ಫ್ಲಾಟ್ ಗಳಿಗೆ ಹೆಚ್ಚಿದ ಬೇಡಿಕೆ: ಏಕಾಏಕಿ ಫ್ಲಾಟ್ ಗಳ ದರ ಏರಿಕೆ ಮಾಡಿದ ಬಿಡಿಎ!

ಸಾರ್ವಜನಿಕರಿಂದ ಬೇಡಿಕೆ ಹೆಚ್ಚಿದ ಹಿನ್ನೆಲೆಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಮೊದಲ ವಸತಿ ಯೋಜನೆಯಲ್ಲಿ ಫ್ಲ್ಯಾಟ್‌ನ ಬೆಲೆ 1 ಕೋಟಿ ರೂ.ಗಿಂತ ಸ್ವಲ್ಪ ಹೆಚ್ಚು ಮಾಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಸಾರ್ವಜನಿಕರಿಂದ ಬೇಡಿಕೆ ಹೆಚ್ಚಿದ ಹಿನ್ನೆಲೆಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಮೊದಲ ವಸತಿ ಯೋಜನೆಯಲ್ಲಿ ಫ್ಲ್ಯಾಟ್‌ನ ಬೆಲೆ 1 ಕೋಟಿ ರೂ.ಗಿಂತ ಸ್ವಲ್ಪ ಹೆಚ್ಚು ಮಾಡಿದೆ.

ನಾಗರಭಾವಿಯ ಚಂದ್ರಾ ಲೇಔಟ್‌ನಲ್ಲಿ ಒಟ್ಟು ಮೂರು ಕೊಠಡಿಗಳ 120 ಫ್ಲಾಟ್‌ಗಳು ಸಿದ್ಧವಾಗಿವೆ. ಖರೀದಿಸಲು ಆಸಕ್ತಿ ತೋರಿದವರಿಗೆ ಬುಕ್ ಮಾಡಲು ಸಿಬ್ಬಂದಿಗೆ ಸೂಚಿಸಲಾಗಿದೆ.

ಏಪ್ರಿಲ್ 1 ರಿಂದ ಫ್ಲಾಟ್‌ಗಳ ಮಾರಾಟ ಪ್ರಾರಂಭವಾಗಿದೆ ಎಂದು ಹಿರಿಯ ಬಿಡಿಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರತಿ ಫ್ಲಾಟ್‌ನ ಮೂಲ ದರ 1.04 ಕೋಟಿ ರೂ., ಜೊತೆಗೆ ಕಾರ್ ಪಾರ್ಕಿಂಗ್‌ಗೆ 2.5 ಲಕ್ಷ ಮತ್ತು ನೀರು ಮತ್ತು ನೈರ್ಮಲ್ಯ ಸಂಪರ್ಕಗಳಿಗೆ ಸುಮಾರು 1.5 ಲಕ್ಷ ರೂ. ನಿಗದಿಮಾಡಲಾಗಿದೆ. 10 ಅಂತಸ್ತಿದ್ದು ಪ್ರತಿ ಮಹಡಿಯಲ್ಲಿ 12 ಫ್ಲಾಟ್‌ಗಳಿವೆ.

ನಾವು ಈಗಾಗಲೇ ವೈಯಕ್ತಿಕ ಖರೀದಿದಾರರಿಗೆ ಯೋಜಿಸಲಾದ 84 ಫ್ಲಾಟ್‌ಗಳಲ್ಲಿ 19 ಪ್ಲಾಟ್ ಮಾರಾಟ ಮಾಡಿದ್ದೇವೆ. ಇದಲ್ಲದೆ, ಕೆನರಾ ಬ್ಯಾಂಕ್ ತನ್ನ ಸಿಬ್ಬಂದಿಗಾಗಿ 12 ಫ್ಲಾಟ್‌ಗಳನ್ನು ಬುಕ್ ಮಾಡಿದೆ, ಅದನ್ನು ನಾವು ಬೃಹತ್ ಬುಕಿಂಗ್ ಎಂದು ವರ್ಗೀಕರಿಸುತ್ತೇವೆ.

ಅದೇ ರೀತಿ ಮತ್ತಿಬ್ಬರು ಪಾರ್ಟಿಗಳು ಬೃಹತ್ ಖರೀದಿಗೆ ಆಸಕ್ತಿ ತೋರಿಸಿವೆ ಎಂದು ಅವರು ಹೇಳಿದ್ದಾರೆ. ''ಒಟ್ಟಾರೆ ಶೇಕಡಾ 25ರಷ್ಟು ಫ್ಲಾಟ್‌ಗಳು ಮಾರಾಟವಾಗಿವೆ. ಪ್ರತಿದಿನವೂ  ಹಲವು ವಿಚಾರಣೆ ಕರೆಗಳುಬರುತ್ತಿವೆ ಮತ್ತು ಶೀಘ್ರದಲ್ಲೇ ಸಂಪೂರ್ಣ ಮಾರಾಟವನ್ನು ಪೂರ್ಣಗೊಳಿಸಲು ನಾವು ಬಯಸಿದ್ದೇವೆ ಎಂದು ಅವರು ಹೇಳಿದರು.

ವಸತಿ ಯೋಜನೆಯು ನಾಯಂಡಹಳ್ಳಿ ಮೆಟ್ರೋ ನಿಲ್ದಾಣದ 1 ಕಿ.ಮೀ ವ್ಯಾಪ್ತಿಯಲ್ಲಿ ಮತ್ತು ಹೊರವರ್ತುಲ ರಸ್ತೆಗೆ ಹೊಂದಿಕೊಂಡಿರುವುದು  ದೊಡ್ಡ ಪ್ಲಸ್ ಪಾಯಿಂಟ್ ಎಂದು ಸಾಬೀತಾಗಿದೆ ಎಂದು ಇನ್ನೊಬ್ಬ ಅಧಿಕಾರಿ ತಿಳಿಸಿದ್ದಾರೆ. ದುರ್ಗಾ ಪರಮೇಶ್ವರಿ ದೇವಸ್ಥಾನವು ಅಪಾರ್ಟ್ಮೆಂಟ್ ಎದುರು ಇದೆ. ಮೂರು ಉದ್ಯಾನವನಗಳು ಸಹ ಹತ್ತಿರದಲ್ಲಿವೆ ಮತ್ತೊಬ್ಬ ಅಧಿಕಾರಿ ಹೇಳಿದರು.

ಸಾಮಾನ್ಯ ಸೌಕರ್ಯಗಳ ಜೊತೆಗೆ, ಅಪಾರ್ಟ್ ಮೆಂಟ್ ನಲ್ಲಿ ಆಂತರಿಕ ಜಿಮ್ ಮತ್ತು ಒಳಾಂಗಣ ರಿಕ್ರಿಯೇಷನ್ ​​ಕ್ಲಬ್  ಹೊಂದಿದೆ. ಪಾರ್ಕಿಂಗ್ ಜಾಗದಲ್ಲಿ ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಪಾಯಿಂಟ್‌ಗಳನ್ನು ಸಹ ಒದಗಿಸಲಾಗಿದೆ. ಅಪಾರ್ಟ್‌ಮೆಂಟ್‌ನ ಸುತ್ತಲಿನ 30-ಅಡಿ ಜಾಗವನ್ನು ಅಗ್ನಿ ಸುರಕ್ಷತಾ ಮಾನದಂಡಗಳಿಗೆ ಅನುಗುಣವಾಗಿ ನಿರ್ಮಿಸಲಾಗಿದೆ ಎಂದು ಪ್ರಬಾರಿ ಎಂಜಿನೀಯರ್ ಒಬ್ಬರು ತಿಳಿಸಿದ್ದಾರೆ.

ಈ ಫ್ಲಾಟ್‌ಗಳ ನರ್ಮಾಣ ಹಿಂದಿನ ವಸತಿ ಯೋಜನೆಗಳಿಗಿಂತ ದುಪ್ಪಟ್ಟು ವೆಚ್ಚವಾಗಿದೆ. ಹಿಂದೆ, ಆಲೂರ್ ವಸತಿ ಯೋಜನೆಯಲ್ಲಿ ಅದರ 3 ಬಿಎಚ್ ಕೆ ಡ್ಯುಪ್ಲೆಕ್ಸ್ ಮನೆಗಳಿಗೆ 50 ಲಕ್ಷ ರೂ.ಗಳಷ್ಟಿತ್ತು, ಆದರೆ ವಳಗೇರಹಳ್ಳಿ ಹಂತ-VI ನಲ್ಲಿರುವ 2ಬಿಎಚ್ ಕೆ ಫ್ಲಾಟ್‌ಗಳ ಬೆಲೆ 44 ಲಕ್ಷ  ರು ಗಳಿಗೆ ಮಾರಾಟವಾಯಿತು ಎಂದು ತಿಳಿಸಿದ್ದಾರೆ. 1 ಕೋಟಿಗಿಂತ ಹೆಚ್ಚಿನ ವೆಚ್ಚದ ಫ್ಲಾಟ್ ಗಳು ಹುಣ್ಣಿಗೆರೆಯಲ್ಲಿವೆ, ಇವು ಮನೆಗಳು ಮತ್ತು ಫ್ಲಾಟ್‌ಗಳಲ್ಲ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com