ಮತದಾರರೇ ರಾಜಕಾರಣಿಗಳನ್ನು ಭ್ರಷ್ಟರನ್ನಾಗಿಸುತ್ತಿದ್ದಾರೆ: ಹೊರಟ್ಟಿ ಆರೋಪ
ರಾಜಕಾರಣಿಗಳಿಂದ ಉಚಿತ ಕೊಡುಗೆಗಳನ್ನು ಸ್ವೀಕರಿಸುವುದು ಅಥವಾ ಬೇಡಿಕೆ ಇಡುವ ಮೂಲಕ ಜನರೇ ರಾಜಕಾರಣಿಗಳನ್ನು ಭ್ರಷ್ಟಗೊಳಿಸುತ್ತಿದ್ದಾರೆ ಎಂದು ಕರ್ನಾಟಕ ವಿಧಾನಪರಿಷತ್ ನ ಸಭಾಧ್ಯಕ್ಷರಾದ ಬಸವರಾಜ ಹೊರಟ್ಟಿ ಆರೋಪಿಸಿದ್ದಾರೆ.
Published: 31st March 2023 04:42 PM | Last Updated: 31st March 2023 07:58 PM | A+A A-

ಬಸವರಾಜ ಹೊರಟ್ಟಿ
ವಿಜಯಪುರ: ರಾಜಕಾರಣಿಗಳಿಂದ ಉಚಿತ ಕೊಡುಗೆಗಳನ್ನು ಸ್ವೀಕರಿಸುವುದು ಅಥವಾ ಬೇಡಿಕೆ ಇಡುವ ಮೂಲಕ ಜನರೇ ರಾಜಕಾರಣಿಗಳನ್ನು ಭ್ರಷ್ಟಗೊಳಿಸುತ್ತಿದ್ದಾರೆ ಎಂದು ಕರ್ನಾಟಕ ವಿಧಾನಪರಿಷತ್ ನ ಸಭಾಧ್ಯಕ್ಷರಾದ ಬಸವರಾಜ ಹೊರಟ್ಟಿ ಆರೋಪಿಸಿದ್ದಾರೆ.
ವಿಜಯಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಹೊರಟ್ಟಿ, ಕೆಲವು ಮಂದಿ ತಮ್ಮ ಇಡೀ ಜೀವನವೇ ಉಚಿತ ಕೊಡುಗೆಗಳ ಮೇಲೆ ಅವಲಂಬಿತವಾಗಿದೆ ಎಂಬಂತೆ ವರ್ತಿಸುತ್ತಾರೆ.
ಚುನಾವಣೆಗಳನ್ನು ಭ್ರಷ್ಟಮುಕ್ತವಾಗಿ ನಡೆಯಬೇಕೆಂದು ಪ್ರಯತ್ನಿಸಿದರೂ ಜನರು ಎಲ್ಲಿಯವರೆಗೆ ಉಡುಗೊರೆಗಳನ್ನು ಪಡೆಯುವುದು ಸರಿಯಲ್ಲ ಎಂದು ಭಾವಿಸುವುದಿಲ್ಲವೋ ಅಲ್ಲಿಯವರೆಗೂ ಈ ಕೆಟ್ಟ ಸಂಸ್ಕೃತಿ ಮುಂದುವರೆಯುತ್ತದೆ. ನೀವು ರಾಜಕಾರಣಿಗಳಿಂದ ಉಡುಗೊರೆ ಪಡೆದರೆ, ಚುನಾಯಿತ ಪ್ರತಿನಿಧಿಗಳು ಜನರು ಉಚಿತವಾಗಿ ಮತ ನೀಡಿಲ್ಲ, ಉಡುಗೊರೆ ಪಡೆದು ಮತ ಹಾಕಿದ್ದಾರೆರೆಂದು ಹೇಳುತ್ತಾರೆ ಎಂದು ಹೊರಟ್ಟಿ ಅಸಮಾಧಾನ ಹೊರಹಾಕಿದ್ದಾರೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಚುನಾವಣಾ ಅಕ್ರಮ: ರಾಜ್ಯದಲ್ಲಿ ಇದುವರೆಗೆ 93 ಕೋಟಿ ರೂ. ವಶಕ್ಕೆ
ಜನರು ಬಯಸಿದಲ್ಲಿ, ರಾಜಕಾರಣಿಗಳು ನೀಡುವ ಉಡುಗೊರೆ, ಆಮಿಷಗಳನ್ನು ತಿರಸ್ಕರಿಸಿ ಚುನಾವಣೆಯಲ್ಲಿ ಪಾರದರ್ಶಕತೆ ತರಬಹುದು ಎಂದು ಹೇಳಿದ್ದಾರೆ.
ಜನತೆಗಾಗಿ ಕೆಲಸ ಮಾಡುತ್ತಿರುವ ಜನರೊಂದಿಗೆ ಇರುವಂತಹ ರಾಜಕಾರಣಿಗಳಿಗೆ ಮತ ಹಾಕಿ, ಚುನಾವಣೆಯಲ್ಲಿ ಗೆದ್ದ ನಂತರ ಜನರೊಟ್ಟಿಗೆ ಇರುವುದನ್ನು ಬಿಟ್ಟು ಹಣ ಮಾಡುವುದಕ್ಕಾಗಿಯೇ ರಾಜಧಾನಿಯಲ್ಲಿ ಕುಳಿತುಕೊಳ್ಳುವ ರಾಜಕಾರಣಿಗಳಿಗೆ ಮತ ಹಾಕಬೇಡಿ ಎಂದು ಜನತೆಗೆ ಹೊರಟ್ಟಿ ಕರೆ ನೀಡಿದ್ದಾರೆ.