ಇಡಿ ನೊಟೀಸ್: ಕರ್ನಾಟಕದ ಅತಿ ಶ್ರೀಮಂತ ಚುನಾವಣಾ ಅಭ್ಯರ್ಥಿ ಕೆಜಿಎಫ್ ಬಾಬು ಇಂದು ವಿಚಾರಣೆ ಸಾಧ್ಯತೆ

ಕೆಜಿಎಫ್ ಬಾಬು ಎಂದೇ ಖ್ಯಾತರಾಗಿರುವ ಯೂಸುಫ್ ಷರೀಫ್ ಇಂದು ಬುಧವಾರ ದೆಹಲಿಯಲ್ಲಿ ಜಾರಿ ನಿರ್ದೇಶನಾಲಯ(ED) ಮುಂದೆ ವಿಚಾರಣೆಗೆ ಹಾಜರಾಗುವ ಸಾಧ್ಯತೆಯಿದೆ. 
ಕೆಜಿಎಫ್ ಬಾಬು
ಕೆಜಿಎಫ್ ಬಾಬು

ಬೆಂಗಳೂರು/ನವದೆಹಲಿ: ಕೆಜಿಎಫ್ ಬಾಬು ಎಂದೇ ಖ್ಯಾತರಾಗಿರುವ ಯೂಸುಫ್ ಷರೀಫ್ ಇಂದು ಬುಧವಾರ ದೆಹಲಿಯಲ್ಲಿ ಜಾರಿ ನಿರ್ದೇಶನಾಲಯ(ED) ಮುಂದೆ ವಿಚಾರಣೆಗೆ ಹಾಜರಾಗುವ ಸಾಧ್ಯತೆಯಿದೆ. 

ಕಾಂಗ್ರೆಸ್ ನಿಂದ ಅಮಾನತುಗೊಂಡಿರುವ ಯೂಸುಫ್ ಷರೀಫ್ ಅವರಿಗೆ ಜಾರಿ ನಿರ್ದೇಶನಾಲಯ (ED) ಸಮನ್ಸ್ ನೀಡಿದೆ. ಕಾಂಗ್ರೆಸ್ ಟಿಕೆಟ್ ನಿರಾಕರಿಸಿದ ನಂತರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಕರ್ನಾಟಕ ಅತ್ಯಂತ ಶ್ರೀಮಂತ ಅಭ್ಯರ್ಥಿಗಳಲ್ಲೊಬ್ಬರು ಕೆಜಿಎಫ್ ಬಾಬು.

ಕೆಜಿಎಫ್ ಬಾಬು ನಿನ್ನೆ ರಾತ್ರಿ ದೆಹಲಿ ತಲುಪಿದ್ದು, ವಿಚಾರಣೆಗಾಗಿ ಇಡಿ ಮುಂದೆ ಇಂದು ಹಾಜರಾಗುವ ನಿರೀಕ್ಷೆಯಿದೆ. ಇವರು ಚುನಾವಣೆಗೆ ಮುನ್ನ ಆದಾಯ ತೆರಿಗೆ (I-T) ಇಲಾಖೆಯ ಕೆಂಗಣ್ಣಿಗೆ ಗುರಿಯಾಗಿದ್ದರು. ಮತದಾರರನ್ನು ನಗದು ನೀಡಿ ಖರೀದಿಸಲು ಯತ್ನಿಸಿದ ಆರೋಪದ ನಡುವೆಯೇ ಐಟಿ ಅಧಿಕಾರಿಗಳು ಬೆಂಗಳೂರಿನಲ್ಲಿರುವ ಅವರ ನಿವಾಸದ ಮೇಲೆ ದಾಳಿ ನಡೆಸಿ ಮತದಾರರ ಗುರುತು ಚೀಟಿಗಳಲ್ಲದೆ ಬೆಲೆಬಾಳುವ ವಸ್ತುಗಳು ಮತ್ತು ಚೆಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಕೆಜಿಎಫ್ ಬಾಬು ಈ ಬಾರಿ ಚುನಾವಣೆಯಲ್ಲಿ ಚಿಕ್ಕಪೇಟೆ ಕ್ಷೇತ್ರದಿಂದ ಸ್ಪರ್ಧಿಸಿ ಮೂರನೇ ಸ್ಥಾನ ಗಳಿಸಿದ್ದರು. ಅವರು ತಮ್ಮ ಚುನಾವಣಾ ಅಫಿಡವಿಟ್‌ನಲ್ಲಿ 1,600 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಘೋಷಿಸಿದ್ದರು. ಕೋಲಾರ ಮೂಲದ ಬಾಬು ರೈಲ್ವೇ ಸ್ಕ್ರ್ಯಾಪ್ ಮಾರಾಟ ಮಾಡಿ ಆಗರ್ಭ ಶ್ರೀಮಂತರಾದರು ಎಂದು ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com