ಹಸಿರು ಮತ್ತು ನೇರಳೆ ಮೆಟ್ರೋ ಲೈನ್: ಪ್ರತಿ 3 ರಿಂದ 3.5 ನಿಮಿಷಕ್ಕೊಂದು ರೈಲು ಸದ್ಯದಲ್ಲೆ

ಮೆಟ್ರೋ ಹಸಿರು ಮತ್ತು ನೇರಳೆ ಲೈನ್ ನ ನಡುವೆ ಕಾಯುವಿಕೆ ಅಂತರ 3.5 ರಿಂದ 3 ನಿಮಿಷಕ್ಕೆ ಇಳಿಕೆಯಾಗಲಿದೆ. 
ಮೆಟ್ರೋ ರೈಲು
ಮೆಟ್ರೋ ರೈಲು

ಬೆಂಗಳೂರು: ಮೆಟ್ರೋ ಹಸಿರು ಮತ್ತು ನೇರಳೆ ಲೈನ್ ನ ಇನ್ನು ಮುಂದೆ 3-3.5 ನಿಮಿಷಗಳಿಗೆ ಒಂದು ರೈಲು ಸಂಚರಿಸಲಿದ್ದು, ಕಾಯುವಿಕೆ ಕಡಿಮೆಯಾಗಲಿದೆ.

ಬಿಎಂಆರ್ ಸಿಎಲ್ ಗೆ ಬಹುನಿರೀಕ್ಷಿತ ಹೊಸ ರೈಲುಗಳ 36 ಹೊಸ ಸೆಟ್ ಗಳು ಹಂತ ಹಂತವಾಗಿ ಲಭ್ಯವಾಗಲಿದ್ದು, ಈ ಪ್ರಕ್ರಿಯೆ ಸದ್ಯದಲ್ಲೇ ಪೂರ್ಣಗೊಂಡು, ಕಾಯುವಿಕೆ ಅಂತರವೂ ಕಡಿಮೆಯಾಗಲಿದೆ.
 
ಕೋಲ್ಕತ್ತಾ ಮೂಲದ Titagarh Wagon Limited (TWL) ಚೀನೀ ಸಂಸ್ಥೆ CRRC ಕಾರ್ಪೊರೇಷನ್ ಲಿಮಿಟೆಡ್‌ ನೊಂದಿಗೆ ಪಾಲುದಾರಿಕೆ ಹೊಂದಿದ್ದು, ಶೇ.90 ರಷ್ಟನ್ನು ಪೂರೈಸುತ್ತದೆ ಹಾಗೂ ಅದರ ಅಂಗಸಂಸ್ಥೆಯು ಆರಂಭಿಕ ಒಪ್ಪಂದವನ್ನು ಪಡೆದುಕೊಂಡಿದೆ.

CRRC ಎರಡು ಮಾದರಿ ರೈಲು ಸೆಟ್‌ಗಳನ್ನು ಪೂರೈಸುತ್ತದೆ, ಇದನ್ನು ಪರೀಕ್ಷಾ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಮೊದಲನೆಯದನ್ನು ಆಗಸ್ಟ್ ಅಂತ್ಯದ ವೇಳೆಗೆ ಅಥವಾ ಸೆಪ್ಟೆಂಬರ್ ಆರಂಭದಲ್ಲಿ ಲಭ್ಯವಾಗಲಿದೆ ಎಂದು ಮೂಲಗಳು ತಿಳಿಸಿವೆ. 216 ಕೋಚ್‌ಗಳ ಪೂರೈಕೆಗಾಗಿ 1,578 ಕೋಟಿ ರೂ.ಗಳ ಒಪ್ಪಂದಕ್ಕೆ ಡಿಸೆಂಬರ್ 2019 ರಲ್ಲಿ ಸಿಆರ್‌ಸಿಸಿ ಹಾಗೂ ಅದರ ಅಂಗಸಂಸ್ಥೆಯಾದ ನಾನ್‌ಜಿಂಗ್ ಪುಜೆನ್ ಕಂ. ಲಿಮಿಟೆಡ್‌ನೊಂದಿಗೆ ಸಹಿ ಹಾಕಲಾಗಿತ್ತು.

ಈ ಆರು ಕೋಚ್ ಸೆಟ್‌ಗಳಲ್ಲಿ ಇಪ್ಪತ್ತೊಂದು ಡಿಸ್ಟೆನ್ಸ್ ಟು ಗೋ (DTG) ಕೋಚ್‌ಗಳಾಗಿದ್ದು, ಇವುಗಳನ್ನು ಸರ್ಕ್ಯೂಟ್‌ಗಳ ಮೂಲಕ ಟ್ರ್ಯಾಕ್ ಮಾಡಬಹುದಾಗಿದೆ. ಇನ್ನು 15 ರೇಡಿಯೋ ಆಧಾರಿತ ಸಂವಹನವನ್ನು ಅವಲಂಬಿಸಿರುವ ಸಂವಹನ-ಆಧಾರಿತ ರೈಲು ನಿಯಂತ್ರಣ (CBTC) ಸೆಟ್‌ಗಳಾಗಿವೆ.

“ಸಿಆರ್‌ಆರ್‌ಸಿ ಪೂರೈಸುವ ಮೊದಲ ಮಾದರಿಯ DTG ರೈಲು ಸೆಟ್ ನವೆಂಬರ್‌ನಲ್ಲಿ ಪರೀಕ್ಷೆಗೊಳಪಡುತ್ತದೆ. ಉಳಿದವುಗಳನ್ನು ಮಾರ್ಚ್ 2024 ರ ನಂತರ TWL ಸಂಸ್ಥೆ  ಒದಗಿಸುತ್ತದೆ. ಬೈಯ್ಯಪ್ಪನಹಳ್ಳಿ-ಕೆಂಗೇರಿ ನಡುವೆ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸುವ ಅವಧಿಯಲ್ಲಿ ಪ್ರತಿ 4.5 ನಿಮಿಷಕ್ಕೊಂದು ರೈಲು ನಿಲ್ದಾಣಕ್ಕೆ ಆಗಮಿಸುತ್ತಿದೆ, ಹಾಗೂ ಹಸಿರು ಲೈನ್ ನಲ್ಲಿ (ನಾಗಸಂದ್ರ-ರೇಷ್ಮೆ ಇನ್ಸ್ಟಿಟ್ಯೂಟ್) ಮಾರ್ಗದಲ್ಲಿ ಪ್ರತಿ 5 ನಿಮಿಷಕ್ಕೆ ಒಂದು ರೈಲು ಸಂಚರಿಸುತ್ತಿದೆ.

ಮುಂಬರುವ ಕೋಚ್ ಗಳ ಮೂಲಕ ಹೆಚ್ಚಿನ ಕೋಚ್ ಗಳು ಬಂದಂತೆ, ಎರಡು ರೈಲುಗಳ ನಡುವಿನ ಸಮಯದ ಅಂತರವನ್ನು, ನೇರಳೆ ಮಾರ್ಗದಲ್ಲಿ 3 ನಿಮಿಷ ಹಾಗೂ ಹಸಿರು ಮಾರ್ಗದಲ್ಲಿ 3.5 ನಿಮಿಷಕ್ಕೆ ನಿಗದಿಪಡಿಸಲಾಗುತ್ತದೆ ಎಂದು ಮೆಟ್ರೋ ಸಂಸ್ಥೆಯ ಮೂಲಗಳು ತಿಳಿಸಿವೆ.

ಆರ್ ಬಿ ರಸ್ತೆ- ಬೊಮ್ಮಸಂದ್ರ ಲೈನ್ (ರೀಚ್ 5)  ನಡುವೆ 15 ಸಿಬಿಟಿಸಿ ರೈಲುಗಳನ್ನು ಪರಿಚಯಿಸಲಾಗುತ್ತಿದ್ದು, ಡಿಸೆಂಬರ್ ವೇಳೆಗೆ ಕಾರ್ಯಾರಂಭ ಮಾಡಲಿದೆ.  ಮೊದಲ ಟ್ರೈನ್ ಸೆಟ್ ಪೂರೈಕೆ ಮಾಡಿದ ಬಳಿಕ, ಮುಂದಿನ 7 ತಿಂಗಳಲ್ಲಿ ಎರಡು ಸೆಟ್ ಗಳು ಪೂರೈಕೆಯಾಗಲಿದೆ. ಈ ಬಳಿಕ ಡಿಟಿಜಿ ಪೂರೈಕೆ ಆರಂಭವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೆಟ್ರೋ ಹಂತ-I ರ ಪ್ರಗತಿ ಪರಿಶೀಲಿಸಿದ ಫ್ರೆಂಚ್ ತಂಡ 

ಬಿಎಂಆರ್‌ಸಿಎಲ್‌ನ ಮೊದಲ ಹಂತದ ಯೋಜನೆಯ ಪ್ರಗತಿಯನ್ನು ಪರಿಶೀಲಿಸಲು ಫ್ರೆಂಚ್ ಸಾರ್ವಜನಿಕ ಸಂಸ್ಥೆಯಾದ ಏಜೆನ್ಸ್ ಫ್ರಾಂಕೈಸ್ ಡಿ ಡೆವಲಪ್‌ಮೆಂಟ್ (ಎಎಫ್‌ಡಿ) ತಂಡ ಇತ್ತೀಚೆಗೆ ಬೆಂಗಳೂರಿಗೆ ಭೇಟಿ ನೀಡಿತ್ತು. “ತಂಡ ತನ್ನ ಅವಲೋಕನಗಳ ಆಧಾರದ ಮೇಲೆ ವರದಿಯನ್ನು ಸಲ್ಲಿಸಿದೆ. ನಾವು ಅದನ್ನು ಪರಿಶೀಲಿಸುತ್ತಿದ್ದೇವೆ ಎಂದು ಬಿಎಂಆರ್‌ಸಿಎಲ್‌ನ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. AFD I ನೇ ಹಂತಕ್ಕೆ 110 ಮಿಲಿಯನ್ ಯುರೋ (874 ಕೋಟಿ ರೂ) ಮತ್ತು II ನೇ ಹಂತಕ್ಕೆ 200 ಮಿಲಿಯನ್ ಯುರೋಗಳನ್ನು (Rs 1,440 ಕೋಟಿ) BMRCL ಗೆ ಒದಗಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com