ಮೈಸೂರು: ಸಿಯಾಚಿನ್‌ನಲ್ಲಿರುವ ಸೈನಿಕರಿಗೆ ತಾಜಾ ಆಹಾರ ಪೂರೈಸಲು 'ಆಂಟಿಫ್ರೀಜ್' ಕಂಡುಹಿಡಿದ ವಿಜ್ಞಾನಿಗಳು

ಮೈಸೂರು ಮೂಲದ ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯದ(DFRL) ವಿಜ್ಞಾನಿಗಳು ಸಿಯಾಚಿನ್‌ನಲ್ಲಿರುವ ಸೈನಿಕರಿಗೆ ತಾಜಾ ಆಹಾರ ಪೂರೈಸಲು "ಆಂಟಿಫ್ರೀಜ್ ಕಂಟೇನರ್" ತಂತ್ರಜ್ಞಾನವನ್ನು ಕಂಡುಹಿಡಿದಿದ್ದಾರೆ...
ಆಂಟಿಫ್ರೀಜ್
ಆಂಟಿಫ್ರೀಜ್

ಮೈಸೂರು: ಮೈಸೂರು ಮೂಲದ ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯದ(DFRL) ವಿಜ್ಞಾನಿಗಳು ಸಿಯಾಚಿನ್‌ನಲ್ಲಿರುವ ಸೈನಿಕರಿಗೆ ತಾಜಾ ಆಹಾರ ಪೂರೈಸಲು "ಆಂಟಿಫ್ರೀಜ್ ಕಂಟೇನರ್" ತಂತ್ರಜ್ಞಾನವನ್ನು ಕಂಡುಹಿಡಿದಿದ್ದಾರೆ. ಇದು ಎತ್ತರದ ಪ್ರದೇಶಗಳಲ್ಲಿ ಸಶಸ್ತ್ರ ಪಡೆಗಳಿಗೆ "ರಾಕ್-ಹಾರ್ಡ್" ಮೊಟ್ಟೆಗಳು, "ಜ್ಯೂಸ್ ಬ್ರಿಕ್ಸ್" ಮತ್ತು ಹೆಪ್ಪುಗಟ್ಟಿದ ಹಣ್ಣುಗಳು ಹಾಗೂ ತರಕಾರಿಗಳ ಸಮಸ್ಯೆಯನ್ನು ನಿಭಾಯಿಸಲು ಸಹಾಯ ಮಾಡುತ್ತದೆ. 

ಡಿಆರ್‌ಎಫ್‌ಎಲ್ ನಿರ್ದೇಶಕ ಡಾ.ಅನಿಲ್ ದತ್ ಸೆಮ್ವಾಲ್ ಅವರ ಮಾರ್ಗದರ್ಶನದಲ್ಲಿ ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದೆ. ಎಲ್ಲವೂ ಡಿಆರ್‌ಎಫ್‌ಎಲ್ ಯೋಜನೆಗಳ ಪ್ರಕಾರ ನಡೆದರೆ, ಈ ವರ್ಷವೇ ಅದನ್ನು ಕಾರ್ಯಗತಗೊಳಿಸಲಾಗುತ್ತದೆ.

ಸಿಯಾಚಿನ್‌ನಲ್ಲಿ ನಿಯೋಜಿಸಲಾದ ಸೈನಿಕರು "ರಾಕ್-ಹಾರ್ಡ್" ಮೊಟ್ಟೆಗಳು, "ಟೊಮ್ಯಾಟೊ" ಮತ್ತು "ಜ್ಯೂಸ್ ಬ್ರಿಕ್ಸ್"ಗಳನ್ನು ಒಡೆಯುವ ವೀಡಿಯೊಗಳು ಕೆಲವು ವರ್ಷಗಳ ಹಿಂದೆ ವೈರಲ್ ಆದ ನಂತರ, ಡಿಎಫ್‌ಆರ್‌ಎಲ್ ವಿಜ್ಞಾನಿಗಳು ಈ ತಂತ್ರಜ್ಞಾನದ ಮೇಲೆ ಕೆಲಸ ಮಾಡಲು ಆರಂಭಿಸಿದರು.

“ಈ ಆಂಟಿಫ್ರೀಜ್ ಇನ್ಸುಲೇಟೆಡ್ ಕಂಟೇನರ್‌ನೊಂದಿಗೆ, ಹಣ್ಣುಗಳು ಮತ್ತು ತರಕಾರಿಗಳನ್ನು ಸಾಗಿಸಬಹುದು ಅಥವಾ ಸಂಗ್ರಹಿಸಬಹುದು. ಸುಮಾರು 90 ಗಂಟೆಗಳ ಕಾಲ ಘನೀಕರಿಸುವ ಮತ್ತು ತಣ್ಣಗಾಗದಂತೆ ತಾಜಾತನವನ್ನು ಉಳಿಸಿಕೊಳ್ಳಬಹುದು. ಈ ಕಂಟೇನರ್‌ ಗೆ ಯಾವುದೇ ವಿದ್ಯುತ್ ಸಂಪರ್ಕದ ಅಗತ್ಯವಿಲ್ಲ ಎಂದು ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ ತಂಡದ ಭಾಗವಾಗಿರುವ ವಿಜ್ಞಾನಿಯೊಬ್ಬರು  ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com