸಂತಸ ಹಂಚಿಕೊಂಡಿದ್ದಾರೆ.

ನಿನ್ನೆ ಸಿಂಧನೂರಿನ ಕಾರ್ಯಕ್ರಮಕ್ಕೆ ತೆರಳಿ, ಪತ್ನಿ ಲಕ್ಷ್ಮಿ ಅರುಣಾ ರವರ ಜೊತೆಗೂಡಿ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಿಂಧನೂರು ಅಭ್ಯರ್ಥಿ ಮಲ್ಲಿಕಾರ್ಜುನ ನೆಕ್ಕಂಟಿ ಅವರ ನೇತೃತ್ವದಲ್ಲಿ ಅನೇಕ ಯೋಜನೆಗಳ ಘೋಷಣೆಯನ್ನು ಮಾಡಿದ ಕ್ಷಣಗಳು ಎಂದು ಟ್ವಿಟ್ಟರ್ ನಲ್ಲಿ ವಿಡಿಯೋ ಶೇರ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com