2025ರ ಮೇಯಲ್ಲಿ ಕರ್ನಾಟಕಕ್ಕೆ ಮರಳುತ್ತೇನೆ, ಇಷ್ಟು ವರ್ಷ ನೀವು ಕೊಟ್ಟ ಬೆಂಬಲಕ್ಕೆ ಧನ್ಯವಾದಗಳು: ಸಿಬಿಐ ನೂತನ ನಿರ್ದೇಶಕ ಪ್ರವೀಣ್ ಸೂದ್
ಸದ್ಯದಲ್ಲಿಯೇ ಡಿಜಿ ಮತ್ತು ಐಜಿಪಿ ಹುದ್ದೆಯಿಂದ ನಿರ್ಗಮಿಸಿ ನನ್ನ ಉತ್ತರಾಧಿಕಾರಿಗೆ ಅಧಿಕಾರ ಬಿಟ್ಟುಕೊಟ್ಟು ಮುಂದಿನ ಹುದ್ದೆಗೆ ಹೋಗುತ್ತಿದ್ದೇನೆ ಎಂದು ಸಿಬಿಐ ಮುಂದಿನ ನಿರ್ದೇಶಕರಾಗಿ ನೇಮಕಗೊಂಡಿರುವ ಪ್ರವೀಣ್ ಸೂದ್ ತಿಳಿಸಿದ್ದಾರೆ.
Published: 17th May 2023 11:27 AM | Last Updated: 17th May 2023 11:27 AM | A+A A-

ಪತ್ನಿ ಮತ್ತು ಮಗಳ ಜೊತೆ ಪ್ರವೀಣ್ ಸೂದ್(ಸಂಗ್ರಹ ಚಿತ್ರ)
ಬೆಂಗಳೂರು: ಸದ್ಯದಲ್ಲಿಯೇ ಡಿಜಿ ಮತ್ತು ಐಜಿಪಿ ಹುದ್ದೆಯಿಂದ ನಿರ್ಗಮಿಸಿ ನನ್ನ ಉತ್ತರಾಧಿಕಾರಿಗೆ ಅಧಿಕಾರ ಬಿಟ್ಟುಕೊಟ್ಟು ಮುಂದಿನ ಹುದ್ದೆಗೆ ಹೋಗುತ್ತಿದ್ದೇನೆ ಎಂದು ಸಿಬಿಐ ಮುಂದಿನ ನಿರ್ದೇಶಕರಾಗಿ ನೇಮಕಗೊಂಡಿರುವ ಪ್ರವೀಣ್ ಸೂದ್ ತಿಳಿಸಿದ್ದಾರೆ.
ಈ ಕುರಿತು ಇಂದು ಟ್ವೀಟ್ ಮಾಡಿರುವ ಅವರು, 2020ರಲ್ಲಿ ರಾಜ್ಯದ ಪೊಲೀಸ್ ಮಹಾ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡ ನಂತರ ಈ ರಾಜ್ಯದ ಜನತೆ ಜೊತೆ ಸಂಪರ್ಕ ಹೊಂದಿದ್ದೆ. 2025ರ ಮೇ ತಿಂಗಳವರೆಗೆ ನನಗೆ ಸರ್ಕಾರ ಹೊಸ ಜವಾಬ್ದಾರಿಯನ್ನು ವಹಿಸಿದ್ದು ಅದರ ನಂತರ ಮತ್ತೆ ಕರ್ನಾಟಕಕ್ಕೆ ಮರಳುತ್ತೇನೆ.
ಇದನ್ನೂ ಓದಿ: ಮುಂದಿನ ಸಿಬಿಐ ನಿರ್ದೇಶಕರಾಗಿ ಡಿಜಿಪಿ ಪ್ರವೀಣ್ ಸೂದ್ ನೇಮಕ
ಕಳೆದ ಮೂರೂವರೆ ವರ್ಷಗಳಲ್ಲಿ ನೀವು ಕೊಟ್ಟ ಬೆಂಬಲ, ಸಹಕಾರಗಳಿಗೆ ಧನ್ಯವಾದಗಳು ಎಂದು ಪ್ರವೀಣ್ ಸೂದ್ ಟ್ವೀಟ್ ಮಾಡಿದ್ದಾರೆ.
I will soon be handing over charge to my successor and exiting out of this official handle of DG & IGP Karnataka. I started this handle in Feb 2020 after taking charge and connected with all of you on official matters. Glad to note that more than 1.6 lakh people are following it.
— DGP KARNATAKA (@DgpKarnataka) May 17, 2023