ಮತದಾನ ಮಾಡಿದವರಿಗೆ ಉಚಿತ-ರಿಯಾಯಿತಿ ದರದಲ್ಲಿ ತಿಂಡಿ-ತಿನಿಸು; ಆಫರ್ ವಿರುದ್ಧ ಹೊಟೇಲ್ ಗಳಿಗೆ ಆಯೋಗ ಎಚ್ಚರಿಕೆ

ನಾಳೆ ಮೇ 10ಕ್ಕೆ ವಿಧಾನಸಭೆ ಚುನಾವಣೆಯಲ್ಲಿ ಮತ ಚಲಾಯಿಸಿದವರು ಶಾಯಿಯ ಗುರುತು ತೋರಿಸಿದರೆ ಉಚಿತ ತಿಂಡಿ ತಿನಿಸುಗಳನ್ನು ವಿತರಿಸುವುದಾಗಿ ಅನೇಕ ಹೊಟೇಲ್ ಗಳು ಘೋಷಿಸಿಕೊಂಡಿದ್ದವು
ಹೊಟೇಲ್ ನಿಸರ್ಗ ಗ್ರ್ಯಾಂಡ್ ಕೆಲ ದಿನಗಳ ಹಿಂದೆ ಘೋಷಿಸಿದ್ದ ರಿಯಾಯಿತಿ(ಸಂಗ್ರಹ ಚಿತ್ರ)
ಹೊಟೇಲ್ ನಿಸರ್ಗ ಗ್ರ್ಯಾಂಡ್ ಕೆಲ ದಿನಗಳ ಹಿಂದೆ ಘೋಷಿಸಿದ್ದ ರಿಯಾಯಿತಿ(ಸಂಗ್ರಹ ಚಿತ್ರ)

ಬೆಂಗಳೂರು: ನಾಳೆ ಮೇ 10ಕ್ಕೆ ವಿಧಾನಸಭೆ ಚುನಾವಣೆಯಲ್ಲಿ ಮತ ಚಲಾಯಿಸಿದವರು ಶಾಯಿಯ ಗುರುತು ತೋರಿಸಿದರೆ ಉಚಿತ ತಿಂಡಿ ತಿನಿಸುಗಳನ್ನು ವಿತರಿಸುವುದಾಗಿ ಅನೇಕ ಹೊಟೇಲ್ ಗಳು ಘೋಷಿಸಿಕೊಂಡಿದ್ದವು. ಈ ಬಗ್ಗೆ ಪ್ರಕಟಣೆ ಹೊರಡಿಸಿರುವುದು ಈಗಾಗಲೇ ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಹರಿದಾಡುತ್ತಿವೆ.

ಇದನ್ನು ಗಂಭೀರವಾಗಿ ಪರಿಗಣಿಸಿರುವ ಚುನಾವಣಾ ಆಯೋಗ ಬ್ರೇಕ್ ಹಾಕಲು ಮುಂದಾಗಿದೆ. ಮತ ಚಲಾಯಿಸಿದರೆ ನಾಗರಿಕರಿಗೆ ಉಚಿತ ತಿಂಡಿ-ತೀರ್ಥಗಳನ್ನು ನೀಡುತ್ತೇವೆ ಎಂದು ಹೇಳುವುದು ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆ. ನಾಳೆಯವರೆಗೆ ನೀತಿ ಸಂಹಿತೆ ಜಾರಿಯಲ್ಲಿದ್ದು ಗಮನಕ್ಕೆ ಬಂದರೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿ ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com